ಮಂಗಳೂರು: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಸುಮಾರು 100 ಮೀನುಗಾರಿಕಾ ಬೋಟ್ಗಳು ಹಾಗೂ ಅವುಗಳಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ.
ಮಂಗಳೂರಿನ ಎನ್ಎಂಪಿಟಿಯಿಂದ ಹೊರಟ ರಕ್ಷಣಾ ಬೋಟ್ಗಳು, ಕಡಲಿನ ರೌದ್ರಾವತಾರದಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೋಟ್ಗಳನ್ನು ಹಾಗೂ ಮೀನುಗಾರರನ್ನು ರಕ್ಷಿಸಿದೆ. ಮಂಗಳೂರಿನ ಸುತ್ತಮುತ್ತಲ ಕಡಲ ತೀರದಲ್ಲಿ ಮೀನುಗಾರಿಕೆಗೆ ಬಂದಿದ್ದ ಬೋಟ್ಗಳನ್ನು ರಕ್ಷಿಸಿ, ಅದರಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಮೀನುಗಾರರಿಗೆ ಮಂಗಳೂರಿನ ಎನ್ಎಂಪಿಟಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.