ETV Bharat / state

ಕುಕ್ಕೆ ಮಠದಿಂದ ಏನಾದರೂ ತೊಂದರೆಯಾದರೆ ಮಾತಿನ ಮೂಲಕ ಸರಿಪಡಿಸೋಣ : ಪುರಾಣಿಕ್​ - etv bharat

ಸರ್ಪಸಂಸ್ಕಾರ ಅಥವಾ ಆಶ್ಲೇಷಾ ಬಲಿಯಂತಹ ಸೇವೆ ಮಾಡಿಸುವಾಗ ಮೊದಲಿಗೆ ದೇವಾಲಯದ ಬಾಬ್ತು ರಸೀದಿ ಪಡೆದು ಹಣ ಕಟ್ಟಲು ತಿಳಿಸಲಾಗುತ್ತದೆ. ಇದರಿಂದ ದೇವಾಲಯದ ಉತ್ಪತ್ತಿಗೆ ಯಾವುದೇ ನಷ್ಟವಾಗುವುದಿಲ್ಲ. ಯಾರಿಗೆ ಆಸಕ್ತಿ ಇದೆ ಅವರಿಗೆ ಮಠದಲ್ಲಿ ಶಾಸ್ತ್ರೋಕ್ತವಾಗಿ ಸೇವೆ ಮಾಡಲು ಅವಕಾಶವಿದೆ ಎಂದು ಪುರಾಣಿಕ್ ಅವರು ತಿಳಿಸಿದರು‌.

ಕುಕ್ಕೆ ಮಠದಿಂದ ಏನಾದರೂ ತೊಂದರೆಯಾದರೆ ಮಾತಿನ ಮೂಲಕ ಸರಿಪಡಿಸೋಣ
author img

By

Published : Jun 5, 2019, 9:15 PM IST

ಮಂಗಳೂರು: ಹಿಂದೂಗಳ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಷಡ್ಯಂತರ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಇಷ್ಟು ದಿನಗಳ ಕಾಲ ದೇವಸ್ಥಾನದಲ್ಲಿ ಮಾಡಿಕೊಂಡು ಬರುತ್ತಿದ್ದ ಆಶ್ಲೇಷಾ ಬಲಿ, ಸರ್ಪಸಂಸ್ಕಾರವನ್ನು ಮಠದಲ್ಲಿ ನಡೆಸಲು ಹಲವು ಭಕ್ತರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಒಪ್ಪುತ್ತಿಲ್ಲ.

ಪ್ರೊ. ಎಂ ಬಿ ಪುರಾಣಿಕ್ ಸುದ್ದಿಗೋಷ್ಠಿ

ಈ ಬಗ್ಗೆ ಮಾತನಾಡಿರುವ ವಿಶ್ವ ಹಿಂದೂ ಪರಿಷತ್‌ನ ರಾಜ್ಯಾಧ್ಯಕ್ಷ ಪ್ರೊ.ಎಂ ಬಿ ಪುರಾಣಿಕ್​, ನಾವು ವಿಚಾರಣೆ ನಡೆಸಿದಾಗ ತಿಳಿದು ಬಂದಿರುದೇನೆಂದರೆ ಮಠದಲ್ಲಿ ಯಾರೇ ಬಂದು ಸರ್ಪಸಂಸ್ಕಾರ ಅಥವಾ ಆಶ್ಲೇಷಾ ಬಲಿಯಂತಹ ಸೇವೆ ಮಾಡಿಸುವಾಗ ಮೊದಲಿಗೆ ದೇವಾಲಯದ ಬಾಬ್ತು ರಸೀದಿ ಪಡೆದು ಹಣ ಕಟ್ಟಲು ತಿಳಿಸಲಾಗುತ್ತದೆ. ಇದರಿಂದ ದೇವಾಲಯದ ಉತ್ಪತ್ತಿಗೆ ಯಾವುದೇ ನಷ್ಟವಾಗುವುದಿಲ್ಲ. ಯಾರಿಗೆ ಆಸಕ್ತಿ ಇದೆ ಅವರಿಗೆ ಮಠದಲ್ಲಿ ಶಾಸ್ತ್ರೋಕ್ತವಾಗಿ ಸೇವೆ ಮಾಡಲು ಅವಕಾಶವಿದೆ. ಇದು ಧಾರ್ಮಿಕ ಸ್ವಾತ್ರಂತ್ರ್ಯ. ಇದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಪುರಾಣಿಕ್ ಅವರು ತಿಳಿಸಿದರು‌.

ದೇವಸ್ಥಾನದ ಗೋಡೆ ಮೇಲೆ ಸರ್ಪಸಂಸ್ಕಾರ ಅಥವಾ ಇತರ ಕ್ರಿಯೆಗಳನ್ನು ಮಾಡಿಸಿದರೆ ಅದು ದೇವರಿಗೆ ಸಲ್ಲುವುದಿಲ್ಲ ಎಂದು ಬರೆಯಲಾಗಿದೆ. ಅದು ಸರಿಯಲ್ಲ. ಹಾಕಿದ ಮೇಲೆ ಜನರು ಮಠಕ್ಕೆ ಹೋಗುತ್ತಿದ್ದಾರೆಂದರೆ ಅವರಿಗೆ ಮಠದಲ್ಲಿ ನಡೆಯುವ ಪೂಜಾಕ್ರಿಯೆಗಳ ಬಗ್ಗೆ ನಂಬಿಕೆ ಇದೆಯೆಂದರ್ಥ. ಆದ್ದರಿಂದ ಮೊನ್ನೆಯ ಘಟನೆ ವ್ಯವಸ್ಥಿತ ಒಳಸಂಚು. ಅದರಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಮಹೇಶ್ ಕರಿಕಳ ಎನ್ನುವ ವ್ಯಕ್ತಿಯೂ ಇದ್ದಾರೆ‌. ಈ ಮೂರು ಜನ ಸೇರಿ ಶಾಂತಿಯನ್ನು ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನು ಉಲ್ಬಣ ಮಾಡಲು ನಾವು ಸಿದ್ಧರಿಲ್ಲ. ಇದು ನಮ್ಮೊಳಗಿನ ನಡುವೆ ಇರುವ ವಿಷಯ. ಇದನ್ನು ಸಮಾಜದ ಮುಂದೆ ಬಹಿರಂಗ ಪಡಿಸುವ ಅಗತ್ಯ ಇಲ್ಲ. ಮಠದಿಂದ ಏನಾದರೂ ತೊಂದರೆಯಾದರೆ, ಅದನ್ನು ಮಾತಿನ ಮೂಲಕ ಸರಿಪಡಿಸೋಣ ಎಂದು ಸುನೀಲ್ ಪುರಾಣಿಕ್ ಹೇಳಿದರು.

ಜೂನ್ 2ರಂದು ಸರ್ಪಸಂಸ್ಕಾರ ಮಾಡಿಸಬೇಕೆಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ‌ ಮಠಕ್ಕೆ ಫೋನ್ ಕರೆಯೊಂದು ಬಂದಿತ್ತು. ಕರೆ ಮಾಡಿದ ಸೇವಾರ್ಥಿಗಳು ಜೂನ್ 1ರಂದು ತಮಗೆ ಮಠದ ದಾರಿ ಗೊತ್ತಿಲ್ಲ ಎಂದ ಹಿನ್ನೆಲೆಯಲ್ಲಿ ಮಠದ ಅರ್ಚಕರಾದ ಕುಮಾರ ಬನ್ನಿಂತಾಯರು ಅವರನ್ನು ಕರೆ ತರಲು ಗೋಪುರದ ಬಳಿ ಹೋಗಿದ್ದಾರೆ‌. ಈ ಸಮಯದಲ್ಲಿ ಗುರುಪ್ರಸಾದ್ ಪಂಜ ಹಾಗೂ ಪ್ರಶಾಂತ್ ಭಟ್ ಮಾಣಿಲ ಎಂಬುವವರು ಅರ್ಚಕರ ಮೇಲೆ ಹಲ್ಲೆ ಮಾಡಿ ರಕ್ತ ಬರುವಂತೆ ಥಳಿಸಿದ್ದಾರೆ ಎಂದು ಪುರಾಣಿಕ್​ ಆರೋಪಿಸಿದರು.

Intro:ಮಂಗಳೂರು: ಹಿಂದೂಗಳ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಷಡ್ಯಂತರ ನಡೆಯುತ್ತಿದೆ. ಈ ಪವಿತ್ರ ಕ್ಷೇತ್ರಗಳ ಮಧ್ಯೆ ಪರಸ್ಪರ ಸಂಘರ್ಷದ ಕಿಡಿ ಹಚ್ಚುವ ಹುನ್ನಾರ ಕೆಲವೊಂದು ವ್ಯಕ್ತಿಗಳ ಮಧ್ಯೆ ನಡೆಯುತ್ತಿದೆ. ಇದನ್ನು ಸಮಗ್ರ ಹಿಂದೂ ಸಮಾಜ ಹಾಗೂ ವಿಶ್ವ ಹಿಂದೂ ಪರಿಷತ್ ಖಂಡನೆ ಮಾಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ನ ರಾಜ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.

ನಗರದ ಕದ್ರಿ ಬಳಿಯಿರುವ ವಿಶ್ವಶ್ರೀ ಸಭಾಂಗಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 2ರಂದು ಸರ್ಪಸಂಸ್ಕಾರ ಮಾಡಿಸಬೇಕೆಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ‌ ಮಠಕ್ಕೆ ಫೋನ್ ಕರೆಯೊಂದು ಬಂದಿತ್ತು. ಕರೆ ಮಾಡಿದ ಸೇವಾರ್ಥಿಗಳು ಜೂನ್ 1ರಂದು ತಮಗೆ ಮಠದ ದಾರಿ ಗೊತ್ತಿಲ್ಲ ಎಂದ ಹಿನ್ನೆಲೆಯಲ್ಲಿ ಮಠದ ಅರ್ಚಕರಾದ ಕುಮಾರ ಬನ್ನಿಂತಾಯರು ಅವರನ್ನು ಕರೆ ತರಲು ಗೋಪುರದ ಬಳಿ ಹೋಗಿದ್ದಾರೆ‌. ಗೋಪುರದಿಂದ ದೇವಳದ ಅಂಗಣದ ಮೂಲಕ ಮಠಕ್ಕೆ ಕರೆತರುವಾಗ ದೇವಸ್ಥಾನಕ್ಕೆ ಹಾಗೂ ಮಠಕ್ಕೆ ಸಂಬಂಧಪಡದ ಗುರುಪ್ರಸಾದ್ ಪಂಜ ಹಾಗೂ ಪ್ರಶಾಂತ್ ಭಟ್ ಮಾಣಿಲ ಎಂಬಿಬ್ಬರು ಇವರನ್ನು‌ ತಡೆದು ಸುಬ್ರಹ್ಮಣ್ಯ ದೇವಾಲಯದ ಕಚೇರಿಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರಿಗೆ ಗದರಿಸಿ, ಮಾತು ಬೆಳೆಸಿ ಅಲ್ಲಿನ ಆಡಳಿತಾಧಿಕಾರಿ ರವೀಂದ್ರ ಎಂಬವರ ಸಮ್ಮುಖದಲ್ಲಿ ರಕ್ತ ಬರುವಂತೆ ಥಳಿಸಿದ್ದಾರೆ. ಅಲ್ಲದೆ ಅವರಿಂದ ಮುಚ್ಚಳಿಕೆಯನ್ನೂ ಬರೆಸಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿಯೂ ಈ ಬಗ್ಗೆ ದೂರು ದಾಖಲಿಸಲು ಒಪ್ಪದೆ ಇನ್ಸ್ ಪೆಕ್ಟರ್ ವರ್ಗಾವಣೆಯಾಗುತ್ತಿದ್ದಾರೆ. ಹಾಗಾಗಿ ನಮಗೆ ಪುರುಸೋತ್ತಿಲ್ಲ ಎಂದು ಸಬೂಬು ನೀಡಿದ್ದಾರೆ. ಕೂಡಲೇ ತೀವ್ರವಾಗಿ ಗಾಯಗೊಂಡ ಬನ್ನಿಂತಾಯರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಪೊಲೀಸರು ಒತ್ತಡದ ಮೇಲೆ ಒಂದು ಸಣ್ಣ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳು ಬೇಲ್ ಪಡೆದು ಬಿಡುಗಡೆಯನ್ನೂ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Body:ಇದರಲ್ಲಿ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದೆ. ಹಲವು ತಿಂಗಳಿನಿಂದ ದೇವಸ್ಥಾನ ಹಾಗೂ ಮಠದ ಮಧ್ಯೆ ವ್ಯಾಜ್ಯ ನಡೆಯುತ್ತಲೇ ಬಂದಿದೆ. ದೇವಸ್ಥಾನದಲ್ಲಿ ನಡೆಯುವ ಆಶ್ಲೇಷಾ ಬಲಿ, ಸರ್ಪಸಂಸ್ಕಾರವನ್ನು ಮಠದಲ್ಲಿ ನಡೆಸಿದರೆ ದೇವಾಲಯದ ಉತ್ಪತ್ತಿಗೆ ತೊಂದರೆಯಾಗುತ್ತದೆ ಎಂದು ದೇವಾಲಯದ ವಾದವಿದೆ. ಆದರೆ ಈ ಬಗ್ಗೆ ನಾವು ವಿಚಾರಣೆ ನಡೆಸಿದಾಗ ತಿಳಿದು ಬಂದಿರುದೇನೆಂದರೆ ಮಠದಲ್ಲಿ ಯಾರೇ ಬಂದು ಸರ್ಪಸಂಸ್ಕಾರ ಅಥವಾ ಆಶ್ಲೇಷಾ ಬಲಿಯಂತಹ ಸೇವೆ ಮಾಡಿಸುವಾಗ ಮೊದಲಿಗೆ ದೇವಾಲಯದ ಬಾಬ್ತು ರಸೀದಿ ಪಡೆದು ಕಟ್ಟಲು ತಿಳಿಸಲಾಗುತ್ತದೆ. ಇದರಿಂದ ದೇವಾಲಯದ ಉತ್ಪತ್ತಿಗೆ ಯಾವುದೇ ನಷ್ಟವಾಗುವುದಿಲ್ಲ. ಯಾರಿಗೆ ಆಸಕ್ತಿ ಇದೆ ಅವರಿಗೆ ಮಠದಲ್ಲಿ ಶಾಸ್ತ್ರೋಕ್ತವಾಗಿ ಸೇವೆ ಮಾಡಲು ಅವಕಾಶವಿದೆ. ಇದು ಧಾರ್ಮಿಕ ಸ್ವಾತ್ರಂತ್ರ್ಯ. ಇದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಸುನೀಲ್ ಪುರಾಣಿಕ್ ಅವರು ತಿಳಿಸಿದರು‌.

ದೇವಸ್ಥಾನದಲ್ಲಿ ಅಲ್ಲಲ್ಲಿ ಗೋಡೆ ಬರಹಗಳ ಮೂಲಕ ಮಠದಲ್ಲಿ ಅಥವಾ ಬೇರೆಡೆಗಳಲ್ಲಿ ಸರ್ಪಸಂಸ್ಕಾರ ಅಥವಾ ಇತರ ಕ್ರಿಯೆಗಳನ್ನು ಮಾಡಿಸಿದರೆ ಅದು ದೇವರಿಗೆ ಸಲ್ಲುವುದಿಲ್ಲ ಎಂದು ಬರೆಯಲಾಗಿದೆ. ಅದು ಸರಿಯಲ್ಲ. ಹಾಕಿದ ಮೇಲೆ ಜನರು ಮಠಕ್ಕೆ ಹೋಗುತ್ತಿದ್ದಾರೆಂದರೆ ಅವರಿಗೆ ಮಠದಲ್ಲಿ ನಡೆಯುವ ಪೂಜಾಕ್ರಿಯೆಗಳ ಬಗ್ಗೆ ನಂಬಿಕೆ ಇದೆಯೆಂದರ್ಥ. ಆದ್ದರಿಂದ ಮೊನ್ನೆಯ ಘಟನೆ ವ್ಯವಸ್ಥಿತ ಒಳಸಂಚು. ಅದರಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಮಹೇಶ್ ಕರಿಕಳ ಎನ್ನುವ ವ್ಯಕ್ತಿಯೂ ಇದ್ದಾರೆ‌. ಈ ಮೂರು ಜನ ಸೇರಿ ಶಾಂತಿಯನ್ನು ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನು ಉಲ್ಬಣ ಮಾಡಲು ನಾವು ಸಿದ್ಧರಿಲ್ಲ. ಇದು ನಮ್ಮೊಳಗಿನ ನಡುವೆ ಇರುವ ವಿಷಯ. ಇದನ್ನು ಸಮಾಜದ ಮುಂದೆ ಬಹಿರಂಗ ಪಡಿಸುವ ಅಗತ್ಯ ಇಲ್ಲ. ಮಠದಿಂದ ಏನಾದರೂ ತೊಂದರೆಯಾದರೆ, ಅದನ್ನು ಮಾತಿನ ಮೂಲಕ ಸರಿಪಡಿಸೋಣ ಎಂದು ಸುನೀಲ್ ಪುರಾಣಿಕ್ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.