ETV Bharat / state

ಕೇರಳಿಗರಿಗೆ ಆರ್​​ಟಿಪಿಸಿಆರ್ ಪರೀಕ್ಷೆ ಬಳಿಕ ರಾಜ್ಯದೊಳಗೆ ಅನುಮತಿ: ದ.ಕ ಜಿಲ್ಲಾಧಿಕಾರಿ - ಕೇರಳಿಗರಿಗೆ ಆರ್​​ಟಿಪಿಸಿಆರ್ ಪರೀಕ್ಷೆ ಬಳಿಕ ರಾಜ್ಯದೊಳಗೆ ಅನುಮತಿ

ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಜಿಲ್ಲೆಯ 4 ಭಾಗಗಳಲ್ಲಿ ಆರ್​​ಟಿಪಿಸಿಆರ್ ತಪಾಸಣೆ ನಡೆಸಿ ಒಳಬರಲು ಅವಕಾಶವನ್ನು ನೀಡಲಾಗುತ್ತಿದೆ. ನಾಳೆಯಿಂದ ಜಿಲ್ಲೆಯ ಕೇರಳದ ಎಲ್ಲಾ ಗಡಿಭಾಗದಲ್ಲಿ ಗ್ರಾಮಮಟ್ಟದಲ್ಲಿ ತಪಾಸಣೆ ನಡೆಸಿ ಕರ್ನಾಟಕ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

K V Rajendra
ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ
author img

By

Published : Mar 12, 2021, 4:34 PM IST

ಮಂಗಳೂರು: ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಕೇರಳ ರಾಜ್ಯದವರಿಗೆ ಜಿಲ್ಲೆಯ ಗಡಿಭಾಗದಲ್ಲಿರುವ ಗ್ರಾಮಗಳ ಮಟ್ಟದಲ್ಲಿಯೇ ಕೊರೊನಾ ಪರೀಕ್ಷೆ ನಡೆಸಿ ಒಳಬರಲು ಅನುಮತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಜಿಲ್ಲೆಯ 4 ಭಾಗಗಳಲ್ಲಿ ಆರ್​​ಟಿಪಿಸಿಆರ್ ತಪಾಸಣೆ ನಡೆಸಿ ಒಳಬರಲು ಅವಕಾಶವನ್ನು ನೀಡಲಾಗುತ್ತಿದೆ. ನಾಳೆಯಿಂದ ಜಿಲ್ಲೆಯ ಕೇರಳದ ಎಲ್ಲಾ ಗಡಿಭಾಗದಲ್ಲಿ ಗ್ರಾಮಮಟ್ಟದಲ್ಲಿ ತಪಾಸಣೆ ನಡೆಸಿ ಕರ್ನಾಟಕ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.

ಕೇರಳಿಗರಿಗೆ ಆರ್​​ಟಿಪಿಸಿಆರ್ ಪರೀಕ್ಷೆ ಬಳಿಕ ರಾಜ್ಯದೊಳಗೆ ಅನುಮತಿ: ಜಿಲ್ಲಾಧಿಕಾರಿ

ಕೇರಳದಿಂದ ಬರುವವರು ಜಿಲ್ಲೆಯ ಗ್ರಾಮಮಟ್ಟದಲ್ಲಿ ಆರ್​ಟಿಪಿಸಿಆರ್ ವರದಿಗಳನ್ನು ತೋರಿಸಿ ಕರ್ನಾಟಕ ಪ್ರವೇಶಿಸಬಹುದು. ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿಭಾಗದಲ್ಲಿರುವವರು ಜಾಗ್ರತೆಯಲ್ಲಿರಬೇಕು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳು ಹೆಚ್ಚಿನವು ಕೇರಳದಿಂದ ಬಂದವರದ್ದಾಗಿದೆ ಎಂದರು.

ಮಂಗಳೂರು ಏರ್​ಪೋರ್ಟ್​​ನಲ್ಲಿ ಶೀಘ್ರ ಆರ್​ಟಿಪಿಸಿಆರ್ ರಿಪೋರ್ಟ್ ನೀಡುವ ಖಾಸಗಿ ಸಂಸ್ಥೆಯನ್ನು ಗಡಿಭಾಗದಲ್ಲಿ ಕಾರ್ಯನಿರ್ವಹಿಸಿ ಶೀಘ್ರ ವರದಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಇದೀಗ 3ನೇ ಹಂತದ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, 60 ವರ್ಷ ಮೇಲ್ಪಟ್ಟವರು ಮತ್ತು ಸಹ ಕಾಯಿಲೆ ಹೊಂದಿರುವ 40 ವರ್ಷದಿಂದ 59 ವರ್ಷದವರು ಕೊರೊನಾ ಲಸಿಕೆ ಪಡೆಯಬಹುದು. 3ನೇ ಹಂತದಲ್ಲಿ ಕೊರೊನಾ ಲಸಿಕೆ ನೀಡಲು ದ.ಕ ಜಿಲ್ಲಾಡಳಿತ ಸಿದ್ಧತೆ ನಡೆದಿದೆ. ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರ ಮೂಲಕ ಕೊರೊನಾ ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಇದನ್ನೂ ಓದಿ: ಸಿಡಿ ಪ್ರಕರಣದ SIT ತನಿಖೆ ಚುರುಕು; ಓರ್ವನ ವಶಕ್ಕೆ ಪಡೆದು ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.