ಮಂಗಳೂರು: ಮೃತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿ ಮಂಗಳೂರು ಪೊಲೀಸ್ ಕಮೀಷನರ್ ಅವರ ಚೇರ್ನಲ್ಲಿ ಒಂದು ನಿಮಿಷ ಕಾಲ ಕುಳಿತ ಮಗಳನ್ನು ಕಂಡು ಮತ್ತು ಅಗಲಿದ ತಮ್ಮ ಪತಿಯನ್ನು ನೆನೆದು ಬಾಲಕಿ ಪ್ರಣೀತಾಳ ತಾಯಿ ಭಾವುಕರಾದ ಪ್ರಸಂಗ ನಡೆಯಿತು.
ನಗರದ ಪಣಂಬೂರಿನಲ್ಲಿ ಕೆಲ ವರ್ಷಗಳ ಹಿಂದೆ ಡಿವೈಎಸ್ಪಿಯಾಗಿದ್ದ ದಿವಂಗತ ರವಿಕುಮಾರ್ ಅವರ ಪುತ್ರಿ ಪ್ರಣೀತಾ ಕಮೀಷನರ್ ಚೇರ್ನಲ್ಲಿ ಒಂದು ನಿಮಿಷ ಕಾಲ ಕುಳಿತಿದ್ದಳು. ರವಿಕುಮಾರ್ ಅವರು ಮೈಸೂರಿನಲ್ಲಿ ಲೋಕಾಯುಕ್ತ ಎಸ್ಪಿಯಾಗಿಯೂ ಸೇವೆ ಸಲ್ಲಿಸಿದ್ದರು. 2017 ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರವಿಕುಮಾರ್ ಮೃತಪಟ್ಟಿದ್ದರು.
ಪ್ರಣೀತಾ ಬೆಂಗಳೂರಿನಲ್ಲಿ ಎಲ್ಕೆಜಿ ಕಲಿಯುತ್ತಿದ್ದಾಳೆ. ಬಾಲಕಿಯ ತಾಯಿಯು ತಮ್ಮ ಪತಿ ರವಿಕುಮಾರ್ ಅವರು ಕೆಲಸ ಮಾಡುತ್ತಿದ್ದ ಕಚೇರಿಯನ್ನು ತೋರಿಸಲೆಂದು ಮಗಳನ್ನು ಮಂಗಳೂರಿಗೆ ಕರೆತಂದಿದ್ದರು. ಕಚೇರಿಗೆ ಬಂದಿದ್ದ ಮೃತ ಪೊಲೀಸ್ ಅಧಿಕಾರಿ ರವಿಕುಮಾರ್ ಅವರ ಪುತ್ರಿಯನ್ನು ಮಂಗಳೂರು ಕಮೀಷನರ್ ಅವರು ತಮ್ಮ ಚೇರ್ನಲ್ಲಿ ಕೂರಿಸಿದ್ದರು. ಇದನ್ನು ಕಂಡು ಬಾಲಕಿ ಪ್ರಣೀತಾಳ ತಾಯಿ ಭಾವುಕರಾದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಡ್ರಮ್ ಬಾರಿಸಿ ಗಮನ ಸೆಳೆದ ಡಿಕೆಶಿ..