ETV Bharat / state

ಗಣರಾಜ್ಯೋತ್ಸವ ಪರೇಡ್​: ಪ್ರಧಾನಿ ಬೆಂಗಾವಲಾಗಿ ಕರ್ತವ್ಯ ನಿರ್ವಹಿಸಿದ ಮಂಗಳೂರಿನ ಕಾರ್ತಿಕ್ ಕಶ್ಯಪ್ - ಪದ್ಮ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ

74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೋದಿಯ ಬೆಂಗಾವಲು ಪಡೆಯಲ್ಲಿ ಮಂಗಳೂರಿನ ಯುವಕ ಕಾರ್ತಿಕ್ ಕಶ್ಯಪ್ ಕಾಣಿಸಿಕೊಂಡಿದ್ದರು.

karthik-kashyap
ಪ್ರಧಾನಿ ಬೆಂಗಾವಲು ಪಡೆಯಲ್ಲಿ ಮಂಗಳೂರಿನ ಕಾರ್ತಿಕ್ ಕಶ್ಯಪ್
author img

By

Published : Jan 27, 2023, 6:28 PM IST

ಮಂಗಳೂರು(ದಕ್ಷಿಣ ಕನ್ನಡ): ದೇಶದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಅಧಿಕಾರಿಯಾಗಿ ಮಂಗಳೂರಿನ ಕಾರ್ತಿಕ್ ಕಶ್ಯಪ್ ಕರ್ತವ್ಯ ನಿರ್ವಹಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯಾಗಿರುವ ಕಾರ್ತಿಕ್ ಕಶ್ಯಪ್ ಅವರನ್ನು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಭದ್ರತಾ ಕರ್ತವ್ಯದಲ್ಲಿ ನಿಯೋಜಿಸಲಾಗಿತ್ತು. ಮಂಗಳೂರು ಮಾಜಿ ಮೇಯರ್ ಶಂಕರ್ ಭಟ್ ಪುತ್ರ ಕಾರ್ತಿಕ್ ಕಶ್ಯಪ್ ನಿನ್ನೆ ಕಪ್ಪು ಕನ್ನಡಕ, ಟೈ - ಕೋಟ್​ಗಳನ್ನು ಧರಿಸಿ ಟಿಪ್ ಟಾಪ್ ಆಗಿ ವೇದಿಕೆಯಲ್ಲಿದ್ದರು.

ಕಾರ್ತಿಕ್‌ ಕಶ್ಯಪ್ ನಗರದ ಚಿನ್ಮಯ್ ಶಾಲೆ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ನಿಟ್ಟೆ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದರು. ಬಳಿಕ ಯುಪಿಎಸ್​ಸಿ ತರಬೇತಿಗೆ ದಿಲ್ಲಿಗೆ ತೆರಳಿದ್ದರು. ತಮ್ಮ 23ನೇ ವಯಸ್ಸಿಗೆ ಯುಪಿಎಸ್​​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಇವರು ಐಎಎಸ್ ಪದವಿ ಪಡೆಯುವ ಅವಕಾಶವಿದ್ದರೂ ಐಪಿಎಸ್​ನಲ್ಲಿ ಸೇವೆಗೆ ಸೇರಿದರು.

Karthik Kashyap
ಕಾರ್ತಿಕ್ ಕಶ್ಯಪ್

ಐಪಿಎಸ್ ಅವಧಿಯಲ್ಲಿ ಬೆಸ್ಟ್ ಸ್ಟೂಡೆಂಟ್ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದು ಎನ್ನುವುದು ವಿಶೇಷ. ಬಳಿಕ ಐಪಿಎಸ್ ನಲ್ಲಿ ಗುಜರಾತ್ ಕೆಡರ್ ತೆಗೆದುಕೊಂಡು ಅಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಯುಪಿಎಸ್ ಸಿಯಲ್ಲಿ ತಮ್ಮ ಬ್ಯಾಚ್​​ಮೇಟ್ ಆಗಿರುವ ಪ್ರಿಯಾಂಕಾ ಕಶ್ಯಪ್ ಅವರನ್ನು ವಿವಾಹವಾಗಿರುವ ಇವರು, ತಮ್ಮ ಸೇವಾ ವ್ಯಾಪ್ತಿಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಬದಲಾಯಿಸಿಕೊಂಡರು. ಅಲ್ಲಿ ಜೊತೆಯಾಗಿ ಈ ದಂಪತಿ ಸೇವೆ ಸಲ್ಲಿಸಿದ್ದರು. ಗೋವಾದಲ್ಲಿ ಆರು ವರ್ಷಗಳ ಕಾಲ ಎಸ್​ಪಿಯಾಗಿ ಅವರು ಸೇವೆ ಕೂಡಾ ಸಲ್ಲಿಸಿದ್ದಾರೆ.

ಕರ್ತವ್ಯಪಥದಲ್ಲಿ ನಾರೀಶಕ್ತಿ: ನಿನ್ನೆ ದೆಹಲಿಯ ರಾಜಪಥದ ಹೆಸರು ಕರ್ತವ್ಯಪಥ ಎಂದು ಬದಲಾದ ನಂತರ ನಡೆದ ಗಣರಾಜ್ಯೋತ್ಸವದ ಮೊದಲ ಪರೇಡ್​ನಲ್ಲಿ ಹಲವಾರು ವಿಭಿನ್ನತೆಗಳು ಮತ್ತು ಪ್ರಥಮಗಳಿದ್ದವು. ಬ್ರಿಟಿಷ್​ ಆಳ್ವಿಕೆಯ ಸಂಪ್ರದಾಯ ಮುರಿದು ದೇಶೀಯ ವೈವಿಧ್ಯತೆ ಮೆರೆಯಿತು. ಆತ್ಮನಿರ್ಭರದ ಅಡಿ ತಯಾರಾದ ಸೇನಾ ವಾಹನಗಳ ಪ್ರದರ್ಶನ ಮೆರೆಯಿತು. ಕರ್ತವ್ಯಪಥದಲ್ಲಿ 23 ಸ್ತಬ್ಧಚಿತ್ರಗಳ ಮೆರವಣಿಗೆಯೂ ದೇಶದ ವೈವಿಧ್ಯತೆಗೆ ಬೆಳಕು ಚೆಲ್ಲಿತು.

ಕರ್ನಾಟಕದ ನಾರೀಶಕ್ತಿ ಟ್ಯಾಬ್ಲೋವೂ ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ತ್ರಿಪುರದ ಜೊತೆ ಗಮನ ಸೆಳೆಯಿತು. ಕರ್ನಾಟಕದ ಸ್ತಬ್ಧಚಿತ್ರ ಪದ್ಮ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲುಮರದ ತಿಮ್ಮಕ್ಕನನ್ನು ಒಳಗೊಂಡಿತ್ತು. 2000 ವರ್ಷ ಇತಿಹಾಸದ ಸಮರ ಕಲೆಯ ಜೊತೆಗೆ ಮಹಿಳಾ ಸಾಕ್ಷರತೆಯ ಟ್ಯಾಬ್ಲೂ ಕೇರಳದಿಂದ ಮತ್ತು ಮಹಿಳಾ ಸಬಲೀಕರಣ, ಸಂಸ್ಕೃತಿಯ ಪ್ರತೀಕವಾದ ಭಾರತದ ನಾಟ್ಯ, ರಾಣಿ ವೇಲು ನಾಚಿಯರ್​ ಅವರನ್ನು ಒಳಗೊಂಡ ತಮಿಳುನಾಡಿನ ಸ್ತಬ್ಧಚಿತ್ರ ಪ್ರದರ್ಶನವಾಯಿತು.

ಹಲವು ಪ್ರಥಮಗಳಿಗೆ ಸಾಕ್ಷಿಯಾದ ಗಣರಾಜ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮೊದಲ ಗಣರಾಜ್ಯೋತ್ಸವ. ರಾಜಪಥವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಿದ ನಂತರದ ಮೊದಲ ಪರೇಡ್​. ದೇಶಿ ನಿರ್ಮಿತ ಕುಶಾಲತೋಪುಗಳಿಂದ ಗೌರವ. ಜನಸಾಮಾನ್ಯರಿಗೆ ಎದುರಿನ ಕುರ್ಚಿಯಲ್ಲಿ ಪರೇಡ್​ ನೋಡಲು ಅವಕಾಶ. ಬೈಕ್​ರೈಡರ್​ ತಂಡಕ್ಕೆ ಮಹಿಳಾ ಸಾರಥ್ಯ ಮತ್ತು ಅಗ್ನಿವೀರ ಯೋಧರು ಪರೇಡ್​ನಲ್ಲಿ ಭಾಗಿ ಹಾಗೇ ಈಜಿಪ್ಟ್​ನ ಬ್ಯಾಂಡ್​ ಮತ್ತು ಸಶಸ್ತ್ರಪಡೆ ಪಥಸಂಚಲನದಲ್ಲಿ ಭಾಗವಹಿಸಿದ್ದು ಇದೇ ಮೊದಲ ಬಾರಿ.

ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ: ಸ್ತಬ್ಧಚಿತ್ರಗಳ ಆಕರ್ಷಣೆ, ವೈಮಾನಿಕ ಶಕ್ತಿ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.