ETV Bharat / state

ವಯೋವೃದ್ಧೆಗೆ ನೆರವಾದ ಕಡಬದ ಮಹಿಳಾ ಪೊಲೀಸ್ ಸಿಬ್ಬಂದಿ - ಕಡಬ ಸಮೀಪದ ಮರ್ದಾಳ ಪೇಟೆ

ಕಡಬ ಸಮೀಪದ ಮರ್ದಾಳ ಪೇಟೆಯಲ್ಲಿ ನಡೆದಾಡಲು ಕಷ್ಟಪಡುತ್ತಿದ್ದ ಬಡ ವಯೋವೃದ್ಧೆ ನೆರವಿಗೆ ಕಡಬ ಪೊಲೀಸ್ ಠಾಣೆಯ ಮಹಿಳಾ ಪೊಲೀಸರು ಧಾವಿಸಿ ಬಂದು ಮಾನವೀಯತೆ ತೋರಿದರು.

female police
ಮಹಿಳಾ ಪೊಲೀಸ್​​ ಸಿಬ್ಬಂದಿಗಳು
author img

By

Published : Apr 11, 2020, 1:58 PM IST

ಕಡಬ: ಕೊರೊನಾ ಹಿನ್ನೆಲೆಯಲ್ಲಿ ಲಾಕ್​​​​​ಡೌನ್ ಇದ್ದು ಪೊಲೀಸರು ಜನರಿಗೆ ದಿನಂಪ್ರತಿ ಹಲವು ವಿಧದಲ್ಲಿ ನೆರವಾಗುತ್ತಿದ್ದಾರೆ ಮತ್ತು ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಕಡಬ ಪೊಲೀಸ್ ಠಾಣೆಯ ಮಹಿಳಾ ಪೊಲೀಸರು ವೃದ್ಧೆಯೊಬ್ಬರ ನೆರವಿಗೆ ಬಂದು ಮಾನವೀಯತೆ ಪ್ರದರ್ಶಿಸಿದರು.

ಕಡಬ ಸಮೀಪದ ಮರ್ದಾಳ ಪೇಟೆಯಲ್ಲಿ ನಡೆದಾಡಲೂ ಕಷ್ಟಪಡುತ್ತಿದ್ದ ಬಡ ವಯೋವೃದ್ಧೆ ತನ್ನಲ್ಲಿರುವ ಅಲ್ಪಸ್ವಲ್ಪ ಚಿಲ್ಲರೆ ಹಣದೊಂದಿಗೆ ತನಗೆ ಅಗತ್ಯವಾದ ದಿನಸಿ ಸಾಮಾನು ಖರೀದಿಗೆ ಬಂದಿದ್ದರು. ಇದನ್ನು ಗಮನಿಸಿದ ಮಹಿಳಾ ಸಿಬ್ಬಂದಿ ಭಾಗ್ಯಮ್ಮ ಹಾಗೂ ಸಹ ಸಿಬ್ಬಂದಿ ತಮ್ಮದೇ ಖರ್ಚಿನಲ್ಲಿ ಸಾಮಾನುಗಳನ್ನು ಖರೀದಿಸಿ ಕೊಟ್ಟು ಆಟೋ ರಿಕ್ಷಾದಲ್ಲಿ ವೃದ್ಧೆಯನ್ನು ಅವರ ಮನೆಗೆ ಕಳುಹಿಸಿದ್ದಾರೆ.

ಪೊಲೀಸ್​ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.