ETV Bharat / state

ಡಿ ಕೆ ಶಿವಕುಮಾರ್ ಮನೆಗೆ ಸಿಬಿಐ ದಾಳಿ, ಪ್ರಜಾಪ್ರಭುತ್ವದ ಕಗ್ಗೊಲೆ ; ಐವನ್ ಡಿಸೋಜ - ಧಾನಪರಿಷತ್ ಮಾಜಿ ಸಚೇತಕ ಐವನ್ ಡಿಸೋಜ ಆಕ್ರೋಶ

ಬಿಜೆಪಿ ನಾಯಕರ ಭ್ರಷ್ಟಾಚಾರ ಬಗ್ಗೆ ಸಿಬಿಐ ತನಿಖೆಯಾಗಲಿ. ಬಿಎಸ್​ವೈ ಮಗ ವಿಜಯೇಂದ್ರ 17 ಕೋಟಿ ರೂ. ಆರ್​ಟಿಜಿಎಸ್ ಮೂಲಕ ಪಡೆದದ್ದು ತನಿಖೆಯಾಗಲಿ. ಕೊರೊನಾ‌ ಹಗರಣದ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ತನಿಖೆ ಮಾಡುವ ಗಂಡಸ್ತನ ಇಲ್ಲ..

Ivan D'souza
ಐವನ್ ಡಿಸೋಜ
author img

By

Published : Oct 5, 2020, 7:08 PM IST

ಮಂಗಳೂರು: ಡಿ ಕೆ ಶಿವಕುಮಾರ್ ‌ಮನೆ ಮೇಲೆ ಸಿಬಿಐ ದಾಳಿ ನಡೆದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಧಾನಪರಿಷತ್‌ನ ಮಾಜಿ ಸಚೇತಕ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಮನೆ ಮೇಲೆ ಸಿಸಿಬಿ ದಾಳಿ ಖಂಡಿಸಿದ ಐವನ್ ಡಿಸೋಜ

ನಗರದಲ್ಲಿ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಕೊಲೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಾಗಿದೆ. ಸಿಬಿಐ ತನಿಖೆ ಬಿಜೆಪಿಯ ತಂತ್ರಗಾರಿಕೆ. ನೇರವಾಗಿ ಹೊಡೆಯಲು ಆಗದೆ ಹಿಂದೆಯಿಂದ ಹೊಡೆಯುತ್ತಿದ್ದಾರೆ ಎಂದರು.

ಬಿಜೆಪಿ ನಾಯಕರ ಭ್ರಷ್ಟಾಚಾರ ಬಗ್ಗೆ ಸಿಬಿಐ ತನಿಖೆಯಾಗಲಿ. ಬಿಎಸ್​ವೈ ಮಗ ವಿಜಯೇಂದ್ರ 17 ಕೋಟಿ ರೂ. ಆರ್​ಟಿಜಿಎಸ್ ಮೂಲಕ ಪಡೆದದ್ದು ತನಿಖೆಯಾಗಲಿ. ಕೊರೊನಾ‌ ಹಗರಣದ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ತನಿಖೆ ಮಾಡುವ ಗಂಡಸ್ತನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಯು ಟಿ ಖಾದರ್ ಅವರು, ಚುನಾವಣೆ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ತಂತ್ರಗಾರಿಕೆ ಇದು. ಉಪಚುನಾವಣೆ ಬಂದ ಸಂದರ್ಭದಲ್ಲಿ ಸೋಲಿನ ಭಯದಿಂದ ಈ‌ ರೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.