ETV Bharat / state

ಚಾರ್ಮಾಡಿ ಘಾಟ್​ನಲ್ಲಿ ಭೂ ಕುಸಿತ: ಬದಲಿ ವಾಹನ‌ ಸಂಚಾರ ವ್ಯವಸ್ಥೆ - Mangaloru latest news

ಆ.7 ಸಂಜೆ 6ರಿಂದ ಆ.11ರ ಮಧ್ಯರಾತ್ರಿ 12 ರವರೆಗೆ ಚಾರ್ಮಾಡಿ ಘಾಟ್​ನಲ್ಲಿ ಎಲ್ಲಾ ವಾಹನ ಸಂಚಾರವನ್ನು ನಿರ್ಬಂಧಿಸಿ ಆದೇಶಿಸಲಾಗಿದೆ.

Landslide at Charmedi Ghat
ಚಾರ್ಮಾಡಿ ಘಾಟ್​ನಲ್ಲಿ ಭೂಕುಸಿತ
author img

By

Published : Aug 8, 2020, 10:43 PM IST

Updated : Aug 8, 2020, 11:10 PM IST

ಮಂಗಳೂರು: ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಭಾರಿ ಭೂಕುಸಿತ ಹಾಗೂ ಮರಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಚಾರ್ಮಾಡಿ ಘಾಟ್​ನಲ್ಲಿ ಎಲ್ಲಾ ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ವಾಹನ ಸಂಚಾರಕ್ಕೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

Landslide at Charmedi Ghat
ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ಆ.7 ಸಂಜೆ 6ರಿಂದ ಆ.11ರ ಮಧ್ಯರಾತ್ರಿ 12 ರವರೆಗೆ ಚಾರ್ಮಾಡಿ ಘಾಟ್​ನಲ್ಲಿ ಎಲ್ಲಾ ವಾಹನ ಸಂಚಾರವನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಆದ್ದರಿಂದ ಎಲ್ಲಾ ವಾಹನಗಳಿಗೆ ಬದಲಿ ರಸ್ತೆಯಲ್ಲಿ ಸಂಚಾರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು ಉಜಿರೆ-ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಶಿರಾಡಿ (ರಾಷ್ಟ್ರೀಯ ಹೆದ್ದಾರಿ 75) ಮುಖಾಂತರ ಸಂಚರಿಸಬಹುದಾಗಿದೆ. ಅಲ್ಲದೆ ಮೂಡುಗೆರೆ ಹ್ಯಾಂಡ್ ಪೋಸ್ಟ್- ಜನ್ನಾಪುರ-ಆನೆಮಹಲ್-ಶಿರಾಡಿ-ಗುಂಡ್ಯ ಮುಖಾಂತರ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

ಚಾರ್ಮಾಡಿ ಘಾಟ್​ನಲ್ಲಿ ಭೂ ಕುಸಿತ

Last Updated : Aug 8, 2020, 11:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.