ETV Bharat / state

ಬಂಟ್ವಾಳ: ಅಡುಗೆ ಸಹಾಯಕ ಕೆರೆಗೆ ಹಾರಿ ಆತ್ಮಹತ್ಯೆ - ಮನನೊಂದು ಅಡುಗೆ ಸಹಾಯಕ ಆತ್ಮಹತ್ಯೆ

ಅಳಿಕೆಯಲ್ಲಿ ಅಡುಗೆ ಸಹಾಯಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

bantwal hostel cook commits suicide news
ಅಡುಗೆ ಸಹಾಯಕ ಕೆರೆಗೆ ಹಾರಿ ಆತ್ಮಹತ್ಯೆ
author img

By

Published : Dec 12, 2020, 12:39 PM IST

ಬಂಟ್ವಾಳ: ಅಳಿಕೆಯಲ್ಲಿ ಅಡುಗೆ ಸಹಾಯಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯ ಬೆದ್ರಡ್ಕ ನಿವಾಸಿ ನಾರಾಯಣ ಪಾಟಾಲಿ(55) ಮೃತಪಟ್ಟವರು. ಇವರು ಸ್ಥಳೀಯ ಹಾಸ್ಟೆಲ್​ ಒಂದರಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ತಡರಾತ್ರಿಯಿಂದ ಅವರು ನಾಪತ್ತೆಯಾಗಿದ್ದು, ಅವರನ್ನು ಹುಡುಕಾಡಿದಾಗ ಕೆರೆಯ ಬಳಿ ಅವರ ಚಪ್ಪಲಿ ಪತ್ತೆಯಾಗಿತ್ತು.

ಕೆರೆಯಲ್ಲಿ ಸುಮಾರು ಇಪ್ಪತ್ತೆರಡು ಅಡಿಗಿಂತಲೂ ಅಧಿಕ ನೀರು ತುಂಬಿಕೊಂಡಿದ್ದು, ಫ್ರೆಂಡ್ಸ್ ವಿಟ್ದ ಸಂಘಟನೆಯ ಮುರಳೀಧರ ಮತ್ತು ಹೈದರಾಲಿ ಮೇಗಿನಪೇಟೆ ನೇತೃತ್ವದ ಮುಳುಗು ತಜ್ಞರ ತಂಡ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ನಾರಾಯಣ ಪಾಟಾಲಿ ಕಳೆದ 25 ವರ್ಷಗಳಿಂದ ಮೂರ್ಚೆ ರೋಗದಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಮೂರು ತಿಂಗಳ ಗರ್ಭಿಣಿ ಪತ್ನಿಯನ್ನ ಕೊಂದ ಪತಿ.. ಅನಾಥರಾದ ಮಕ್ಕಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.