ETV Bharat / state

ಕೊರಿಯರ್ ಹೆಸರಲ್ಲಿ ಆನ್​​ಲೈನ್ ದೋಖಾ: 10 ರೂ. ಕಳುಹಿಸಿ ಲಕ್ಷ ಕಳೆದುಕೊಂಡ ಕರಾವಳಿ ವ್ಯಕ್ತಿ - ಕೊರಿಯರ್ ವಂಚನೆ

ಪಾರ್ಸೆಲ್​ವೊಂದರಲ್ಲಿ ಏರಿಯಾ ಪಿನ್ ತಪ್ಪಾಗಿ ನಮೂದಿಸಿರುವುದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಬಳಿಕ ಹಣ ಪಾವತಿಸುತ್ತಿದ್ದಂತೆ ಹಂತ ಹಂತವಾಗಿ ಹಣ ಕಳೆದುಕೊಂಡಿದ್ದಾರೆ.

man-defrauded-1-and-half-lakh-by-name-of-courier-facility
ಕೊರಿಯರ್ ಹೆಸರಲ್ಲಿ ವಂಚನೆ
author img

By

Published : Jun 15, 2021, 9:33 PM IST

ಮಂಗಳೂರು: ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ನಂಬಿಸಿ 10 ರೂ. ಪಾವತಿಸಿದ ಮಂಗಳೂರಿನ ವ್ಯಕ್ತಿಯೊಬ್ಬರು ಬಳಿಕ 1.69 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆ 9339431456 ನಂಬರ್​​​ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯ ಮಾಡಿಕೊಂಡು ಬಳಿಕ ಹಣ ಎಗರಿಸಿದ್ದಾನೆ.

ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್​ವೊಂದರಲ್ಲಿ ಏರಿಯಾ ಪಿನ್ ತಪ್ಪಾಗಿ ನಮೂದಿಸಿರುವುದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ. 10 ರೂ. ಪಾವತಿಸಲು ಲಿಂಕ್​ವೊಂದನ್ನು ಕಳುಹಿಸಿಕೊಟ್ಟಿದ್ದಾನೆ. ಅವನು ಕೊಟ್ಟ ಲಿಂಕ್ ತೆರೆದು ಯುಪಿಐ ಪಿನ್ ನಮೂದಿಸಿ 10 ರೂ. ಪಾವತಿಸಿದ್ದಾರೆ.

ಇಂದು ವ್ಯಕ್ತಿಯ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಕೆನರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ರೂ 1,69,600 ವರ್ಗಾವಣೆಯಾಗಿದೆ. ಈಗ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಓದಿ: ಮರುಳು ಮಾಫಿಯಾವೇ ಮರವೂರು ಸೇತುವೆ ಕುಸಿಯಲು ಕಾರಣ: ಅಭಯಚಂದ್ರ ಜೈನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.