ಮಂಗಳೂರು: ಶ್ರೀ ರಾಮಕೃಷ್ಣ ಮಿಷನ್ಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಘೋಷಣೆ ಅಗಿರುವುದು ಸಂತಸದ ವಿಚಾರ. ಈ ಪ್ರಶಸ್ತಿ ಮಂಗಳೂರಿನ ಜನತೆಗೆ ದೊರಕಿದ ಪ್ರಶಸ್ತಿ ಎಂದು ಶ್ರೀ ರಾಮಕೃಷ್ಣ ಮಿಷನ್ನ ಕಾರ್ಯದರ್ಶಿ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
ಮಂಗಳೂರಿನ ಜನತೆಯ ಸೇವಾ ಮನೋಭಾವವನ್ನು ನಾವು ಸ್ವಚ್ಛ ಮಂಗಳೂರು ಕಲ್ಪನೆಯಲ್ಲಿ ತೊಡಗಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. 2015 ರಿಂದ 2019ರವರೆಗೆ ನಿರಂತರ ಐದು ವರ್ಷಗಳ ಕಾಲ ಈ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು 10 ಸಾವಿರ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದು, ಬಹಳಷ್ಟು ಜನರು ಇದಕ್ಕೆ ಸಹಕಾರವನ್ನೂ ನೀಡಿದ್ದರು. 20 ಲಕ್ಷ ಮಾನವ ಗಂಟೆ ಇದರಲ್ಲಿ ವ್ಯಯವಾಗಿದೆ ಎಂದು ಹೇಳಿದರು.
ಇದು ಸ್ವಚ್ಚ ಮಂಗಳೂರು ಕಾರ್ಯಕ್ರಮದಲ್ಲಿ ನಮ್ಮ ಜೊತೆಯಲ್ಲಿ ಕೈಜೋಡಿಸಿದ ಕಾರ್ಯಕರ್ತರು, ಸ್ವಯಂ ಸೇವಕರಿಗೆ ದೊರೆತ ಪ್ರಶಸ್ತಿಯೂ ಹೌದು. ಈ ಪ್ರಶಸ್ತಿಯನ್ನು ಮಂಗಳೂರು ಜನತೆಗೆ ಸಮರ್ಪಣೆ ಮಾಡುತ್ತೇವೆ ಎಂದು ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:2020-21ನೇ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ಪಟ್ಟಿ ಪ್ರಕಟ: ದೇವರಾಜ್, ಪ್ರಾಣೇಶ್ ಸೇರಿ 66 ಜನರಿಗೆ ಪುರಸ್ಕಾರ