ETV Bharat / state

ಪ್ರಯಾಣಿಸಬೇಕಿದ್ದ ರೈಲು ತಪ್ಪಿದರೂ ಸಂಕಟದಲ್ಲಿದ್ದ ವ್ಯಕ್ತಿಗೆ ಮರುಜೀವ ನೀಡಿದ ಉಪನ್ಯಾಸಕಿ

author img

By

Published : Oct 21, 2022, 2:17 PM IST

ನೆಲ್ಯಾಡಿಯ ಉಪನ್ಯಾಸಕಿ ಹೇಮಾವತಿ ಎಂಬುವವರು ವ್ಯಕ್ತಿಯೊಬ್ಬರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

Hemavathi
ಉಪನ್ಯಾಸಕಿ ಹೇಮಾವತಿ

ಬಂಟ್ವಾಳ: ಇದು ನೆಲ್ಯಾಡಿಯ ಉಪನ್ಯಾಸಕಿ ವ್ಯಕ್ತಿಯೊಬ್ಬರ ಜೀವ ಉಳಿಸಿ ಹೃದಯವಂತಿಕೆ ಮೆರೆದ ಕತೆ. ಬೆಂಗಳೂರಿಗೆ ತೆರಳುವ ರೈಲು ತಪ್ಪಿದರೂ ವ್ಯಕ್ತಿಯ ಪ್ರಾಣ ಉಳಿಸಿ ಸಮಯಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

ನೆಲ್ಯಾಡಿಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಹೇಮಾವತಿ ಸೆ.28ರಂದು ಬಂಟ್ವಾಳದಿಂದ ಬೆಂಗಳೂರಿಗೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಭಾರವಾದ ಎರಡು ಚೀಲಗಳೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಅವರು ಕುಳಿತಿದ್ದ ಜಾಗದ ಹಿಂದೆ ಜೋರಾದ ಸದ್ದು ಕೇಳಿತು. ಅಲ್ಲಿ ಸುಮಾರು 50ರ ಹರೆಯದ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದರು. ಆ ಸಂದರ್ಭ ರೈಲು ಬರುವ ಹೊತ್ತಾಗಿತ್ತು. ಎಲ್ಲರೂ ಆ ತರಾತುರಿಯಲ್ಲಿದ್ದರೆ, ಹೇಮಾವತಿಯವರು ಆ ವ್ಯಕ್ತಿಯ ರಕ್ಷಣೆಗೆ ಮುಂದಾದರು.

"ಆ ವ್ಯಕ್ತಿ ಬೆವರುತ್ತಿದ್ದರು. ಮೈ ತಣ್ಣಗಿತ್ತು. ಆ್ಯಂಬ್ಯುಲೆನ್ಸ್​​ಗೆ ಕರೆ ಮಾಡಲು ಪ್ರಯತ್ನಿಸಿದರು. ಆ ಸಂದರ್ಭ ರೈಲು ಹೊರಟು ಹೋಯಿತು. ಸುತ್ತಲೂ ಯಾರೂ ಇರಲಿಲ್ಲ. ನಾನು ಅವನನ್ನೂ ಒಳಗೊಂಡಂತೆ ಎಲ್ಲಾ ನಾಲ್ಕು ಚೀಲಗಳನ್ನು ತೆಗೆದುಕೊಂಡೆ. ಅವನನ್ನು ಹಿಡಿದುಕೊಂಡು ನಿಲ್ದಾಣದ ಹೊರಗೆ ಹೋದೆ.

ಆಟೋ ರಿಕ್ಷಾ ಹಿಡಿದು ಬಿ.ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಹೋದೆ. ಅವರು ಚೇತರಿಸಿಕೊಂಡರು. ಅಲ್ಲಿಂದ ಆ ವ್ಯಕ್ತಿ ತನ್ನ ಮಾವ ವೈದ್ಯರ ಸಂಖ್ಯೆಯನ್ನು ನೀಡಿದರು. ಬಳಿಕ ಕೂಡಲೇ ಅವರನ್ನು ಕೆಎಂಸಿ ಮಂಗಳೂರಿಗೆ ಕರೆದೊಯ್ಯಲಾಯಿತು. ಅವರ ಸಂಬಂಧಿಕರು ಬಂದ ಮೇಲೆ ನಾನು ಮರುದಿನ ಬಸ್​ನಲ್ಲಿ ಬೆಂಗಳೂರಿಗೆ ಹೊರಟೆ" ಎಂದು ಹೇಮಾವತಿ ನಡೆದ ಘಟನೆ ವಿವರಿಸಿದರು.

"ಹೇಮಾವತಿ ಇಲ್ಲದಿದ್ದರೆ ನಾನು ಬದುಕುತ್ತಿರಲಿಲ್ಲ. ನಾನು ಕುಸಿದು ಬಿದ್ದಾಗ ಏನಾಗುತ್ತಿದೆ ಎಂದು ನನಗೆ ತಿಳಿದಿತ್ತು. ಆದರೆ, ಮಾತನಾಡಲು ಸಾಧ್ಯವಾಗಲಿಲ್ಲ. ನನ್ನ ಮಾವ ಡಾ.ಪದ್ಮನಾಭ ಕಾಮತ್ ಅವರನ್ನು ಸಂಪರ್ಕಿಸಿದ ಬಳಿಕ ಅವರ ವೈದ್ಯ ತಂಡ ನನಗೆ ಮರುಜೀವ ನೀಡಿತು" ಎನ್ನುತ್ತಾರೆ ವಿದೇಶದಲ್ಲಿ ಉದ್ಯಮಿಯಾಗಿದ್ದ ಕುಸಿದು ಬಿದ್ದ ವ್ಯಕ್ತಿ.

ಅ.17 ರಂದು ಹೇಮಾವತಿ ಅವರು ತಮ್ಮ ತಾಯಿಯೊಂದಿಗೆ ಕೆಎಂಸಿಯಲ್ಲಿದ್ದರು. ಡಾ. ಕಾಮತ್ ಅವರೊಂದಿಗೆ ಅಪಾಯಿಂಟ್ಮೆಂಟ್ ಹೊಂದಿದ್ದರು. ಉದ್ಯಮಿ ಕೂಡ ವೈದ್ಯರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಡಾ.ಕಾಮತ್ ಈ ಸಂದರ್ಭ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಇದನ್ನೂ ಓದಿ: ನಿತ್ರಾಣಗೊಂಡು ಬಿದ್ದಿದ್ದ ಅಪರಿಚಿತ ವೃದ್ಧ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.