ಸುಬ್ರಹ್ಮಣ್ಯ : ತುರ್ತು ಸಮಯದಲ್ಲಿ ನೆರವಾಗುವ ಉದ್ದೇಶದಿಂದ ಸುಳ್ಯ ಅಗ್ನಿಶಾಮಕ ದಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಮೋಟಾರ್ ಚಾಲಿತ ಬೋಟ್‌ನ ಕೊಡುಗೆಯಾಗಿ ನೀಡಿತು.
ಮಳೆಗಾಲದಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಬೋಟ್ ಅಗತ್ಯತೆ ಹೆಚ್ಚಿರುತ್ತದೆ. ಇದನ್ನು ಮನಗಂಡ ಕುಕ್ಕೆ ಸುಬ್ರಮಣ್ಯ ಆಡಳಿತ ಮಂಡಳಿ ಸುಮಾರು 6.75 ಲಕ್ಷ ಮೌಲ್ಯದ ಬೋಟ್ ಖರೀದಿಸಿ ಸುಳ್ಯ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ನೀಡಿದೆ.
ಈ ಹಿಂದೆ ಕರ್ನಾಟಕ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕುಕ್ಕೆ ದೇವಸ್ಥಾನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ವೇಳೆಯಲ್ಲಿ ನೆರೆ ಪರಿಹಾರ ಸಂದರ್ಭದಲ್ಲಿ ಸಹಾಯಕವಾಗಲೆಂದು ಬೋಟ್ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.