ಮಂಗಳೂರು: ಶವಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ ಬಳಿಕ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಂತ್ಯಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಅಗತ್ಯವಿಲ್ಲ. ಕರಾವಳಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವವರಿದ್ದಾರೆ ಎಂದು ಶರಣ್ ಪಂಪ್ವೆಲ್ ಹೇಳಿದ್ದರು. ಈ ಹೇಳಿಕೆಯ ಪೋಸ್ಟರ್ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆಗಳೂ ನಡೆದಿತ್ತು.
ಇದರ ಬಳಿಕ ಕಳೆದ ಎರಡು ದಿನಗಳಿಂದ ಶರಣ್ ಪಂಪ್ವೆಲ್ಗೆ ವಿದೇಶದಿಂದ ಇಂಟರ್ನೆಟ್ ಕಾಲ್ ಮತ್ತು ಫೋನ್ ಮೂಲಕ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ. ಈ ಬಗ್ಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.