ಸುಳ್ಯ (ದಕ್ಷಿಣ ಕನ್ನಡ) : ಮಾಹಿತಿ ಹಕ್ಕು ಕಾಯ್ದೆಯಲ್ಲಿ ವಿವರ ಕೇಳಿದ್ದ ಸಾಮಾಜಿಕ ಕಾರ್ಯಕರ್ತ ರಂಜಿತ್ ಪೂಜಾರಿ ಅವರಿಗೆ, ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಸುಳ್ಯದ ಗಾಂಧಿ ನಗರದ ಮೀನು ಮಾರುಕಟ್ಟೆ ಬಳಿ ಇರುವ ಬಾಡಿಗೆ ಕೋಣೆಯು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಕೋಣೆಗಳನ್ನು ಕೆಲವು ಪ್ರಭಾವಿ ಬೇನಾಮಿ ವ್ಯಕ್ತಿಗಳು ನಗರ ಪಂಚಾಯತ್ ಮೀಸಲು ಹೆಸರಿನಲ್ಲಿ ಕಡಿಮೆ ಬಾಡಿಗೆಗೆ ಪಡೆದು 3ನೇ ವ್ಯಕ್ತಿಗಳಿಗೆ ಹೆಚ್ಚಿನ ಬಾಡಿಗೆ ನಿಗದಿಪಡಿಸಿ ನೀಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಂಪೂರ್ಣವಾದ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಲ್ಲಿ ನೀಡಬೇಕೆಂದು ರಂಜಿತ್ ಪೂಜಾರಿ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು.
ಫೋನ್ ಮಾಡಿ ಬೆದರಿಸಿದ್ದು, ನೀನು ಸ್ವಲ್ಪ ಜಾಗೃತೆಯಿಂದ ಇರು. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿರುತ್ತಾರೆ ಎಂದು ರಂಜಿತ್ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡುವುದಾಗಿ ರಂಜಿತ್ ಮಾಹಿತಿಯನ್ನು ನೀಡಿದ್ದಾರೆ.