ದಕ್ಷಿಣ ಕನ್ನಡ: ವಾರ್ಷಿಕವಾಗಿ ಸುಮಾರು 90 ಕೋಟಿ ರೂಪಾಯಿ ಆದಾಯ ಹೊಂದಿರುವ ಕರ್ನಾಟಕದ ನಂಬರ್ ಒನ್ ಶ್ರೀಮಂತ ದೇಗುಲದ ಛಾವಣಿ ಸೋರುತ್ತಿದ್ದು ಅದನ್ನು ಶೀಘ್ರವಾಗಿ ದುರಸ್ತಿ ಮಾಡುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀನಾಥ್.ಟಿ.ಎಸ್ ಮನವಿ ಮಾಡಿದ್ದಾರೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಮನವಿ ಸಲ್ಲಿಸಿದ ಶ್ರೀನಾಥ್ ದೇವಸ್ಥಾನದಲ್ಲಿ ದುರಸ್ತಿ ಕಾರ್ಯಗಳು ಎದುರಾದಲ್ಲಿ ಅದನ್ನು ಸರಿಪಡಿಸಲು ಆರ್ಥಿಕ ಸಂಕಷ್ಟ ಇಲ್ಲ. ಆದರೂ ಈ ತರಹ ದೇವಸ್ಥಾನದ ಛಾವಣಿ ಸೋರುತ್ತಿರುವುದು ದೇಗುಲಕ್ಕೆ ಶೋಭೆ ತರುವ ವಿಚಾರವಲ್ಲ ಎಂದಿದ್ದಾರೆ.
ಗರ್ಭಗುಡಿ ಪ್ರವೇಶಿಸುವ ದ್ವಾರ ಹಾಗೂ ಶ್ರೀ ಉಮಾಮಹೇಶ್ವರಿ ಗುಡಿ ಛಾವಣಿಯಲ್ಲೂ ಸಮಸ್ಯೆಗಳು ಇದೆ ಎಂದು ಶ್ರೀನಾಥ್ ಹೇಳಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಭಕ್ತರ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಜಮನ್ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ:ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್