ETV Bharat / state

ಭಾರತೀಯ ಚಿಂತನೆಯಲ್ಲಿ ಪುರುಷ ಮಹಿಳೆ ಎಂಬ ಬೇಧ ಭಾವ ಇರಲಿಲ್ಲ: ಮಾಳವಿಕಾ ಅವಿನಾಶ್ - ಸಮಾನತೆಯ ಬದುಕು

ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ನಟಿ ಮಾಳವಿಕಾ ಅವಿನಾಶ್​ ಅವರು ತಿಳಿಸಿದ್ದಾರೆ.

ನಟಿ ಮಾಳವಿಕಾ ಅವಿನಾಶ್​
ನಟಿ ಮಾಳವಿಕಾ ಅವಿನಾಶ್​
author img

By ETV Bharat Karnataka Team

Published : Dec 3, 2023, 11:07 PM IST

ನಟಿ ಮಾಳವಿಕಾ ಅವಿನಾಶ್​

ಪುತ್ತೂರು : ಭಾರತೀಯ ಚಿಂತನೆಯಲ್ಲಿ ವೇದ ಕಾಲದಿಂದಲೂ ಪುರುಷ ಮಹಿಳೆ ಎಂಬ ಬೇಧ ಭಾವ ಇರಲಿಲ್ಲ ಎಂದು ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ತಿಳಿಸಿದ್ದಾರೆ. ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಭವನದಲ್ಲಿ ಭಾನುವಾರ ನಡೆದ ಕೇಶವ ಸ್ಮೃತಿ ಸಂವರ್ಧನ ಸಮಿತಿಯು `ಮಹಿಳೆ: ಹಿಂದೆ, ಇಂದು ಮತ್ತು ನಾಳೆ' ಎಂಬ ವಿಚಾರಧಾರೆಯಡಿ ಯೋಜಿಸಿದ ಪುತ್ತೂರು ಜಿಲ್ಲಾ ಮಹಿಳಾ ಸಮ್ಮೇಳನ `ನಾರಿ ಶಕ್ತಿ ಸಂಗಮ'ದಲ್ಲಿ ಸಮಾರೋಪದಲ್ಲಿ ಪ್ರೇರಣಾ ನುಡಿಗಳನ್ನಾದರು.

ವಿದೇಶಿಯರ ಆಕ್ರಮಣ, ಶೋಷಣೆಯ ಭಯದಿಂದ ಮಹಿಳೆ ಹಿಂದಕ್ಕೆ ಸರಿಯಲಾರಂಭಿಸಿದ್ದಳು. ಇಂತಹ ಶೋಷಣೆಯಿಂದ ಪಾರಾಗಲು ಆತ್ಮಾಹುತಿಯಂತಹ ಭಯಾನಕ ಕೃತ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದಳು. ಅಂತೆಯೇ, ಅನೇಕ ವೀರ ಮಹಿಳೆಯರು ಕ್ಷಾತ್ರ ಪ್ರದರ್ಶನ ಮಾಡಿ ಸಾಹಸವನ್ನೂ ಮೆರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜದ ಸುಧಾರಣೆ ಮಾಡಿದ್ದಾರೆ. ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ನಾಶಪಡಿಸಿ ಸಮಾನತೆಯನ್ನು ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕಿಲ್ಲ ಎಂದು ಮಾಳವಿಕಾ ಅವಿನಾಶ್ ಹೇಳಿದರು.

ಮನುಷ್ಯನ ವಿಕಾಸ ಆತ್ಮದಲ್ಲಿ ಆಗಬೇಕಾಗಿದೆ: ಮೂಲಭೂತ ನಂಬಿಕೆಗಳ ತಳಹದಿಯಲ್ಲಿ ಮನುಷ್ಯ ಬದುಕುತ್ತಾನೆ. ಲಿಂಗ ತಾರತಮ್ಯವಿಲ್ಲದ ಸಮಾನತೆಯ ಬದುಕು ಹಿಂದೂ ಧರ್ಮದ ತಿರುಳು. ಇದು ಅರ್ಧ ನಾರೀಶ್ವರನಲ್ಲೂ ದರ್ಶನವಾಗುತ್ತದೆ. ಮನುಷ್ಯನ ವಿಕಾಸ ಆತ್ಮದಲ್ಲಿ ಆಗಬೇಕಾಗಿದೆ. ಇದು ಹಿಂದೂ ಧರ್ಮದ ಮೂಲೋದ್ದೇಶವೂ ಹೌದು ಎಂದು ತಿಳಿಸಿದ ಅವರು, ಹಿಂದೂ ಧರ್ಮದಲ್ಲಿ ಮಹಿಳೆಯರು ಪುರುಷರಂತೆ ಇರುವ ಅಗತ್ಯವೂ ಇಲ್ಲ. ಪುರುಷರಂತೆ ಜೀವನ ಶೈಲಿಯ ಅನುಕರಣೆಯೂ ಸಲ್ಲದು. ನಮ್ಮ ಮಹಿಳೆಯರಿಗೆ ಸ್ಥಾನಮಾನ ಗಳಿಸುವುದನ್ನು ಹೊರಗಿನವರು ಬಂದು ಹೇಳಿ ಕೊಡಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಭಾ ಕಾರ್ಯಕ್ರಮದ ಮೊದಲು ನಾರೀ ಶಕ್ತಿ ಸಂಗಮಕ್ಕೆ ಚಾಲನೆ ನೀಡಿದ ಹಿರಿಯ ವೈದ್ಯೆ, ಸಮಾಜ ಸೇವಕಿ ಡಾ. ಗೌರಿ ಪೈ ದೀಪ ಪ್ರಜ್ವಲಿಸಿ ಮಹಿಳಾ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕಮಲಾ ಪ್ರಭಾಕರ ಭಟ್, ಡಾ. ಗೌರಿ ಪೈ ಅವರನ್ನು ಗೌರವಿಸಿದರು.

ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷೆ ಡಾ. ಲಕ್ಷ್ಮೀ, ಎನ್. ಪ್ರಸಾದ್, ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿ ಸುಗುಣ, ಸಮ್ಮೇಳನದ ವಿಭಾಗ ಸಹ ಸಂಚಾಲಕರಾದ ಗುಣವತಿ ಕೊಲ್ಲಂತಡ್ಕ, ಶ್ರದ್ಧಾ ರೈ, ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿಯರಾದ ತೇಜಸ್ವಿನಿ ಶೇಖರ್ ಕಟ್ಟಪುಣಿ, ವಿದ್ಯಾಗೌರಿ, ಶಕುಂತಳಾ, ವಿಜಯ ಸರಸ್ವತಿ ಉಪಸ್ಥಿತರಿದ್ದರು.

ಇದನ್ನೂ ಓದಿ : ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹಿಸಿದ ಮಾಳವಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.