ETV Bharat / state

ಉಳ್ಳಾಲದಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Leopard on the Kotepur village ..

ಮಂಗಳೂರಿನ ಉಳ್ಳಾಲ ಕೋಟೆಪುರ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಸೀದಿಯ ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ.

Leopard Found- on the Kotepur village
ಉಳ್ಳಾಲದಲ್ಲಿ ಚಿರತೆ ಪ್ರತ್ಯಕ್ಷ
author img

By

Published : Feb 18, 2020, 8:59 PM IST

ಮಂಗಳೂರು: ತಾಲೂಕಿನ ಉಳ್ಳಾಲ ಕೋಟೆಪುರ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಉಳ್ಳಾಲದಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಿರತೆ ದೃಶ್ಯ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ತಡರಾತ್ರಿ ಕೋಟೆಪುರದಲ್ಲಿ ನಾಯಿಯನ್ನು ಕೊಂಡೊಯ್ಯುವ ಸಂದರ್ಭ ಬೆನ್ನಟ್ಟಿದ ಸ್ಥಳೀಯ ನಿವಾಸಿ ಇರ್ಫಾನ್ ಎಂಬುವರ ಕಾಲಿಗೆ ಗಾಯವಾಗಿದೆ. ನಾಯಿಯನ್ನು ಹಿಡಿಯಲು ಚಿರತೆ ಮುಂದಾದ ಸಂದರ್ಭ ಅಲ್ಲೇ ಮನೆ ಇರುವ ಇರ್ಫಾನ್ ಎಂಬುವರು ಓಡಿಸಿದ್ದಾರೆ. ಈ ವೇಳೆ ನಾಯಿಯನ್ನು ಬಿಟ್ಟು ಚಿರತೆ ಕಣ್ಮರೆಯಾಗಿದೆ. ಇಲ್ಲಿ ನಾಯಿಗಳು ನಾಪತ್ತೆಯಾಗುತ್ತಿದ್ದು, ಚಿರತೆ ತಿಂದಿರುವ ಅನುಮಾನ ಮೂಡಿಸಿದೆ.

ಎಂಟು ತಿಂಗಳ ಹಿಂದೆ ಮಳೆಗಾಲದ ಸಂದರ್ಭ ನೆರೆ ನೀರಿನಲ್ಲಿ ಚಿರತೆ ಮರಿಗಳು ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಡಾ ಗಿಡಗಳು ಬೆಳೆದು ನಿಂತ ನೇತ್ರಾವತಿ ನದಿ ತೀರದ ಕಾಡಿನಲ್ಲಿ ಬೆಳಗಿನ ಹೊತ್ತು ನಿಂತು, ರಾತ್ರಿ ಹೊತ್ತಿನಲ್ಲಿ ಕೋಟೆಪುರ ಭಾಗದಲ್ಲಿ ಸುತ್ತಾಡುತ್ತಿವೆ. ಹಿಂದೆ ಚಿರತೆ ಇರುವ ಕುರಿತು ಸ್ಥಳೀಯರು ಸಂಬಂಧಿಸಿದ ಇಲಾಖೆ ಗಮನಕ್ಕೆ ತಂದಿದ್ದರೂ ಯಾವುದೇ ಕುರುಹುಗಳು ಲಭ್ಯವಾಗಿರಲಿಲ್ಲ. ಆದರೆ ಒಂದು ವಾರದಿಂದ ಚಿರತೆ ಕಾಣಿಸಿಕೊಂಡಿದ್ದು, ಸಮೀಪದ ಮಸೀದಿಯ ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.