ETV Bharat / state

ರಾಜಕೀಯ ವಲಯದಲ್ಲಿ ಕರಾವಳಿ ಕರ್ನಾಟಕದ ಪಾತ್ರ: ಚರಿತ್ರೆ ಹೇಳುವ ಸಂಗತಿಗಳು - ವಿಧಾನಸಭಾ ಚುನಾವಣಾ ಕಾವು

ಕರಾವಳಿ ಕರ್ನಾಟಕ ರಾಜ್ಯ ರಾಜಕೀಯ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಭಾಗದಿಂದ ಆಯ್ಕೆಯಾದ ಅದೆಷ್ಟೋ ಜನಪ್ರತಿನಿಧಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇತಿಹಾಸ. ಚುನಾವಣಾ ಕಾರಣದಿಂದ ಅಷ್ಟೇ ಅಲ್ಲದೇ ಬೇರೆ ಬೇರೆ ಕೆಲವು ಕಾರಣಗಳಿಂದ ಕರಾವಳಿ ಕರ್ನಾಟಕ, ದೇಶಾದ್ಯಂತ ಚರ್ಚೆಯಾಗುತ್ತಿರುವುದು ಗಮನಾರ್ಹದ ಸಂಗತಿ.

Karavali Karnataka
Karavali Karnataka
author img

By

Published : Apr 22, 2023, 2:10 PM IST

Updated : Apr 22, 2023, 3:31 PM IST

ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ವಿಚಾರಗಳು ಚುನಾವಣೆ ವೇಳೆ ಮಾತ್ರ ಚರ್ಚೆಗೆ ಬಂದರೆ ಕರಾವಳಿ ಕರ್ನಾಟಕದಲ್ಲಿ ಸ್ವಲ್ಪ ಭಿನ್ನ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಒಳಗೊಂಡಿರುವ ಈ ಭಾಗ ಅರಬ್ಬಿ ಸಮುದ್ರದ ತಟದಲ್ಲಿದೆ. ಹಾಗಾಗಿಯೇ ಇದನ್ನು ಕರಾವಳಿ ಕರ್ನಾಟಕ ಎಂದು ಕರೆಯುವುದುಂಟು. ಚುನಾವಣಾ ಕಾರಣದಿಂದ ಅಷ್ಟೇ ಅಲ್ಲದೇ ಬೇರೆ ಬೇರೆ ಕೆಲವು ಕಾರಣಗಳಿಂದ ಕರಾವಳಿ ಕರ್ನಾಟಕ, ದೇಶಾದ್ಯಂತ ಗಮನ ಸೆಳೆಯುತ್ತಿರುವುದು ಗಮನಾರ್ಹದ ಸಂಗತಿ.

Karavali Karnataka
ಕರಾವಳಿ ಕರ್ನಾಟಕ

ಕರಾವಳಿ ಕರ್ನಾಟಕದ ರಾಜಕಾರಣದಲ್ಲಿ ಎಸ್​ಡಿಪಿಐ ಪಕ್ಷದ ಅಂಗ ಸಂಸ್ಥೆಗಳಾದ ಪಿಎಫ್ಐ, ಸಿಎಫ್ಐ ನಿಷೇಧ ಮಾಡಿರುವುದು ಚರ್ಚೆಯ ವಿಷಯ. ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಜಂಡಾಗಳ ಮೂಲಕ ಆಗಾಗ ಸದ್ದು ಮಾಡುತ್ತಲೇ ಬಂದಿರುವುದು ಈ ಭಾಗದ ಚರಿತ್ರೆ. ಕರಾವಳಿ ಕರ್ನಾಟಕದಲ್ಲಿ ಸದ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದೆ. ಮೂರು ಜಿಲ್ಲೆಗಳಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು ಜೆಡಿಎಸ್ ಪ್ರಾಬಲ್ಯಕ್ಕಾಗಿ ಹೋರಾಟಕ್ಕಿಳಿದೆ. ಕೈ-ಕಮಲದ ನಡುವೆ ಜಿದ್ದಾಜಿದ್ದಿನ ಹೋರಾಟ ಎಂದೇ ಹೇಳಬಹುದು.

ಕರಾವಳಿ ಕರ್ನಾಟಕದ ಪ್ರಮುಖ ರಾಜಕಾರಣಿಗಳು: ಕರಾವಳಿ ಕರ್ನಾಟಕದಿಂದ ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಗುರುತಿಸಿಕೊಂಡವರ ಪಟ್ಟಿ ದೊಡ್ಡದೇ ಇದೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯದಲ್ಲಿ ಆರು ಬಾರಿ ಬಿಜೆಪಿ ಶಾಸಕರಾಗಿದ್ದ ಅಂಗಾರ, ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ, ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಆರ್ ವಿ ದೇಶಪಾಂಡೆ, ಮಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ ರಮಾನಾಥ ರೈ ಹಾಗೂ ಯು ಟಿ ಖಾದರ್ ಇದೇ ಕರಾವಳಿ ಕರ್ನಾಟಕದ ಭಾಗದವರು. ಸದ್ಯದ ರಾಜಕಾರಣದಲ್ಲಿ ಚಾಲ್ತಿಯಲ್ಲಿರುವ ಹೆಸರು ಕೂಡ ಇವೆ ಆಗಿವೆ.

Karavali Karnataka
ಕರಾವಳಿ ಕರ್ನಾಟಕ

ಇಲ್ಲಿ ಮೀನುಗಾರಿಕೆಯೇ ಮೂಲ ಉದ್ಯಮ, ಕಸಬು: ಕರಾವಳಿ ಕರ್ನಾಟಕದ ಮೂರು ಜಿಲ್ಲೆಯಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಸಾವಿರಾರು ಕೋಟಿ ವ್ಯವಹಾರ ಮಾಡುವ ಮತ್ಸೋದ್ಯಮ ಇನ್ನೂ ಕೆಲವು ಸಮಸ್ಯೆಯಿಂದ ಹೊರ ಬರದಿರುವುದು ದುರ್ದೈವ. ಬಡ ಮೀನುಗಾರರಿಗೆ ವಸತಿ ಸಮಸ್ಯೆ, ಕಡಲ್ಕೊರೆತ, ಸೀಮೆ ಎಣ್ಣೆ ಅಲಭ್ಯತೆ, ಡೀಸೆಲ್ ಸಬ್ಸಿಡಿ ಸಿಗದಿರುವುದು ಸೇರಿದಂತೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವ ಬೀಡಿ ಉದ್ಯಮ ನಶಿಸುತ್ತಿದೆ.

ಸುಸಜ್ಜಿತ ಆಸ್ಪತ್ರೆ ಬೇಕು ಎಂಬುದು ಬಹುದಿನದ ಬೇಡಿಕೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಬೇಡಿಕೆ ಇದೆ. ಉತ್ತರ ಕನ್ನಡದ 6 ಕ್ಷೇತ್ರಗಳಲ್ಲಿಯೂ ನಿರುದ್ಯೋಗ ಸಮಸ್ಯೆ, ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದು, ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ನೀಡದಿರುವುದು, ಕರಾವಳಿ ತಾಲೂಕುಗಳಲ್ಲಿ ಉಪ್ಪು ನೀರಿನ ಸಮಸ್ಯೆ, ಕೈಗಾರಿಕೆಗಳು ಇಲ್ಲದಿರುವುದು, ಸೀಬರ್ಡ್, ಕರಾವಳಿಯಲ್ಲಿ ಪ್ರವಾಹ ಪರಿಹಾರ ಬಾರದಿರುವುದು, ಮೂಲ ಸೌಕರ್ಯ ಸಮಸ್ಯೆ ಬಹುದೊಡ್ಡ ಸಮಸ್ಯೆಗಳಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಈ ವಿಚಾರಗಳಾವು ಮುನ್ನೆಲೆಗೆ ಬರದಿರುವುದು ಈ ಭಾಗದ ಜನರ ದುರಂತ.

Karavali Karnataka
ಕರಾವಳಿ ಕರ್ನಾಟಕ

ಕರಾವಳಿಯಲ್ಲಿ ಈ ಸಮುದಾಯಗಳಲ್ಲದೇ ಪ್ರಭಾವ: ಕರಾವಳಿಯಲ್ಲಿ ಬಿಲ್ಲವ, ಬಂಟ ಸಮುದಾಯ ಪ್ರಮುಖ ಸಮುದಾಯಗಳಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಲ್ಲವ ಸಮುದಾಯಕ್ಕೆ ಪ್ರತಿ ಪಕ್ಷಗಳು ಆದ್ಯತೆ ನೀಡಬೇಕೆಂಬ ಬೇಡಿಕೆ ಇದೆ. ಬಿಲ್ಲವ ಸಮುದಾಯದ ಹೆಚ್ಚಿನವರು ಬಿಜೆಪಿ ಜೊತೆಗಿದೆ. ಬಂಟ ಸಮುದಾಯವು ಪ್ರಮುಖ ಸಮುದಾಯವಾಗಿದ್ದು, ಈ ಭಾಗದಲ್ಲಿ ಬಂಟ ಸಮುದಾಯದವರಿಗೆ ಚುನಾವಣೆ ಸ್ಪರ್ಧೆಗೆ ಎರಡು ಪಕ್ಷಗಳಿಂದಲೂ ಪ್ರತಿ ಬಾರಿಯು ಪ್ರಾತಿನಿಧ್ಯ ಸಿಗುತ್ತಿದೆ.

Karavali Karnataka
ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆ: ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದೆ. ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳಿದೆ. ಈ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರವೊಂದರಲ್ಲಿ ಕಾಂಗ್ರೆಸ್​ನಿಂದ ಯು ಟಿ ಖಾದರ್ ಮಾತ್ರ ಗೆಲುವು ಕಂಡರೆ ಮತ್ತು ಉಳಿದ 7 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಮಂಗಳೂರು ದಕ್ಷಿಣ ಕ್ಷೇತ್ರದಿಂದ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದಿಂದ ಭರತ್ ಶೆಟ್ಟಿ, ಮೂಡುಬಿದಿರೆ ಕ್ಷೇತ್ರದಿಂದ ಉಮಾನಾಥ ಕೋಟ್ಯಾನ್, ಬಂಟ್ವಾಳ ಕ್ಷೇತ್ರದಿಂದ ರಾಜೇಶ್ ನಾಯ್ಕ್, ಬೆಳ್ತಂಗಡಿ ಕ್ಷೇತ್ರದಿಂದ ಹರೀಶ್ ಪೂಂಜಾ, ಪುತ್ತೂರು ಕ್ಷೇತ್ರದಿಂದ ಸಂಜೀವ ಮಠಂದೂರು, ಸುಳ್ಯ ಕ್ಷೇತ್ರದಿಂದ ಅಂಗಾರ ಜಯ ಗಳಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ, ಬಂಟ್ಸ್, ಮುಸ್ಲಿಂ, ಮೊಗವೀರರು ಎಂಬ ಪ್ರಮುಖ ಸಮುದಾಯಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 17,58,647 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,60,396, ಮಹಿಳೆಯರು 8,98,176 ಮತ್ತು ತೃತೀಯ ಲಿಂಗಿಗಳು 75 ಇದ್ದಾರೆ.

Karavali Karnataka
ಉತ್ತರ ಕನ್ನಡ ಜಿಲ್ಲೆ

ಉತ್ತರ ಕನ್ನಡ: ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. ಕಾರವಾರ, ಕುಮಟಾ, ಭಟ್ಕಳ-ಹೊನ್ನವಾರ, ಶಿರಸಿ-ಸಿದ್ದಾಪುರ, ಯಲ್ಲಾಪುರ-ಮುಂಡಗೋಡ, ಹಳಿಯಾಳ-ಜೋಯಿಡಾ ಕ್ಷೇತ್ರಗಳಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಬಿಜೆಪಿಯಿಂದ ರೂಪಾಲಿ ನಾಯ್ಕ, ಕುಮಟ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿನಕರ ಶೆಟ್ಟಿ, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುನೀಲ್ ಬಿ ನಾಯ್ಕ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಶಿವರಾಮ ಹೆಬ್ಬಾರ, ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಆರ್ ವಿ ದೇಶಪಾಂಡೆ ಗೆಲುವು ಸಾಧಿಸಿದ್ದರು. ಮೀನುಗಾರರು, ಕೊಂಕಣ ಮರಾಠ, ಕೋಮಾರಪಂಥ, ಹಾಲಕ್ಕಿ ಒಕ್ಕಲಿಗ, ನಾಮಧಾರಿ, ಮುಸ್ಲಿಮರು ಪ್ರಮುಖ ಸಮುದಾಯವಾಗಿದೆ. 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮತದಾರರು 11,83,461 ಆಗಿದ್ದು ಇದರಲ್ಲಿ 5,94,244, ಪುರುಷರು, 5,89,211 ಮಹಿಳೆಯರು ಹಾಗೂ 6 ತೃತೀಯ ಲಿಂಗಿಗಳು ಇದ್ದಾರೆ.

Karavali Karnataka
ಉಡುಪಿ ಜಿಲ್ಲೆ

ಉಡುಪಿ ಜಿಲ್ಲೆ: ಉಡುಪಿ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದೆ. ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿಸಿತ್ತು. ಉಡುಪಿ ಕ್ಷೇತ್ರದಿಂದ ರಘುಪತಿ ಭಟ್, ಕಾಪು ಕ್ಷೇತ್ರದಿಂದ ಲಾಲಾಜಿ ಆರ್ ಮೆಂಡನ್, ಕಾರ್ಕಳ ಕ್ಷೇತ್ರದಿಂದ ಸುನಿಲ್ ಕುಮಾರ್, ಕುಂದಾಪುರ ಕ್ಷೇತ್ರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಕ್ಷೇತ್ರದಿಂದ ಸುಕುಮಾರ್ ಶೆಟ್ಟಿ ಜಯ ಗಳಿಸಿದ್ದರು. ಉಡುಪಿ ಜಿಲ್ಲೆಯಲ್ಲಿ ಬಿಲ್ಲವ, ಬಂಟ್ಸ್, ಮುಸ್ಲಿಂ, ಮೊಗವೀರರು ಪ್ರಮುಖ ಸಮುದಾಯವಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 9,78,503 ಮತದಾರರಿದ್ದಾರೆ. ಇದರಲ್ಲಿ ಪುರುಷರು 4,70,730, ಮಹಿಳೆಯರು 5,07,773 ಮತ್ತು ತೃತೀಯ ಲಿಂಗಿಗಳು 18 ಇದ್ದಾರೆ.

ಕರಾವಳಿ ಬಗ್ಗೆ ರಾಜಕೀಯ ವಿಶ್ಲೇಷಕರು ಹೇಳುವುದಿಷ್ಟು: ಹಿರಿಯ ಪತ್ರಕರ್ತ ಪಿ ಬಿ ಹರೀಶ್ ರೈ ಅವರು 'ಕರಾವಳಿ ಕರ್ನಾಟಕದ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳಿಗೆ ಅಧಿಪತ್ಯ ಸಾಧಿಸುವುದು ಸದ್ಯಕ್ಕೆ ಕಷ್ಟದ ಕೆಲಸ. ದಕ್ಷಿಣ ಕನ್ನಡ ಹಾಗೂ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ 19 ಕ್ಷೇತ್ರದಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳಿಂದ ಮಾತ್ರ ಸ್ಪರ್ಧೆ ನಡೆಯುತ್ತದೆ. ರಾಜ್ಯದ ಇತರ ಕೆಲವು ಭಾಗಗಳಲ್ಲಿ ಹಣ, ಮದ್ಯ, ಉಡುಗೊರೆ ‌ಮುಂತಾದ ಆಮೀಷಗಳಿಂದ‌ ಮತ ಪಡೆಯುವುದು ಸಾಮಾನ್ಯ. ಆದರೆ, ಕರಾವಳಿಯಲ್ಲಿ ಇದು ಯಾವುದು ವರ್ಕ್ ಔಟ್ ಆಗುವುದಿಲ್ಲ. ಇಲ್ಲಿ ಏನಿದ್ದರೂ ವಿಭಿನ್ನ' ಎನ್ನುತ್ತಾರೆ.

Karavali Karnataka
ಕರಾವಳಿ ಕರ್ನಾಟಕ

2018ರ ಬಲಾಬಲ: ಕರಾವಳಿ ಕರ್ನಾಟಕದಲ್ಲಿ ಒಟ್ಟು 19 ಮತಕ್ಷೇತ್ರಗಳಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಚುನಾವಣೆ ಬಳಿಕ ಕಾಂಗ್ರೆಸ್​ ಪಕ್ಷ ಮೂರು ಸ್ಥಾನಗಳನ್ನು ಗೆದ್ದರೆ ಉಳಿದ 16 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. 2023ರ ವಿಧಾನಸಭಾ ಚುನಾವಣೆಯಲ್ಲಿಯೂ ನೇರ ಹಣಾಹಣಿ ಇದ್ದು ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಹಿಂದುತ್ವದ ಪ್ರಯೋಗ ಶಾಲೆ: ಕರಾವಳಿಯಲ್ಲಿ ಬಿಜೆಪಿ ಈ ಬಾರಿ ಆರು ಶಾಸಕರಿಗೆ ಟಿಕೆಟ್​ ತಪ್ಪಿಸಿದೆ. ಹಲವು ಹೊಸ ಮುಖಗಳಿಗೆ ಮಣೆ ಹಾಕಿದೆ. ಇದರಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ಕೊಟ್ಟಿದೆ. ಕಳೆದ ಚುನಾವಣೆಯಲ್ಲೂ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲೇ ಭಾರಿ ಬದಲಾವಣೆ ಮಾಡಿತ್ತು. ಈ ಬಾರಿಯೂ ಅದನ್ನೇ ಮುಂದುವರಿಸಿದೆ. ಇಲ್ಲಿ ಅಭ್ಯರ್ಥಿಗಳಿಗಿಂತ ಸಿದ್ದಾಂತ ಮತ್ತು ಹಿಂದುತ್ವ ಹಾಗೂ ಪಕ್ಷದ ಚಿನ್ಹೆಗೆ ಹೆಚ್ಚು ಆದ್ಯತೆ ಇದೆ. ಹಾಗಾಗಿ ಬಿಜೆಪಿ ಇಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದೆ. ಅದರಲ್ಲಿ ಕಳೆದ ಬಾರಿ ಯಶಸ್ವಿಯೂ ಆಗಿದೆ.

ಇದನ್ನೂ ಓದಿ: ಹಳೇ ದೋಸ್ತಿ ಹೊಸ ಕುಸ್ತಿ.. ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸದ್ಯದ ಚಿತ್ರಣ ಹೇಗಿದೆ ಗೊತ್ತಾ?

Last Updated : Apr 22, 2023, 3:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.