ಬಂಟ್ವಾಳ: ತಾಲೂಕಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.
ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ದ.ಕ. ಜಿಲ್ಲಾ ಸಹಕಾರ ಭಾರತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಹೈನುಗಾರಿಕೆ, ಕೃಷಿ ಯಂತ್ರೋಪಕರಣ ಬಳಕೆ ಮತ್ತು ದುರಸ್ತಿ ಹಾಗೂ ಪ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್ ಈ ಮೂರು ವಿಷಯಗಳ ಬಗ್ಗೆ ಕಲ್ಲಡ್ಕ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ 35 ಜನರಿಗೆ ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಮಾಣ ಪತ್ರವನ್ನು ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿ, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಅಧ್ಯಕ್ಷರಾದ ಪ್ರಸನ್ನ ಭಟ್ ಬಲ್ನಾಡು, ಸಹಕಾರ ಭಾರತಿಯ ತಾಲೂಕು ಕಾರ್ಯದರ್ಶಿ ವಿಶ್ವನಾಥ ಮುರಬೈಲ್ , ವಿದ್ಯಾಭಾರತಿಯ ಪ್ರಾಂತ ಕಾಲೇಜು ಶಿಕ್ಷಣ ಪ್ರಮುಖ್ ಕೃಷ್ಣಪ್ರಸಾದ್ ,ಗಜೇಶ್ ಅಮ್ಟೂರು, ಜಗದೀಶ್ ಮಾರಮಜಲು, ಜಿನ್ನಪ್ಪ ಕುದ್ರೆಬೆಟ್ಟು,ಆದಿತ್ಯ ನೆಟ್ಲ ಮೊದಲಾದವರು ಉಪಸ್ಥಿತರಿದ್ದರು.