ETV Bharat / state

ಸಾಹಿತ್ಯದ ನಡುವೆ ಪಂಥ ತರುವುದನ್ನು ನಾನು ಖಂಡಿಸುತ್ತೇನೆ: ಮಾಯಣ್ಣ

ಸಾಹಿತ್ಯಕ್ಕೆ ಯಾವುದೇ ಮತ, ಪಂಗಡ, ಧರ್ಮ, ಪಂಥಗಳಿಲ್ಲ. ಸಾಹಿತ್ಯದ ನಡುವೆ ಪಂಥವನ್ನು ತರುವುದನ್ನು ನಾನು ಖಂಡಿಸುತ್ತೇನೆ. ದೇವರನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಯಣ್ಣ ಅಭಿಪ್ರಾಯಪಟ್ಟರು.

Literature has no religion: Mayanna
ಸಾಹಿತ್ಯದ ನಡುವೆ ಪಂಥವನ್ನು ತರುವುದನ್ನು ನಾನು ಖಂಡಿಸುತ್ತೇನೆ: ಮಾಯಣ್ಣ
author img

By

Published : Mar 16, 2021, 8:53 PM IST

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ ಇನ್ನೂ ಜನರ ಬಳಿಗೆ ತಲುಪಿಲ್ಲ. ಕಸಾಪ ಸದೃಢ ಮತ್ತು ಶಕ್ತಿ ಕೇಂದ್ರವಾಗಿಸಬೇಕು ಹಾಗೂ ಜನ ಸಾಮಾನ್ಯರ ಬಳಿಗೆ ತಲುಪಬೇಕು. ಈ ಉದ್ದೇಶವನ್ನು ಮುಂದಿಟ್ಟುಕೊಂಡು ಈ ಬಾರಿ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಯಣ್ಣ ತಿಳಿಸಿದರು.

ಕಸಾಪ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಆಯ್ಕೆ ಚುನಾವಣೆಯು ಮೇ 9 ರಂದು ನಡೆಯಲಿದೆ. ಚುನಾವಣೆಯ ಪ್ರಚಾರಾರ್ಥವಾಗಿ ಮಂಗಳವಾರ ಪುತ್ತೂರಿಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದೆ ಡಾ. ಶಿವರಾಮ ಕಾರಂತ, ಕುವೆಂಪು ಇನ್ನಿತರ ಮೇರು ಸಾಹಿತಿಗಳು ಸಾಹಿತ್ಯದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ಆದರೆ ಬಳಿಕ ಯಾರೂ ಅಂತಹ ಚರಿತ್ರೆ ಸೃಷ್ಟಿಸಿಲ್ಲ.

ಸಾಹಿತ್ಯದ ನಡುವೆ ಪಂಥವನ್ನು ತರುವುದನ್ನು ನಾನು ಖಂಡಿಸುತ್ತೇನೆ: ಮಾಯಣ್ಣ

ಯುವ ಸಮುದಾಯವನ್ನು ಸಾಹಿತ್ಯದ ಸೃಷ್ಟಿಕರ್ತರನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ 100 ಮಂದಿ ಯುವಕರನ್ನು ಆಯ್ಕೆ ಮಾಡಿ ಅವರಲ್ಲಿ ಸಾಹಿತ್ಯದ ಒಲವು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಸಾಹಿತ್ಯಕ್ಕೆ ಯಾವುದೇ ಮತ, ಪಂಗಡ, ಧರ್ಮ ಪಂಥಗಳಿಲ್ಲ. ಸಾಹಿತ್ಯದ ನಡುವೆ ಪಂಥವನ್ನು ತರುವುದನ್ನು ನಾನು ಖಂಡಿಸುತ್ತೇನೆ.

ದೇವರನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರವಾಗಿದೆ. ಸಾಹಿತಿಗಳಲ್ಲಿ ಪಂಥದ ಮನಸ್ಥಿತಿ ಬದಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸುಮಾರು ಸಾವಿರ ಯುವಕರ ತಂಡವನ್ನು ಮಾಡಿಕೊಂಡು ಅವರಲ್ಲಿ ಮತ, ಪಂಥ, ಧರ್ಮವನ್ನು ಮೀರಿದ ವಿಚಾರಗಳನ್ನು ಬೆಳೆಸಿ ಸಮಾನ ಮನಸ್ಕರ ತಂಡವನ್ನು ಸೃಷ್ಟಿಸುತ್ತೇನೆ ಎಂದರು.

ಕನ್ನಡದ ಬೆಳವಣಿಗೆಗಾಗಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ 'ಕನ್ನಡ-ಭವನ' ನಿರ್ಮಾಣ ಮಾಡಿ ಅದರಲ್ಲಿ ಕನ್ನಡಿಗರಿಗೆ ಒಂದೇ ಸೂರಿನಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಾಗುವಂತೆ ರೂಪುರೇಶೆ ಮಾಡುತ್ತೇನೆ. ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕನ್ನಡಪರ ಕಾರ್ಯಕ್ರಮಗಳಿಗೆ ಸರ್ಕಾರದ ಮುಂದೆ ನಿರಂತರ ಅಂಗಲಾಚುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಏಕಕಾಲದಲ್ಲಿ 3 ಸಾವಿರ ಕೋಟಿ ರೂ. ಅನುದಾನ ಇದಕ್ಕಾಗಿ ಮೀಸಲಿರಿಸುವಂತೆ ಮಾಡಿ ಅದನ್ನು ಠೇವಣಿ ರೂಪದಲ್ಲಿರಿಸಿ ಅದರ ಬಡ್ಡಿಯಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ನಾನು ಯೋಜನೆ ರೂಪಿಸಿದ್ದೇನೆ. ಇದಕ್ಕಾಗಿ ನೀಲ ನಕಾಶೆ ತಯಾರಿಸಿ ಅದನ್ನು ಸರ್ಕಾರದ ಮುಂದಿರಿಸಿ ಅನುಮೋದನೆ ಪಡೆದುಕೊಂಡು ಕಸಾಪಕ್ಕೆ ಸ್ವಯಂ ಆದಾಯ ರೂಪಿಸುವ ಯೋಜನೆ ನನ್ನ ಮುಂದಿದೆ ಎಂದರು.

ಕನ್ನಡ ನಾಡನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಆಳಿದ, ಸ್ವಾತಂತ್ರ್ಯೋತ್ತರದಲ್ಲಿ ಮುಖ್ಯಮಂತ್ರಿಗಳಾಗಿ ಕನ್ನಡ ನಾಡು ನುಡಿಯ ಬೆಳವಣಿಗೆಗೆ ಕೊಡುಗೆ ನೀಡಿದ, ಕನ್ನಡ ಪರ ಹೋರಾಟಗಾರರ ಬದುಕು ಸಾಧನೆಯ ವಿವರಗಳನ್ನು ಒಳಗೊಂಡ 'ವಂಶ ವೃಕ್ಷ' ವಿವರಗಳನ್ನು ಕೆತ್ತನೆ, ಪುತ್ಥಳಿ, ಶಾಸನಗಳ ರೂಪದಲ್ಲಿ ರಚಿಸುವ ಚಿಂತನೆಯಿದೆ. ಇದಕ್ಕಾಗಿ 108 ಎಕರೆ ಪ್ರದೇಶವನ್ನು ಮೀಸಲಿರಿಸುವ ಬಗ್ಗೆ ಪ್ರಯತ್ನ ನಡೆಸುತ್ತೇನೆ. ಅಲ್ಲದೇ ಅದಕ್ಕಾಗಿ ಪ್ರತ್ಯೇಕ ರೂ. 250 ಕೋಟಿ ಮೀಸಲಿಟ್ಟು ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುತ್ತೇನೆ. ಇವೆಲ್ಲವೂ ಅನುಷ್ಠಾನದ ಅವಕಾಶಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಕಸಾಪ ಸದಸ್ಯರು, ಸಾಹಿತಿಗಳು, ಕನ್ನಡ ಪರ ಬೆಂಬಲಿಗರು ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಹಕಾರ ನೀಡಬೇಕಾಗಿದೆ ಎಂದರು.

ಈ ಸಂದರ್ಭ ರಾಜ್ಯ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ತ್ಯಾಗರಾಜ್, ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್, ನಿಕಟಪೂರ್ವ ಪುತ್ತೂರು ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾರಾಯಣ ಭಟ್ ಆಲಂಕಾರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.