ಸುಳ್ಯ (ದಕ್ಷಿಣ ಕನ್ನಡ): ಸಂಜೆ 4:40 ರ ಸುಮಾರಿಗೆ ಸುಳ್ಯದಲ್ಲಿ ಲಘು ಭೂಕಂಪನದ ಅನುಭವ ಆಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಮೊದಲ ಭೂಕಂಪನ ಸಂಭವಿಸಿತ್ತು. ಮಡಿಕೇರಿ ಮತ್ತು ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬುವಿನಿಂದ 5.2 ಕಿಮೀ ವಾಯುವ್ಯ ದಿಕ್ಕಿನಲ್ಲಿ, ಭೂಮಿಯ 15 ಕಿಲೋಮೀಟರ್ ಆಳದಲ್ಲಿ 3.0 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿತ್ತು.
ಸಾಯಂಕಾಲ 4:40ರ ಸಮಯದಲ್ಲಿ ಸುಳ್ಯದ ತೊಡಿಕಾನ ಅರಂತೋಡು, ಅಡ್ತಲೆ ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಹಲವರಿಗೆ ಲಘು ಕಂಪನದ ಅನುಭವ ಆಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪಾವಗಡ ಪಟ್ಟಣದಲ್ಲಿ ಹಾಡಹಗಲೇ ಮಟ್ಕಾ ದಂಧೆ!