ETV Bharat / state

ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಕಾಂಗ್ರೆಸ್‌ನವರು ಘೋಷಣೆ ಮಾಡಲಿ: ಕಟೀಲ್ - ETV Bharat Karnataka

ಬಿಜೆಪಿ ಮಾತ್ರ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತದೆ ಎಂದು ನಳೀನ್​ ಕುಮಾರ್ ಕಟೀಲ್​ ಹೇಳಿದರು.

BJP State President Naleen Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
author img

By

Published : Apr 18, 2023, 5:26 PM IST

ನಳೀನ್ ಕುಮಾರ್ ಕಟೀಲ್ ಹೇಳಿಕೆ

ಮಂಗಳೂರು (ದಕ್ಷಿಣ ಕನ್ನಡ) : ಕಾಂಗ್ರೆಸ್ ಪಕ್ಷವು ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲೆಸೆದರು. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ನಾವು ಯಡಿಯೂರಪ್ಪ ಮಾರ್ಗದರ್ಶನ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಎಲ್ಲ ಸಂದರ್ಭದಲ್ಲಿಯೂ ಬಿಜೆಪಿ ಮಾತ್ರ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಾರ್ಟಿಗೂ ಆ ತಾಕತ್ತಿಲ್ಲ, ಇದ್ದರೆ ಘೋಷಣೆ ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್​ಗೆ ಬಹಳ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕೊರತೆ ಇದ್ದು, ಡಿಸೆಂಬರ್​ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೆ ಆಗಿಲ್ಲ. ನಾವು ಹತ್ತು ದಿವಸದಲ್ಲಿ ಪ್ರಕ್ರಿಯೆ ಮುಗಿಸಿದ್ದೇವೆ. ಹೀಗಾಗಿ ನಮ್ಮ ಬಂಡುಕೋರರಾಗಿ ಹೊರಬರುವ ಅಭ್ಯರ್ಥಿಗಳನ್ನು ಕಾಯುತ್ತಾ ಇದ್ದಾರೆ. ಕಾಂಗ್ರೆಸ್​ನ ಹೀನಾಯ ಸ್ಥಿತಿ ನೋಡಿ ಬೇಜಾರಾಗುತ್ತಿದೆ. ಅವರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗೆ ಫೈಟ್ ನಡೀತಾ ಇದೆ. ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ, ಖರ್ಗೆ ಜೊತೆ ಈಗ ಪರಮೇಶ್ವರ್ ರೇಸ್​ನಲ್ಲಿದ್ದಾರೆ ಎಂದರು.

ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರ: ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾನಸಪುತ್ರನಿಗೆ ಟಿಕೆಟ್​ ನೀಡಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ‌ಕಟೀಲ್, ಶೆಟ್ಟರ್ ಹಿರಿಯರ ಮನವೊಲಿಕೆ ನಂತರವೂ ಬಿಜೆಪಿ ಬಿಟ್ಟಿದ್ದಾರೆ. ಕೊನೆಯತನಕ ಪ್ರಯತ್ನ ಆಗಿದ್ದು, ರಾಷ್ಟ್ರೀಯ ನಾಯಕರು ಮನೆ ಬಾಗಿಲಿಗೆ ಹೋದರೂ ಗೌರವ ಕೊಡದೇ ಹೋಗಿದ್ದಾರೆ. ಮಾನಸಿಕವಾಗಿ ಯಾವುದೋ ಕಾರಣಕ್ಕೆ ಪಕ್ಷ ಬಿಡುವ ತೀರ್ಮಾನ ತೆಗೊಂಡಿದ್ದಾರೆ. ಕಾಂಗ್ರೆಸ್ ಅವರನ್ನು ಹೇಗೆ ನಡೆಸಿಕೊಳ್ಳುತ್ತೆ ಅನ್ನೋದನ್ನು ಕಾದು ನೋಡುತ್ತೇವೆ ಎಂದು ಹೇಳಿದರು.

ರಾಷ್ಟ್ರದಲ್ಲಿ ನಮ್ಮ ಪಕ್ಷಕ್ಕೆ ಅದರದ್ದೇ ಆದ ನಿಯಮಗಳಿವೆ. ಪಕ್ಷದಲ್ಲಿ ಬಹಳ ವರ್ಷ ದುಡಿದವರು ಜಗದೀಶ್ ಶೆಟ್ಟರ್. ನಮ್ಮಲ್ಲಿ ಪಾರ್ಲಿಮೆಂಟರಿ ಬೋರ್ಡ್, ಎಲೆಕ್ಷನ್ ಕಮಿಟಿ ನಿರ್ವಹಣೆ ಮಾಡಿ ಅಭ್ಯರ್ಥಿ ಆಯ್ಕೆ ಆಗುತ್ತೆ. ಯಾರೋ ಒಬ್ಬ ನಮ್ಮಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಎಲ್ಲ ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣಾ ಪ್ರಕ್ರಿಯೆ ನಡೆಯುತ್ತೆ. ನಾವು ಮತಗಟ್ಟೆ ಕಾರ್ಯಕರ್ತರ ಓಟ್ ನಲ್ಲಿ ಅಭಿಪ್ರಾಯ ಸಂಗ್ರಹಿಸುತ್ತೀವಿ. ಶೆಟ್ಟರ್ ಕೂಡ ಪಾರ್ಟಿ ಅಧ್ಯಕ್ಷ ಆಗಿದ್ದವರು. ಇಲ್ಲಿನ ಸಾಮೂಹಿಕ ನಾಯಕತ್ವ ಅವರಿಗೆ ಗೊತ್ತಿದೆ. ಇವತ್ತು ಪಾರ್ಟಿಯಿಂದ ಹೊರಗೆ ಹೋಗಿ ಮಾತನಾಡೋದು ಶೋಭೆ ತರುವಂತದಲ್ಲ. ಸಂತೋಷ್ ಜೀ ನಮ್ಮ ಸಂಘಟನಾ ಕಾರ್ಯದರ್ಶಿ, ಅವರು ಸಂಘಟನೆ ಕಾರ್ಯ ಮಾಡುತ್ತಾರೆ ಎಂದು ನಳೀನ್​ ಕುಮಾರ್​ ಕಟೀಲ್​ ತಿಳಿಸಿದರು.

'ಪುತ್ತೂರು ಬಿಜೆಪಿ ಭದ್ರಕೋಟೆ': ಮತ್ತೊಂದೆಡೆ ಪುತ್ತೂರಿನಲ್ಲಿ ಬಿಜೆಪಿ ವಿರುದ್ದ ಹಿಂದೂ ಮುಖಂಡ ಅರುಣ್ ಪುತ್ತಿಲ ಬಂಡಾಯ ವಿಚಾರದ ಬಗ್ಗೆ ‌ಮಾತನಾಡಿದ ನಳೀನ್​ ಕುಮಾರ್​ ಕಟೀಲ್​, ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಅವರ ಅಪೇಕ್ಷೆ ಈಡೇರಾದಾಗ ನಾಮಪತ್ರ ಸಲ್ಲಿಸುತ್ತಾರೆ. ಆದರೆ ಪುತ್ತೂರು ಬಿಜೆಪಿ ಭದ್ರಕೋಟೆ, ಇಲ್ಲಿ ಬಿಜೆಪಿ ಜಯ ಸಾಧಿಸುತ್ತದೆ. ಕಾರ್ಯಕರ್ತರು ರಾಷ್ಟ್ರೀಯ ವಿಚಾರಧಾರೆ ಜೊತೆ ಕೈ ಜೋಡಿಸುತ್ತಾರೆ. ಬಿಜೆಪಿ ಯಾವುದನ್ನೂ ವಿರೋಧಿಸಲ್ಲ, ನಮಗೆ ಗೆಲುವಾಗುತ್ತದೆ ಎಂದರು.

ಸುಮಲತಾ ನಮಗೆ ಬೆಂಬಲ ಕೊಡುತ್ತಿದ್ದು, ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ರಾಮದಾಸ್ ಅವರ ಬಳಿ ನಾವು ವಿನಂತಿ ಮಾಡುತ್ತಿದ್ದೇವೆ. ಕುಟುಂಬ ರಾಜಕಾರಣದಲ್ಲಿ ಎರಡು ವಿಚಾರ ಇದೆ. ಕಾರ್ಯಕರ್ತರಿಗೆ ರಾಷ್ಟ್ರೀಯ ನಾಯಕರು ಸೀಟ್ ಕೊಡೋದು ಒಂದು. ಮನೆಯೊಳಗೆ ಕೂತು ಮನೆಯವರಿಗೆ ಸೀಟ್ ಕೊಡೋದು ಇನ್ನೊಂದು. ನಮ್ಮ ಪಕ್ಷ ಕಾರ್ಯಕರ್ತರಾಗಿ ಕುಟುಂಬದ ಒಳಗೆ ಇದ್ದವರಿಗೆ ಘೋಷಣೆ ಮಾಡೋದು ತಪ್ಪಲ್ಲ.ಇದು ಕುಟುಂಬ ರಾಜಕಾರಣ ಆಗಲ್ಲ, ರಾಷ್ಟ್ರೀಯ ನಾಯಕರ ಯೋಚನೆ ಎಂದು ನಳೀನ್​ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದರು.​

ನಾವು ಕಾರ್ಯಕರ್ತರ ಆಧಾರದಲ್ಲಿ ಗೆಲ್ಲುವ ಪಕ್ಷ. ನಮ್ಮದು ಕ್ರಾಂತಿಕಾರಕ ಬದಲಾವಣೆ, ಇದು ಇಡೀ ದೇಶದಲ್ಲಿ ಆಗಿದೆ. 66-77 ಜನ ಹೊಸ ಮುಖವನ್ನು ಚುನಾವಣೆ ಹೊತ್ತಲ್ಲಿ ತರುವ ಧೈರ್ಯ ಯಾರು ತೋರುತ್ತಾರೆ. ನಾವು ಧೈರ್ಯ ತೋರಿದ್ದೇವೆ, ಹಾಗಾಗಿ ಇದಕ್ಕೆಲ್ಲಾ ಭಯ ಪಡಲ್ಲ‌. ಈ ಕ್ರಾಂತಿಕಾರಿ ಹೆಜ್ಜೆ ರಾಜ್ಯದಲ್ಲೂ ಯಶಸ್ವಿಯಾಗಲಿದೆ ಎಂದರು.

ಇದನ್ನೂ ಓದಿ : ಕರ್ನಾಟಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಹಿಮಾಚಲದ ಕಥೆಯೇ ಪುನರಾವರ್ತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.