ETV Bharat / state

ನೆರೆ ಪೀಡಿತ 13 ರಾಜ್ಯಗಳಲ್ಲಿ ಕೇಂದ್ರದ ಮೊದಲ ಅನುದಾನ ಕರ್ನಾಟಕಕ್ಕೆ: ನಳಿನ್​​ ಕುಮಾರ್​​​ ‌ಕಟೀಲ್​​ - ಕರ್ನಾಟಕ್ಕೆ ನೆರೆ ಅನುದಾನ ಬಿಡುಗಡೆ

ದೇಶದಲ್ಲಿ 13 ರಾಜ್ಯಗಳಲ್ಲಿ ನೆರೆ ಇದ್ದರೂ ಪ್ರಥಮವಾಗಿ ಅನುದಾನ ಬಿಡುಗಡೆ ಆದ್ದದ್ದು ಕರ್ನಾಟಕಕ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.

ನೆರೆಪೀಡಿತ 13 ರಾಜ್ಯಗಳಲ್ಲಿ ಕೇಂದ್ರದ ಮೊದಲ ಅನುದಾನ ಕರ್ನಾಟಕಕ್ಕೆ
author img

By

Published : Oct 7, 2019, 9:11 PM IST

ಪುತ್ತೂರು: ರಾಷ್ಟ್ರದಲ್ಲಿ 13 ರಾಜ್ಯಗಳಲ್ಲಿ ನೆರೆ ಇದ್ದರೂ ಪ್ರಥಮವಾಗಿ ಅನುದಾನ ಬಿಡುಗಡೆ ಆದ್ದದ್ದು ಕರ್ನಾಟಕಕ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.

ಕೆಯುಐಡಿಎಫ್‍ಸಿ ಹಾಗೂ ಪುತ್ತೂರು ನಗರಸಭೆ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಳಿನ್ ಕುಮಾರ್ ‌ಕಟೀಲ್ ಮಾತನಾಡಿದರು. ಎಡಿಬಿ ಯೋಜನೆಯಡಿ ರೂ. 112.08 ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಶಿಲಾನ್ಯಾಸ ಮತ್ತು ಪುರಭವನದಲ್ಲಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಗರದ 30 ವರ್ಷ ಹಳೆಯ ರಸ್ತೆಗಳು, ಕುಡಿಯುವ ನೀರಿನ ಪೈಪ್‍ಗಳು ಸೇರಿ ಒಟ್ಟು ಯೋಜನೆಗಳಿಲ್ಲದೆ ಮಾಡಿದ ಕಾರ್ಯದ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಮುತುವರ್ಜಿ ವಹಿಸಿದ್ದಾರೆ. ಪುತ್ತೂರು ನಗರಕ್ಕೆ ಮುಂದಿನ 30 ವರ್ಷಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ರೂ. 113.08 ಕೋಟಿಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಯಶಸ್ವಿಯಾಗಲಿ. ಪುತ್ತೂರಿನ ಜನತೆ ನಿರಂತರವಾಗಿ ಕುಡಿಯುವ ನೀರಿನ ಬಳಕೆ ಮಾಡಲಿ ಎಂದು ಹಾರೈಸಿದರು.

ನೆರೆಪೀಡಿತ 13 ರಾಜ್ಯಗಳಲ್ಲಿ ಕೇಂದ್ರದ ಮೊದಲ ಅನುದಾನ ಕರ್ನಾಟಕಕ್ಕೆ: ಕಟೀಲ್​

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನ ಜನತೆ ತಮ್ಮ ಕಲುಷಿತ ನೀರನ್ನು ಮತ್ತೆ ತಾವೇ ಕುಡಿಯಬಾರದು ಎಂಬುದು ನನ್ನ ಉದ್ದೇಶ. ಈಗಾಗಲೇ ಕಲುಷಿತ ನೀರು ಹಳ್ಳಗಳ ಮೂಲಕ ನೇತ್ರಾವತಿ ನದಿಗೆ ಸೇರುತ್ತಿದೆ. ಅದನ್ನು ಮತ್ತೆ ಶುದ್ಧೀಕರಿಸಿ ಕುಡಿಯುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಸಮರ್ಪವಾಗಿ ಅಂಡರ್ ಡ್ರೈನೇಜ್ ಸಿಸ್ಟಮ್ ಆಗಬೇಕು. ಅದಕ್ಕಾಗಿ ಹಿಂದೆ ರೂ. 125 ಕೋಟಿ ಅನುದಾನ ಮಂಜೂರುಗೊಂಡಿತ್ತು. ಇದೀಗ ಅದನ್ನು ಮತ್ತೆ ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Intro:Body:ನೆರೆಪೀಡಿತ 13 ರಾಜ್ಯಗಳಲ್ಲಿ ಕೇಂದ್ರದ ಮೊದಲ ಅನುದಾನ ಸಿಕ್ಕಿದ್ದು ಕರ್ನಾಟಕಕ್ಕೆ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ‌ಕಟೀಲ್

ಪುತ್ತೂರು:ರಾಷ್ಟ್ರದಲ್ಲಿ 13 ರಾಜ್ಯಗಳಲ್ಲಿ ನೆರೆ ಇದ್ದರೂ ಪ್ರಥಮವಾಗಿ ಅನುದಾನ ಬಿಡುಗಡೆ ಆದ್ದದ್ದು ಕರ್ನಾಟಕಕ್ಕೆ ಎಂದರು.
ಇಚ್ಛಾಶಕ್ತಿಯ ರಾಜಕಾರಣದಿಂದ ಪರಿವರ್ತನೆ ಆಗುತ್ತಿದ್ದು, ರಾಷ್ಟ್ರ ಮತ್ತು ರಾಜ್ಯದಲ್ಲೂ ಪರಿವರ್ತನೆ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಕೆಯುಐಡಿಎಫ್‍ಸಿ ಹಾಗೂ ಪುತ್ತೂರು ನಗರಸಭೆ ಇದರ ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ರೂ. 112.08ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ 24*7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಶಿಲಾನ್ಯಾಸ ಮತ್ತು ಪುರಭವನದಲ್ಲಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ನಗರಗಳನ್ನು ಅಭಿವೃದ್ಧಿ ಪಡಿಸಿದಂತೆ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಪರಿಕಲ್ಪನೆ ಇರುವ ಸಂದರ್ಭದಲ್ಲಿ ನೆರೆ ಬರದಿಂದ ಒಂದಷ್ಟು ಕಷ್ಟ ಆಗಿತ್ತು. ಈ ಕುರಿತು ಹಲವಾರು ಟೀಕೆಗಳ ಮಧ್ಯೆಯೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲಿ ದೊಡ್ಡ ತೀರ್ಮಾಣ ಮಾಡಿದ್ದಾರೆ. ಹಿಂದೆ ಹಿಂದೆ ಎನ್.ಡಿ.ಆರ್.ಎಫ್ ಮತ್ತು ಎಸ್‍ಜಿಆರ್‍ಎಫ್ ಆಧಾರದಲ್ಲಿ ನಿರಾಶ್ರಿತರಿಗೆ ಮನೆಗಳನ್ನು ಕೊಡುವ ಕೆಲಸ ಆದರ ಗೈಡ್ ಲೈನ್ ಪ್ರಕಾರ ರೂ.95,100 ಮಾತ್ರ ವಿತರಣೆ ಆಗುತ್ತಿತ್ತು. ಆದರೆ ಯಡಿಯೂರಪ್ಪ ಅವರು ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು ಒಂದು ಮನೆಗೆ ರೂ. 5ಲಕ್ಷ ನೀಡಬೇಕು ಎಂದು ಘೋಷಣೆ ಮಾಡಿದ್ದಲ್ಲೆ ಅನುದಾನ ಬಿಡುಗಡೆಯು ಮಾಡಿದ್ದಾರೆ. ಸಂತ್ರಸ್ತರಿಗೆ ಆ ಹಣವನ್ನು ಅವರ ಖಾತೆಗಳಿಗೆ ಆರ್‍ಟಿಜಿಎಸ್ ಮಾಡಿಸಿದ್ದಾರೆ. ಈಗಾಗಲೇ ಪ್ರತಿಯೊಬ್ಬನ ಖಾತೆಗೂ ಮೊದಲ ರೂ.1ಲಕ್ಷ ಹಾಕಲಾಗಿದೆ. ಗಂಜಿಕೇಂದ್ರದಲ್ಲಿ ಇರುವವರಿಗೆ ತಲಾ ರೂ. 10ಸಾವಿರ, ಬಾಡಿಗೆ ಮನೆಗೆ ರೂ. 5ಸಾವಿರ, ಜೊತೆಗೆ ನೆರೆಯಿಂದ ಜಾಗ ಕಳೆದು ಕೊಂಡವರಿಗೆ ಜಾಗ ಕೊಡುವ ಕೆಲಸ ಮೊದಲ ಬಾರಿಗೆ ಯಡಿಯೂರಪ್ಪ ಸರಕಾರ ಮಾಡಿದೆ. ಈಗಾಗಲೇ ಹಲವು ಕಡೆ ಜಾಗಗಳನ್ನು ಗುರುತಿಸಲಾಗಿದೆ . ಇದು ಜನರ ಸಮಸ್ಯೆಗಳ ಜೊತೆ ಸ್ಪಂಧನ ಮಾಡುತ್ತಿರುವ ಅತ್ಯುತ್ತಮ ಸರಕಾರ . ಬಹಳಷ್ಟು ಜನ ಎನ್.ಡಿ.ಆರ್.ಎಫ್ ಮತ್ತು ಎಸ್‍ಡಿಆರ್‍ಎಫ್ ಜೊತೆ ಟೀಕೆಗಳನ್ನು ಮಾಡುತ್ತಿದ್ದರು. ಆದರೆ ಈಗಾಗಲೇ ರೂ.1200 ಕೋಟಿ ಹಣವನ್ನು ಮದ್ಯಂತರವಾಗಿ ಬಿಡುಗಡೆ ಮಾಡಿದೆ ಎಂದರು.

ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ನಗರೋತ್ಥಾನದಲ್ಲಿ ಅತಿ ಹೆಚ್ಚು ಅನುದಾನ ಪುತ್ತೂರಿಗೆ ನೀಡಿದ್ದರು. ಇದೀಗ ಮತ್ತೊಮ್ಮೆ ಹಲವಾರು ಯೋಜನೆಗಳಿಗೆ ಚಾಲನೆ ನೀಡುವ ಕೆಲಸ ಮಾಡಿದ್ದಾರೆ. ಕೇಂದ್ರ ಸರಕಾರವೂ ನೆರೆ ಪರಿಹಾರಕ್ಕೆ ಅನುದಾನ ನೀಡಿದೆ. ಕೇಂದ್ರ ಸರಕಾರ ಪುತ್ತೂರಿಗೆ ದೀನ್ ದಯಾಳ್ ಉಪಾಧ್ಯಾಯರ ಯೋಜನೆಯಡಿಯಯಲ್ಲಿ ಸುಮಾರು ರೂ. 45 ಕೋಟಿ ಹಣ ಬಿಡುಗಡೆ ಮಾಡಿದೆ. ಈಗಾಗಲೇ ಹಾರಾಡಿಯ ರೈಲ್ವೇ ಸ್ಟೇಷನ್ ರಸ್ತೆಗೆ ರೂ.1.60 ಕೋಟಿ ಬಿಡುಗಡೆ ಆಗಿದ್ದು, ಕಾಮಗಾರಿ ನಡೆಯಲಿದೆ

ನಗರಪ್ರದೇಶಕ್ಕೆ ಸೀಮಿತವಾಗಿ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಬಹಳ ದೊಡ್ಡ ಅಗತ್ಯದ ಕೆಲಸ. ಇದು ಪುತ್ತೂರು ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದೇಶಕ್ಕೆ ದೊಡ ಸಮಸ್ಯೆಯಾಗಿದೆ. ನಮ್ಮಲ್ಲಿ ಹತ್ತಾರು ನದಿ ಪಾತ್ರಗಳು, ಸಮುದ್ರ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೆ ಇದು ಆಶ್ಚರ್ಯ ಆಗುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿನ ಅವೈಜ್ಞಾನಿಕ ಕಾಮಗಾರಿಗಳು . ಯಾವ ನಗರ ಹೇಗೆ ಬೆಳೆಯಬೆಕೆಂಬ ಮಾನಸಿಕತೆ ನಗರಸಭೆಯಲ್ಲಿ ಇರಬೇಕು ಎಂದು ಹೇಳಿದರು

ನಗರದ ಅಭಿವೃದ್ಧಿಗಾಗಿ ನಗರಯೋಜನಾ ಪ್ರಾದೇಶಿಕ ಕಚೇರಿ, ಕಾನೂನುಗಳಿದ್ದರೂ ಕಟ್ಟಡಗಳಿಗೆ ಕೊಡುವ ಪರವಾನಿಗೆ ನಿಯಮಗಳು ಸರಿ ಇದೆಯೇ ಎಂಬುದನ್ನು ಗಮನಿಸಬೇಕು. ಇಲ್ಲಿನ 30 ವರ್ಷ ಹಳೆಯ ರಸ್ತೆಗಳು, ಕುಡಿಯುವ ನೀರಿನ ಪೈಪ್‍ಗಳು ಒಟ್ಟು ಯೋಜನೆಗಳಿಲ್ಲದೆ ಮಾಡಿದ ಕಾರ್ಯದ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳು ಪರಿಹಾರ ಮಾಡುವ ನಿಟ್ಟಿನಲ್ಲಿ ಶಾಸಕರು ಮುತುವರ್ಜಿ ವಹಿಸಿದ್ದಾರೆ. ಜೊತೆಗೆ ಕಳೆದ ಒಂದೂವರೆ ವರ್ಷದಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದರೂ ಅಧಿಕಾರ ಸಿಗದೆ ಇರುವ ಸದಸ್ಯರಿಗೆ ಮುಂದೆ ಅತಿ ಶೀಘ್ರದಲ್ಲಿ ನಿಮ್ಮ ಅಧಿಕಾರ ಕೊಡುವ ಕಾರ್ಯಗಳು ನಡೆಯಲಿದೆ ಈ ಕುರಿತು ಮುಖ್ಯಮಂತ್ರಿಗಳಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಪುತ್ತೂರು ನಗರಕ್ಕೆ ಮುಂದಿನ 30 ವರ್ಷಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ರೂ. 113. 08 ಕೋಟಿಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಯಶಸ್ವಿಯಾಗಲಿ ಪುತ್ತೂರಿನ ಜನತೆ ನಿರಂತರವಾಗಿ ಕುಡಿಯುವ ನೀರಿನ ಬಳಕೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪುತ್ತೂರಿನ ಜನತೆ ತಮ್ಮ ಕಲುಷಿತ ನೀರನ್ನು ಮತ್ತೆ ತಾವೆ ಕುಡಿಯಬಾರದು ಎಂಬುದು ನನ್ನ ಉದ್ದೇಶ. ಈಗಾಗಲೇ ಕಲುಷಿತ ನಿರು ಕೊಳ ಹಲ್ಲಗಳ ಮೂಲಕ ನೇತ್ರಾವತಿ ನದಿಗೆ ಸೇರುತ್ತಿದೆ. ಅದನ್ನು ಮತ್ತೆ ಶುದ್ದೀಕರಿಸಿ ಕುಡಿಯುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಸಮರ್ಪವಾಗಿ ಅಂಡರ್ ಡ್ರೈನೆಜ್ ಸಿಸ್ಟಮ್ ಆಗಬೇಕು. ಅದಕ್ಕಾಗಿ ಹಿಂದೆ ರೂ.125 ಕೋಟಿ ಅನುದಾನ ಮಂಜೂರುಗೊಂಡಿತ್ತು. ಇದೀಗ ಅದನ್ನು ಮತ್ತೆ ಪುನರ್ ಜೀವ ಗೊಳಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಪುತ್ತೂರು ನಗರಸಭೆಗೆ ಎಸ್‍ಎಫ್‍ಸಿ ಅನುದಾನದಲ್ಲಿ ರೂ. 5 ಕೋಟಿ ಅನುದನ ಬಿಡುಗಡೆಯಾಗಿದ್ದು, ಇದರ ಜೊತೆಗೆ ರೂ. 35 ಕೋಟಿ ದ.ಕ ಜಿಲ್ಲೆಗೆ ಬಿಡುಗಡೆಯಾಗಿದೆ. ಇದರಿಂದ ರಸ್ತೆಯ ಗುಂಡಿಗಳ ದುರಸ್ಥಿ ಕಾರ್ಯ ನಡೆಯಲಿದೆ. ಮುಂದೆ ಇನ್ನಷ್ಟು ಅನುದಾನದ ಬರುವ ಭರವಸೆ ಇದೆ ಎಂದರು.
ಪೌರಾಯುಕ್ತೆ ರೂಪಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ, ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಎಸ್‍ಪಿಪಿಎಲ್, ಎಸ್‍ಐಪಿಎಲ್, ಡಿಆರ್‍ಎಸ್ ಇನ್‍ಫ್ರಾಟೆಕ್ ಪ್ರೈ ಲಿನ ಸಂಸ್ಥೆಯ ಪ್ರಮೋದ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯರಾದ ಗೌರಿ ಬನ್ನೂರು, ಪ್ರೇಮಲತಾ ನಂದಿಲ, ನಗರಸಭೆ ಕಂದಾಯನಿರೀಕ್ಷಕ ರಾಧಾಕೃಷ್ಣ ಗೌಡ ಪ್ರಾರ್ಥಿಸಿದರು.ಕೆಯುಐಡಿಎಫ್‍ಸಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.