ETV Bharat / state

ಅಂಗನವಾಡಿ ಕೇಂದ್ರಗಳಲ್ಲೇ ಎಲ್​ಕೆಜಿ, ಯುಕೆಜಿ ಪ್ರಾರಂಭಿಸಲು ಆಗ್ರಹ - undefined

ರಾಜ್ಯದಲ್ಲಿರುವ ಸುಮಾರು 62 ಸಾವಿರ ಅಂಗನವಾಡಿ ಕೇಂದ್ರಗಳು ಮುಚ್ಚುವ ಭೀತಿಯಲ್ಲಿದೆ‌. ಹೀಗಾಗಿ ಇಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ಎಲ್​ಕೆಜಿ, ಯುಕೆಜಿಗಳನ್ನು ಸರಕಾರಿ ಶಾಲೆಗಳಲ್ಲಿ ಆರಂಭಿಸಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Anganwadi Centers
author img

By

Published : May 25, 2019, 11:02 PM IST

ಮಂಗಳೂರು: ದಾಖಲಾತಿ ಹೆಚ್ಚಿಸುವ ಸಲುವಾಗಿ ಹಾಗೂ ಮಕ್ಕಳನ್ನು ಆಕರ್ಷಿಸಲು ಎಲ್​ಕೆಜಿ, ಯುಕೆಜಿಗಳನ್ನು ಸರಕಾರಿ ಶಾಲೆಗಳಲ್ಲಿ ಆರಂಭಿಸಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಮೇ 17 ರಂದು ಆದೇಶ ಹೊರಡಿಸಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

ರಾಜ್ಯದಲ್ಲಿರುವ ಸುಮಾರು 62 ಸಾವಿರ ಅಂಗನವಾಡಿ ಕೇಂದ್ರಗಳು ಮುಚ್ಚುವ ಭೀತಿಯಲ್ಲಿದೆ‌. ಈ ಕಾರಣಕ್ಕಾಗಿ ಶಿಕ್ಷಣ ಇಲಾಖೆಯ ಈ ಆದೇಶದ ಪ್ರಕಾರ ಮೂರುವರೆ ವರ್ಷದ ಮಕ್ಕಳನ್ನು ಸರಕಾರದ ಶಾಲೆಗಳಲ್ಲಿ ದಾಖಲಾತಿ ಮಾಡುತ್ತೇವೆ. ಈ ಮಕ್ಕಳಿಗೆ ಎಲ್​ಕೆಜಿ, ಯುಕೆಜಿ ಶಿಕ್ಷಣ ನೀಡಲು ಗೌರವಧನದ ಆಧಾರದ ಮೇಲೆ ಎಸ್​ಡಿಎಂಸಿ ಕಮಿಟಿಯ ಮುಖಾಂತರ ವರ್ಷಕ್ಕೆ ಹತ್ತು ತಿಂಗಳ ಕರಾರಿನ ಮೇಲೆ ಒಬ್ಬ ಶಿಕ್ಷಕಿ ಹಾಗೂ ಓರ್ವ ಆಯಾರನ್ನು ನೇಮಿಸಲಾಗುತ್ತದೆ. ಅಂಗನವಾಡಿಯಲ್ಲಿ 3 ರಿಂದ 6 ವರ್ಷದ ಮಕ್ಕಳಿಗೆ ನೀಡುವ ಆಹಾರದಂತೆ ಒಂದು ಮಗುವಿಗೆ 9 ರೂ.ನಂತೆ ಖರ್ಚು ಮಾಡಲಾಗುತ್ತದೆ. ಅಲ್ಲದೆ ಆರೋಗ್ಯ ತಪಾಸಣೆ ಸಹಿತ ಅಂಗನವಾಡಿಯಲ್ಲಿ ಮಕ್ಕಳಗಾಗಿ ಏನು ಮಾಡಲಾಗುತ್ತದೆಯೋ, ಅದನ್ನೇ ಇಲ್ಲಿ ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ ಎಂದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಯವರಿಂದ ಮಾಹಿತಿ

ಈಗಾಗಲೇ ಅಂಗವಾಡಿ ಕೇಂದ್ರಗಳಲ್ಲಿ ಈ ಎಲ್ಲಾ ವ್ಯವಸ್ಥೆಗಳಿದ್ದು, ಸರಕಾರ ಇದಕ್ಕೆ ಪರ್ಯಾಯವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ ಮತ್ತು ಯುಕೆಜಿಗಳನ್ನು ಪ್ರಾರಂಭ ಮಾಡಬೇಕು ಎಂದು ಅವರು ಹೇಳಿದರು‌.

ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಅಂಗನವಾಡಿ ಕಾರಣ ಅಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಕಿಂಡರ್ ಗಾರ್ಡನ್, ಶಿಕ್ಷಣದ ಖಾಸಗೀಕರಣವೇ ಸರಕಾರಿ ಶಾಲೆಗಳ ದಾಖಲಾತಿ ಕೊರತೆಗೆ ಕಾರಣ. ಅಲ್ಲದೆ ಕೊಠಾರಿ ಆಯೋಗ 60 ರ ದಶಕದಲ್ಲೇ ಇದಕ್ಕೊಂದು ರೆಕಮಂಡೇಷನ್​ನ್ನು ಹೊರಡಿಸಿದ್ದಾರೆ. ಅದರ ಪ್ರಕಾರ ನಮ್ಮ ಶಿಕ್ಷಣದಲ್ಲಿ ಸುಧಾರಣೆ ತರಬೇಕಾದರೆ ಒಟ್ಟು ಬಜೆಟ್​ನಲ್ಲಿ 6 ಶೇಕಡಾ ಅನುದಾನವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸಬೇಕು. ಅದೇ ರೀತಿ ವರ್ಷದಲ್ಲಿ ಮಂಡಿಸುವ ಒಟ್ಟು ಬಜೆಟ್​ನಲ್ಲಿ ಶೇಕಡ 10ರಷ್ಟು ಶಿಕ್ಷಣಕ್ಕೆ ಮೀಸಿಲಿರಿಸಬೇಕು. ರಾಜ್ಯ ಸರಕಾರ ತಮ್ಮ ಒಟ್ಟು ಬಜೆಟ್ ನಲ್ಲಿ ಒಟ್ಟು 30% ಅನುದಾನವನ್ನು ಶಿಕ್ಷಣಕ್ಕೆ ಮೀಸಲಿರಿಸಬೇಕು.

ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲಿ ಕೊಡಬೇಕು ಎನ್ನುವುದೇ ನಮ್ಮ ಪ್ರಶ್ನೆ. ಅಂಗನವಾಡಿ ಕೇಂದ್ರದಲ್ಲಿ 3-6 ವರ್ಷದೊಳಗಿನ ಮಕ್ಕಳು ಬರುತ್ತಾರೆ. ಆದರೆ ಅದೇ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ತೆಗೆದುಕೊಂಡು ಹೋದರೆ, ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಆದ್ದರಿಂದ ಸರಕಾರಿ ಶಾಲೆಗಳಲ್ಲಿ ಪ್ರಾರಂಭ ಮಾಡುವ ಎಲ್​ಕೆಜಿ, ಯುಕೆಜಿಗಳನ್ನು‌ ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಿ ಈ ಯೋಜನೆ ಜಾರಿಗೆ ಬಾರದಂತೆ ಹೋರಾಟ ಆರಂಭಿಸಿದ್ದೇವೆ. ಅಲ್ಲದೆ ಎಲ್ಲಾ ಸಂಘಟನೆಗಳು ಒಟ್ಟು ಸೇರಿ ಇದೇ ತಿಂಗಳ 30 ನೇ ತಾರೀಕಿನಂದು ವಿಧಾನಸೌಧ ಚಲೋ ಮಾಡುತ್ತಿದ್ದೇವೆ. ಅಲ್ಲದೆ ಈ ಮೂಲಕ ಜೂನ್ 1ರಿಂದ ಈ ಯೋಜನೆ ಆರಂಭಿಸದಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಸಿಐಟಿಯು ರಾಜ್ಯ ಸಮಿತಿಯ ಸದಸ್ಯ ಶಿವಕುಮಾರ್, ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

Intro:ಮಂಗಳೂರು: ದಾಖಲಾತಿ ಹೆಚ್ಚಿಸುವ ಸಲುವಾಗಿ ಹಾಗೂ ಮಕ್ಕಳನ್ನು ಆಕರ್ಷಿಸಲು ಎಲ್ ಕೆಜಿ ಯುಕೆಜಿಗಳನ್ನು ಸರಕಾರಿ ಶಾಲೆಗಳಲ್ಲಿ ಆರಂಭಿಸಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಮೇ 17ರಂದು ಆದೇಶ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿರುವ ಸುಮಾರು 62 ಸಾವಿರ ಅಂಗನವಾಡಿ ಕೇಂದ್ರಗಳು ಮುಚ್ಚುವ ಭೀತಿಯಲ್ಲಿದೆ‌ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

ಶಿಕ್ಷಣ ಇಲಾಖೆಯ ಈ ಆದೇಶದ ಪ್ರಕಾರ 3.5 ವರ್ಷದ ಮಕ್ಕಳನ್ನು ಸರಕಾರದ ಶಾಲೆಗಳಲ್ಲಿ ದಾಖಲಾತಿ ಮಾಡುತ್ತೇವೆ. ಈ ಮಕ್ಕಳಿಗೆ ಎಲ್ ಕೆಜಿ ಯುಕೆಜಿ ಶಿಕ್ಷಣ ನೀಡಲು ಗೌರವ ಧನದ ಆಧಾರದ ಮೇಲೆ ಎಸ್ ಡಿಎಂಸಿ ಕಮಿಟಿಯ ಮುಖಾಂತರ ವರ್ಷಕ್ಕೆ ಹತ್ತು ತಿಂಗಳ ಕರಾರಿನ ಮೇಲೆ ಒಬ್ಬ ಶಿಕ್ಷಕಿ ಹಾಗೂ ಓರ್ವ ಆಯಾವನ್ನು ನೇಮಿಸಲಾಗುತ್ತದೆ. ಅಂಗನವಾಡಿಯಲ್ಲಿ 3-6 ವರ್ಷದ ಮಕ್ಕಳಿಗೆ ನೀಡುವ ಆಹಾರದಂತೆ ಒಂದು ಮಗುವಿಗೆ 9 ರೂ.ನಂತೆ ಖರ್ಚು ಮಾಡಲಾಗುತ್ತದೆ. ಅಲ್ಲದೆ ಆರೋಗ್ಯ ತಪಾಸಣೆ ಸಹಿತ ಅಂಗನವಾಡಿಯಲ್ಲಿ ಮಕ್ಕಳಗಾಗಿ ಏನು ಮಾಡಲಾಗುತ್ತದೆಯೋ, ಅದನ್ನೇ ಇಲ್ಲಿ ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಈಗಾಗಲೇ ಅಂಗವಾಡಿ ಕೇಂದ್ರಗಳಲ್ಲಿ ಈ ಎಲ್ಲಾ ವ್ಯವಸ್ಥೆಗಳಿದ್ದು, ಸರಕಾರ ಇದಕ್ಕೆ ಪರ್ಯಾಯವಾಗಿ ಈ ವ್ಯವಸ್ಥೆ ಯನ್ನು ಜಾರಿಗೊಳಿಸುತ್ತಿದೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ ಮತ್ತು ಯುಕೆಜಿಗಳನ್ನು ಪ್ರಾರಂಭ ಮಾಡಬೇಕು ಎಂದು ಅವರು ಹೇಳಿದರು‌.

Body:ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಅಂಗನವಾಡಿ ಕಾರಣ ಅಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಕಿಂಡರ್ ಗಾರ್ಡನ್, ಶಿಕ್ಷಣದ ಖಾಸಗೀಕರಣವೇ ಸರಕಾರಿ ಶಾಲೆಗಳ ದಾಖಲಾತಿ ಕೊರತೆಗೆ ಕಾರಣ. ಅಲ್ಲದೆ ಕೊಠಾರಿ ಆಯೋಗ 60 ರ ದಶಕದಲ್ಲೇ ಇದಕ್ಕೊಂದು ರೆಕಮಂಡೇಷನ್ ನ್ನು ಹೊರಡಿಸಿದ್ದಾರೆ. ಅದರ ಪ್ರಕಾರ ನಮ್ಮ ಶಿಕ್ಷಣದಲ್ಲಿ ಸುಧಾರಣೆ ತರಬೇಕಾದರೆ ಒಟ್ಟು ಬಜೆಟ್ ನಲ್ಲಿ 6 ಶೇಕಡಾ ಅನುದಾನವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸಬೇಕು. ಅದೇ ರೀತಿ ವರ್ಷದಲ್ಲಿ ಮಂಡಿಸುವ ಒಟ್ಟು ಬಜೆಟ್ ನಲ್ಲಿ ಶೇಕಡ 10% ಶಿಕ್ಷಣ ಕ್ಕೆ ಮೀಸಿಲಿರಿಸಬೇಕು. ರಾಜ್ಯ ಸರಕಾರ ತಮ್ಮ ಒಟ್ಟು ಬಜೆಟ್ ನಲ್ಲಿ ಒಟ್ಟು 30% ಅನುದಾನವನ್ನು ಶಿಕ್ಷಣಕ್ಕೆ ಮೀಸಲಿರಿಸಬೇಕು. ಅಲ್ಲದೆ ಒಂದೊಂದು ವಿಷಯಕ್ಕೆ ಒಬ್ಬೊಬ್ಬ ಶಿಕ್ಷಕರನ್ನು ಮೀಸಲಿರಿಸಬೇಕು‌. ಆದರೆ ಸರಕಾರ ಜಿಡಿಪಿಯಲ್ಲಿ 6% ಬದಲಾಗಿ 3% ಮಾಡಿದೆ. ರಾಜ್ಯ ಸರಕಾರ 30% ಬದಲಾಗಿ 12% ಕೊಡುತ್ತಿದೆ. ಕೇಂದ್ರ ಸರಕಾರ ಕೂಡಾ ದಿನದಿಂದ ದಿನಕ್ಕೆ ಜಿಡಿಪಿ ಕಡಿಮೆ ಮಾಡುತ್ತಿದೆ. ಈ ಕಾರಣ ಹೇಳಲು ಸಾಧ್ಯವಿಲ್ಲದೆ , ಸುಲಭ ಮಾರ್ಗವನ್ನು ಕಂಡುಕೊಂಡಿದೆ. ಇದರ ಪ್ರಕಾರ ಅಂಗನವಾಡಿಯಲ್ಲಿರುವ ಮಕ್ಕಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದು ಸರಕಾರ ಹೇಳುತ್ತಿದೆ ಎಂದು ವರಲಕ್ಷ್ಮೀ ಹೇಳಿದರು.

ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲಿ ಕೊಡಬೇಕು ಎನ್ನುವುದೇ ನಮ್ಮ ಪ್ರಶ್ನೆ. ಅಂಗನವಾಡಿ ಕೇಂದ್ರದಲ್ಲಿ 3-6 ವರ್ಷದೊಳಗಿನ ಮಕ್ಕಳು ಬರುತ್ತಾರೆ. ಆದರೆ ಅದೇ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ತೆಗೆದುಕೊಂಡು ಹೋದರೆ, ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಆದ್ದರಿಂದ ಸರಕಾರಿ ಶಾಲೆಗಳಲ್ಲಿ ಪ್ರಾರಂಭ ಮಾಡುವ ಎಲ್ ಕೆಜಿ ಯುಕೆಜಿಗಳನ್ನು‌ ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಿ. ಈ ಯೋಜನೆ ಜಾರಿಗೆ ಬಾರದಂತೆ ಹೋರಾಟ ಆರಂಭಿಸಿದ್ದೇವೆ. ಅಲ್ಲದೆ ಎಲ್ಲಾ ಸಂಘಟನೆಗಳು ಒಟ್ಟು ಸೇರಿ ಇದೇ ತಿಂಗಳ 30 ನೇ ತಾರೀಕಿನಂದು ವಿಧಾನಸೌಧ ಚಲೋ ಮಾಡುತ್ತಿದ್ದೇವೆ. ಅಲ್ಲದೆ ಈ ಮೂಲಕ ಜೂನ್ 1ರಿಂದ ಈ ಯೋಜನೆ ಆರಂಭಿಸದಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭ ಸಿಐಟಿಯು ರಾಜ್ಯ ಸಮಿತಿಯ ಸದಸ್ಯ ಶಿವಕುಮಾರ್, ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.