ETV Bharat / state

ಕಡಬ ಆ್ಯಸಿಡ್ ದಾಳಿ ಪ್ರಕರಣ: ಪೊಲೀಸರ ಮೇಲೆ ಕರ್ತವ್ಯ ಲೋಪ ಆರೋಪ - ಕಡಬ ಆ್ಯಸಿಡ್ ದಾಳಿ ಪ್ರಕರಣ

ಕಡಬ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Kadaba acid attack case
ಕಡಬ ಆ್ಯಸಿಡ್ ದಾಳಿ ಪ್ರಕರಣ: ಪೊಲೀಸರು ಕರ್ತವ್ಯ ಲೋಪ ಆರೋಪ
author img

By

Published : Feb 7, 2020, 6:30 AM IST

Updated : Feb 7, 2020, 7:00 AM IST

ಕಡಬ: ಕಡಬದ ಕೋಡಿಂಬಾಳದಲ್ಲಿ ಜನವರಿ 23ರಂದು ಮಹಿಳೆಯ ಮೇಲೆ ಆ್ಯಸಿಡ್ ಎರಚಿದ್ದ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ರವರಿಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ.

ಆರೋಪಿ ಜಯಾನಂದ ಕೊಟ್ಟಾರಿ ತನ್ನ ನಾದಿನಿಯಾಗಿರುವ ಸಪ್ನಾ ರವಿಕುಮಾರ್​ಗೆ ನಿರಂತರ ಕಿರುಕುಳ ನೀಡುತ್ತಿದ್ದರೂ, ಪೊಲೀಸರು ಸಕಾಲಕ್ಕೆ ಸ್ಪಂದಿಸಿ ಕ್ರಮ ಕೈಗೊಂಡಿಲ್ಲ ಎಂದು ಡಿವೈಎಸ್‌ಪಿಯವರು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವರದಿ ಆಧರಿಸಿ ಕಡಬ ಪೊಲೀಸರ ವಿರುದ್ಧ ಎಸ್​ಪಿ ಯವರು ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜ.23ರಂದು ಜಯಾನಂದ ಕೊಟ್ಟಾರಿ ಎಂಬಾತ ವಿಧವೆಯಾಗಿರುವ ತನ್ನ ನಾದಿನಿ ಸಷ್ನಾರವರ ಮತ್ತು ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಇದರಿಂದಾಗಿ ಸಪ್ನಾ ಗಂಭೀರವಾಗಿ ಗಾಯಗೊಂಡರೆ ಅವರ ಎರಡು ವರ್ಷದ ಮಗುವಿಗೂ ಮುಖ, ತೋಳುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಆ್ಯಸಿಡ್ ಬಿದ್ದು ಗಾಯಗಳಾಗಿತ್ತು. ಈ ಪ್ರಕರಣ ನಡೆಯುವ ಮೊದಲು ಸಪ್ನಾರವರು ತನಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕಡಬ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಠಾಣೆಗೆ ಬಂದು ದೂರು ನೀಡಿ ಎಂದಿದ್ದರು ಎಂದು ಸ್ವಪ್ನ ಹೇಳುತ್ತಿದ್ದಾರೆ.

ಪೊಲೀಸರ ನಿರ್ಲಕ್ಷ್ಯದಿಂದಾಗಿ ಸಪ್ನಾರವರು ಆ್ಯಸಿಡ್ ದಾಳಿಗೆ ಒಳಗಾಗುವಂತಾಗಿತ್ತು. ಗಂಭೀರ ಗಾಯಗೊಂಡ ಸ್ಥಿತಿಯಲ್ಲಿಯೇ ಸಪ್ನಾ ಮತ್ತು ಅವರ ಮಗಳು ಕೋಡಿಂಬಾಳವರೆಗೆ ನಡೆದು ನಂತರ ಆಟೋ ಮೂಲಕ ಠಾಣೆಗೆ ಬಂದಿದ್ದರು. ಆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣದಲ್ಲಿ ಕಡಬ ಠಾಣೆಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿತ್ತು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಪ್ರಮುಖರು ಮಂಗಳೂರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿದ್ದರಲ್ಲದೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು. ಈ ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ದಕ್ಷಿಣ ಕನ್ನಡ ಎಸ್‌ಪಿ ಲಕ್ಷ್ಮಿಪ್ರಸಾದ್‌ ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿಯವರಿಗೆ ಸೂಚಿಸಿದ್ದರು.

ಈ ಹಿನ್ನಲೆ ಡಿವೈಎಸ್‌ಪಿ ಸ್ವಪ್ನರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸ್ವಪ್ನ ನಿರಂತರವಾಗಿ ಪೊಲೀಸರ ನೆರವು ಕೋರಿದ್ದರು. ದೌರ್ಜನ್ಯ ಆಗುತ್ತಿರುವ ಕುರಿತು ಮೊದಲೇ ಮಾಹಿತಿ ನೀಡಿದ್ದರು. ಪೊಲೀಸರು ಅವರ ಮನವಿಗೆ ಸ್ಪಂದಿಸಿರಲಿಲ್ಲ. ಬದಲಾಗಿ ಠಾಣೆಗೆ ಬರುವಂತೆ ಸೂಚಿಸುತ್ತಿದ್ದರು. ಆ್ಯಸಿಡ್ ದಾಳಿ ಘಟನೆಯ ಬಳಿಕ ಮಹಜರು ಪ್ರಕ್ರಿಯೆಯಲ್ಲೂ ಪೊಲೀಸರು ಲೋಪ ಎಸಗಿದ್ದಾರೆ. ಅಲ್ಲದೆ, ಆರೋಪಿಯು ಆ್ಯಸಿಡ್ ದಾಳಿಗೂ ಮುನ್ನ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿದ್ದ’ ಎಂದು ಡಿವೈಎಸ್‌ಪಿಯವರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಈ ಮೊದಲು ಮಾಡಿದ್ದ ಎಫ್‌ಐಆರ್ ಪರಿಷ್ಕರಣೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಪೊಲೀಸರು ಈ ಮೊದಲು ವರದಿಯಲ್ಲಿ ಲೈಂಗಿಕ ದೌರ್ಜನ್ಯ ವಿಷಯವನ್ನೇ ಉಲ್ಲೇಖ ಮಾಡಿರಲಿಲ್ಲ. ಅತಿಕ್ರಮ ಪ್ರವೇಶ, ನಿಂದನೆ, ಜೀವ ಬೆದರಿಕೆ ಮತ್ತು ಆ್ಯಸಿಡ್ ದಾಳಿಯ ಆರೋಪಗಳಷ್ಟೇ ಎಫ್‌ಐಆರ್‌ನಲ್ಲಿ ಇತ್ತು. ಪೊಲೀಸರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿಬಂದ ಬಳಿಕ ಎಫ್‌ಐಆರ್ ಪರಿಷ್ಕರಿಸಲಾಗಿದೆ ಎಂಬ ಮಾಹಿತಿಯೂ ಲಭಿಸಿದೆ.

Intro:ಕಡಬ

ಕಡಬದ ಕೋಡಿಂಬಾಳದಲ್ಲಿ ಜನವರಿ 23ರಂದು ಮಹಿಳೆಯ ಮೇಲೆ ಆಸಿಡ್ ಎರಚಿದ್ದ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ರವರಿಗೆ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆರೋಪಿ ಜಯಾನಂದ ಕೊಟ್ಟಾರಿ ತನ್ನ ನಾದಿನಿಯಾಗಿರುವ ಸಪ್ನಾರವಿಕುಮಾರ್ ಗೆ ನಿರಂತರ ಕಿರುಕುಳ ನೀಡುತ್ತಿದ್ದರೂ, ಪೊಲೀಸರು ಸಕಾಲಕ್ಕೆ ಸ್ಪಂದಿಸಿ ಕ್ರಮ ಕೈಗೊಂಡಿಲ್ಲ ಎಂದು ಡಿವೈಎಸ್‌ಪಿಯವರು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವರದಿ ಆಧರಿಸಿ ಕಡಬ ಪೊಲೀಸರ ವಿರುದ್ಧ ಎಸ್.ಪಿ.ಯವರು ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.Body:ಜ.೨೩ರಂದು ಜಯಾನಂದ ಕೊಟ್ಟಾರಿ ಎಂಬಾತ ವಿಧವೆಯಾಗಿರುವ ತನ್ನ ನಾದಿನಿ ಸಷ್ನಾರವರ ಮತ್ತು ಮಗುವಿನ ಮೇಲೆ ಆಸಿಡ್ ದಾಳಿ ನಡೆಸಿದ್ದ. ಇದರಿಂದಾಗಿ ಸಪ್ನಾ ಗಂಭೀರವಾಗಿ ಗಾಯಗೊಂಡರೆ ಅವರ ಎರಡು ವರ್ಷದ ಮಗುವಿಗೂ ಮುಖ, ತೋಳುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಆಸಿಡ್ ಬಿದ್ದು ಗಾಯಗಳಾಗಿತ್ತು. ಈ ಪ್ರಕರಣ ನಡೆಯುವ ಮೊದಲು ಸಪ್ನಾರವರು ತನಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕಡಬ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಠಾಣೆಗೆ ಬಂದು ದೂರು ನೀಡಿ ಎಂದಿದ್ದರು ಎಂದು ಸ್ವಪ್ನ ಹೇಳುತ್ತಿದ್ದಾರೆ. ಈ ಕಾರಣದಿಂದಾಗಿ ಪೊಲೀಸರ ನಿರ್ಲಕ್ಷ್ಯದಿಂದಾಗಿ ಸಪ್ನಾರವರು ಆಸಿಡ್ ದಾಳಿಗೆ ಒಳಗಾಗುವಂತಾಗಿತ್ತು. ಗಂಭೀರ ಗಾಯಗೊಂಡ ಸ್ಥಿತಿಯಲ್ಲಿಯೇ ಸಪ್ನಾ ಮತ್ತು ಅವರ ಮಗಳು ಕೋಡಿಂಬಾಳ ವರೆಗೆ ನಡೆದು ನಂತರ ಆಟೋ ಮೂಲಕ ಠಾಣೆಗೆ ಬಂದಿದ್ದರು.ಆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣದಲ್ಲಿ ಕಡಬ ಠಾಣೆಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿತ್ತು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಪ್ರಮುಖರು ಮಂಗಳೂರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿದ್ದರಲ್ಲದೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು.
ಈ ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ದಕ್ಷಿಣ ಕನ್ನಡ ಎಸ್‌ಪಿ ಲಕ್ಷ್ಮಿಪ್ರಸಾದ್‌ರವರು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿಯವರಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಡಿವೈಎಸ್‌ಪಿ ಸ್ವಪ್ನರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸ್ವಪ್ನರೂ ನಿರಂತರವಾಗಿ ಪೊಲೀಸರ ನೆರವು ಕೋರಿದ್ದರು. ದೌರ್ಜನ್ಯ ಆಗುತ್ತಿರುವ ಕುರಿತು ಮೊದಲೇ ಮಾಹಿತಿ ನೀಡಿದ್ದರು. ಪೊಲೀಸರು ಅವರ ಮನವಿಗೆ ಸ್ಪಂದಿಸಿರಲಿಲ್ಲ. ಬದಲಾಗಿ ಠಾಣೆಗೆ ಬರುವಂತೆ ಸೂಚಿಸುತ್ತಿದ್ದರು. ಆಸಿಡ್ ದಾಳಿ ಘಟನೆಯ ಬಳಿಕ ಮಹಜರು ಪ್ರಕ್ರಿಯೆಯಲ್ಲೂ ಪೊಲೀಸರು ಲೋಪ ಎಸಗಿದ್ದಾರೆ. ಅಲ್ಲದೆ, ಆರೋಪಿಯು ಆಸಿಡ್ ದಾಳಿಗೂ ಮುನ್ನ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿದ್ದ’ ಎಂದು ಡಿವೈಎಸ್‌ಪಿಯವರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಈ ಮೊದಲು ಮಾಡಿದ್ದ ಎಫ್‌ಐಆರ್ ಪರಿಷ್ಕರಣೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಪೊಲೀಸರು ಈ ಮೊದಲು ವರದಿಯಲ್ಲಿ ಲೈಂಗಿಕ ದೌರ್ಜನ್ಯ ವಿಷಯವನ್ನೇ ಉಲ್ಲೇಖ ಮಾಡಿರಲಿಲ್ಲ. ಅತಿಕ್ರಮ ಪ್ರವೇಶ,ನಿಂದನೆ, ಜೀವ ಬೆದರಿಕೆ ಮತ್ತು ಆಸಿಡ್ ದಾಳಿಯ ಆರೋಪಗಳಷ್ಟೇ ಎಫ್‌ಐಆರ್‌ನಲ್ಲಿ ಇತ್ತು. ಪೊಲೀಸರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿಬಂದ ಬಳಿಕ ಎಫ್‌ಐಆರ್ ಪರಿಷ್ಕರಿಸಲಾಗಿದೆ ಎಂಬ ಮಾಹಿತಿಯೂ ಲಭಿಸಿದೆ.Conclusion:ಒಳಚಿತ್ರದಲ್ಲಿ ಆಸಿಡ್ ದಾಳಿಗೋಳಗಾದ ಸ್ವಪ್ನ ಮತ್ತು ಮಗು.
ಆರೋಪಿ ಜಯಾನಂದ.
Last Updated : Feb 7, 2020, 7:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.