ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಪಣಂಬೂರ್ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಜೀವ ರಕ್ಷಕ ದಳದವರು ಇಂದು ಸಂಜೆ ರಕ್ಷಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಟಗಿಯವಾರ ಪ್ರಸ್ತುತ ನಗರದ ಜೋಕಟ್ಟೆಯಲ್ಲಿ ವಾಸ್ತವ್ಯವಿರುವ ಶರಣಪ್ಪ (35) ಹಾಗೂ ನಾಗರಾಜ ಎಚ್.ಎಸ್ (18) ಪ್ರಾಣಾಪಾಯದಿಂದ ಪಾರಾದವರು.
10 ಜನ ಸ್ನೇಹಿತರು ಪಣಂಬೂರ್ ಕಡಲ ಕಿನಾರೆಗೆ ಸಮುದ್ರ ವಿಹಾರಕ್ಕೆಂದು ಬಂದಿದ್ದರು. ಸಮುದ್ರಕ್ಕಿಳಿದ ಸಂದರ್ಭ ಇಬ್ಬರು ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ. ತಕ್ಷಣ ಸಮುದ್ರಕ್ಕೆ ಹಾರಿದ ಜೀವ ರಕ್ಷಕ ದಳದವರು, ಇಬ್ಬರನ್ನೂ ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.