ETV Bharat / state

ಬೀಚ್​ನಲ್ಲಿ ಕಸ ಹಾಕಿದ್ದೂ ಅವರೇ, ಹೆಕ್ಕಿದ್ದು ಅವರೇ.. ಮೋದಿ ವಿರುದ್ಧ ಐವನ್ ಡಿಸೋಜಾ ಕಿಡಿ! - mangalore news

ಪ್ರಧಾನಿಗೆ ರಾಜ್ಯದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಕಾಳಜಿಯಿಲ್ಲ. ಗೃಹಮಂತ್ರಿ ಮತ್ತು ಹಣಕಾಸು ಸಚಿವರು ನೆರೆ ಹಾನಿ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಮಾಡಿ ಜಾಲಿಟ್ರಿಪ್ ಮಾಡಿ ಹೋದರು. ಪ್ರಧಾನಮಂತ್ರಿ ಆ ಜಾಲಿ ಟ್ರಿಪ್​ಗೂ ಬರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮೋದಿ ವಿರುದ್ಧ ಐವನ್ ಡಿಸೋಜ ಕಿಡಿ
author img

By

Published : Oct 14, 2019, 4:28 PM IST

ಮಂಗಳೂರು: ಪ್ರಧಾನಿಗೆ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುವುದೇ ಮುಖ್ಯ. ಬೀಚ್​ನಲ್ಲಿ ಕಸ ಹಾಕಿದ್ದು ಅವರೇ, ಹೆಕ್ಕಿದ್ದು ಅವರೇ ಎಂದು ಕಾಂಗ್ರೆಸ್‌ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಗೆ ರಾಜ್ಯದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಕಾಳಜಿಯಿಲ್ಲ. ಗೃಹಮಂತ್ರಿ ಮತ್ತು ಹಣಕಾಸು ಸಚಿವರು ನೆರೆ ಹಾನಿ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಮಾಡಿ ಜಾಲಿಟ್ರಿಪ್ ಮಾಡಿ ಹೋದರು. ಪ್ರಧಾನಮಂತ್ರಿ ಆ ಜಾಲಿ ಟ್ರಿಪ್​ಗೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು.

ಮೋದಿ ವಿರುದ್ಧ ಐವನ್ ಡಿಸೋಜಾ ಕಿಡಿ..

ರಾಜ್ಯದಲ್ಲಿ ನೆರೆಹಾನಿಯಿಂದ 1 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಹೇಳುತ್ತದೆ. ಆದರೆ, ಎನ್​ಡಿಆರ್​ಎಫ್ ಪ್ರಕಾರ ನಷ್ಟವಾದದ್ದು 35 ಸಾವಿರ ಕೋಟಿ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು 1200 ಕೋಟಿ, ರಾಜ್ಯ ಸರ್ಕಾರ ಈವರೆಗೆ ನೆರೆ ಸಂತ್ರಸ್ತರಿಗೆ ನೀಡಿದ್ದು 2936 ಕೋಟಿ. ರಾಜ್ಯದ ಸಂತ್ರಸ್ತರಿಗೆ ನೆರವಾಗಲು 96 ಸಾವಿರ ಕೋಟಿ ಬೇಕು. ಆದರೆ, ಅಷ್ಟು ಹಣ ರಾಜ್ಯ ಸರ್ಕಾರದ ಬಳಿ ಇಲ್ಲ. ಅದಕ್ಕಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ನಾವು ಒತ್ತಾಯಿಸಿದರೂ ರಾಜ್ಯ ಸರ್ಕಾರ ಅದು ಬೇಡ ಎಂದು ಮೊಂಡುತನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Intro:ಮಂಗಳೂರು: ಪ್ರಧಾನಮಂತ್ರಿಗಳಿಗೆ ಕ್ಯಾಮರದ ಮುಂದೆ ಕಾಣಿಸಿಕೊಳ್ಳುವುದೇ ಆದ್ಯತೆ. ಅವರು ಕ್ಯಾಮರ ಪ್ರಾಜೆಕ್ಸನ್ ಪ್ರೈಮ್ ಮಿನಿಸ್ಟರ್. ಬೀಚಿನಲ್ಲಿ ಕಸ ಹಾಕಿದ್ದು ಅವರೇ, ಹೆಕ್ಕಿದ್ದು ಅವರೇ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಮಂತ್ರಿಗಳಿಗೆ ರಾಜ್ಯದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಕಾಳಜಿಯಿಲ್ಲ. ಗೃಹಮಂತ್ರಿ ಮತ್ತು ಹಣಕಾಸು ಸಚಿವರು ನೆರೆ ಹಾನಿ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಮಾಡಿ ಜಾಲಿಟ್ರಿಪ್ ಮಾಡಿ ಹೋದರು. ಪ್ರಧಾನಮಂತ್ರಿ ಜಾಲಿ ಟ್ರಿಪ್ ಗೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ನೆರೆಹಾನಿಯಿಂದ 1 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ರಾಜ್ಯ ಸರಕಾರವೇ ಹೇಳುತ್ತದೆ. ಆದರೆ ಎನ್ ಡಿ ಆರ್ ಎಫ್ ಪ್ರಕಾರ ನಷ್ಟವಾದದ್ದು 35 ಸಾವಿರ ಕೋಟಿ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು 1200 ಕೋಟಿ, ರಾಜ್ಯ ಸರಕಾರ ಈವರೆಗೆ ನೆರೆ ಸಂತ್ರಸ್ತರಿಗೆ ನೀಡಿದ್ದು 2936 ಕೋಟಿ. ಇನ್ನೂ ರಾಜ್ಯದ ಸಂತ್ರಸ್ತರಿಗೆ ನೆರವಾಗಲು 96 ಸಾವಿರ ಕೋಟಿ ಬೇಕು. ಆದರೆ ಅಷ್ಟು ಹಣ ರಾಜ್ಯ ಸರಕಾರದ ಬಳಿ ಇಲ್ಲ. ಅದಕ್ಕಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ನಾವು ಒತ್ತಾಯಿಸಿದರೂ ರಾಜ್ಯ ಸರಕಾರ ಅದು ಬೇಡ ಎಂದು ಮೊಂಡುತನ ಮಾಡುತ್ತಿದೆ ಎಂದರು. ಖಾಸಗಿ ಮಾಧ್ಯಮಗಳಿಗೆ ವಿಧಾನಸಭಾ ಕಲಾಪ ಚಿತ್ರೀಕರಣಕ್ಕೆ ಬಿಡದಿರುವುದರ ಹಿಂದೆ ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟವಿದೆ. ಯಡಿಯೂರಪ್ಪ ಮಾಧ್ಯಮದವರಿಗೆ ಅವಕಾಶ ಇದೆ ಎಂದರೆ ಸ್ಪೀಕರ್ ಇಲ್ಲವೆನ್ನುತ್ತಾರೆ. ಸ್ಪೀಕರ್ ಆರ್ ಎಸ್ ಎಸ್ ಪ್ರತಿನಿಧಿಸುತ್ತಿದ್ದಾರೆ. ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವೆ ಇರುವ ತಿಕ್ಕಾಟ ಜಾಸ್ತಿಯಾಗಿದ್ದು ರಾಜ್ಯದಲ್ಲಿ ಜನಪರ ಸರಕಾರ ಇಲ್ಲ. ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬಂದು ಈ ಸರಕಾರ ಉರುಳಿ ಹೊಸ ಸರಕಾರ ಬರಲಿದೆ ಎಂದರು‌ ಬೈಟ್- ಐವನ್‌ ಡಿಸೋಜ, ವಿಧಾನಪರಿಷತ್ ಸದಸ್ಯ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.