ಮಂಗಳೂರು: ಕದ್ರಿಯ ಶ್ರೀಮಂಜುನಾಥ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಮಕರ ಸಂಕ್ರಮಣದಂದು ನಗರದಲ್ಲಿರುವ ಕದ್ರಿ ಶ್ರೀಮಂಜುನಾಥ ಕ್ಷೇತ್ರದಲ್ಲಿ ವಾರ್ಷಿಕ ನಡೆಯುವ ಜಾತ್ರಾ ಮಹೋತ್ಸವ ನಿನ್ನೆ ವಿಜೃಂಭಣೆಯಿಂದ ನಡೆಯಿತು. ರಥೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ, ಜನರು ಮಂಜುನಾಥ ಸ್ವಾಮಿಯ ರಥ ಎಳೆಯುವ ಮೂಲಕ ಪುನೀತರಾದರು.
ಕೋವಿಡ್ ಭೀತಿ ನಡುವೆಯೂ ಹೆಚ್ಚಿನ ಸಂಖ್ಯೆಯ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಮುಂಜುನಾಥ್ ಸ್ವಾಮಿಯೂ ವೈಭವಿಸುತ್ತಿದ್ದನು.