ETV Bharat / state

ಪಂಜ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ನಡೆಯಿತೇ ಪವಾಡ..? - ಪಂಜದಲ್ಲಿರುವ ದೇಗುಲ

ಸುಳ್ಯ ತಾಲೂಕಿನ ತುಳುನಾಡಿನ ಇತಿಹಾಸ ಪ್ರಸಿದ್ಧ ಸಾವಿರ ಸೀಮೆಯ ಒಡೆಯನಾಗಿರುವ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಪವಾಡವೊಂದು ನಡೆದಿದೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.

ಪಂಜ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ನಡೆಯಿತೇ ಪವಾಡ..?
author img

By

Published : Oct 10, 2019, 4:57 AM IST

ಮಂಗಳೂರು/ಸುಳ್ಯ: ಸುಳ್ಯ ತಾಲೂಕಿನ ಪಂಜದಲ್ಲಿರುವ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿರುವ ಅಮ್ಮನವರ ಗುಡಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿಯ ಒಂಭತ್ತು ದಿನ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.

ಆದರೆ ದಿನಾಂಕ 7/10/ 2019ನೇ ಸೋಮವಾರ ಒಂಬತ್ತನೇ ದಿನದ ಆಯುಧ ಪೂಜೆಯ ಪ್ರಯುಕ್ತ ಬೆಳಗ್ಗಿನಿಂದಲೇ ದೇವಳದಲ್ಲಿ ಪ್ರಧಾನ ದೇವರಿಗೆ ಹಾಗೂ ಅಮ್ಮನವರಿಗೆ ವಿಶೇಷ ಪೂಜೆಗಳು ಮತ್ತು ವಾಹನ ಪೂಜೆಗಳು ರಾತ್ರಿಯವರೆಗೂ ನಡೆದಿತ್ತು. ಭಕ್ತಾದಿಗಳು ಶ್ರೀದೇವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ತೆರಳಿದ್ದರು. ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರೂ ಕೂಡ ರಾತ್ರಿ 12 ಗಂಟೆಗೆ ಮನೆಗೆ ತೆರಳಿದ್ದಾರೆ. ಇದಾದ ನಂತರ ಮಧ್ಯರಾತ್ರಿ 1.30ರ ಸಮಯಕ್ಕೆ ಸರಿಯಾಗಿ ದೇಗುಲದ ಒಳಗಡೆ ಡೋಳು ಹಾಗೂ ಜಯಗಂಟೆ ಬಾರಿಸುವ ಶಬ್ದ ಕೇಳಿ ಬಂದಿದೆ ಎನ್ನಲಾಗಿದೆ.

ತಕ್ಷಣ ದೇಗುಲದ ಭದ್ರತಾ ಸಿಬ್ಬಂದಿ ಈ ವಿಷಯವನ್ನು ಆಡಳಿತ ಮಂಡಳಿಯ ಅಧಿಕಾರಿಯಾಗಿರುವ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ಅರ್ಚಕರಿಗೆ ತಿಳಿಸಿದ್ದಾರೆ. ಕೂಡಲೇ ಅವರು ಕ್ಷೇತ್ರಕ್ಕೆ ಆಗಮಿಸಿ ಪ್ರಧಾನ ಬಾಗಿಲು ತೆರೆದು ಒಳಗಡೆಗೆ ಬಂದು ನೋಡುವಾಗ ಡೋಳು ಹಾಗೂ ಜಯಗಂಟೆ ಬಾರಿಸುತ್ತಿರುವುದು ಕಂಡು ಬಂದಿದೆಯಂತೆ. ಈ ವೇಳೆ ಹನ್ನೆರಡು ಸ್ವಿಚ್​ಗಳು ಇರುವ ಇಲೆಕ್ಟ್ರಿಕ್ ಬೋರ್ಡ್​ನಲ್ಲಿ, ಇನ್ಸ್​ಟ್ರುಮೆಂಟ್ ಇರುವ ಸ್ವಿಚ್ ಮಾತ್ರ ಆನ್ ಆಗಿದ್ದು, ಬೇರೆ ಯಾವುದೇ ಸ್ವಿಚ್​ಗಳು ಆನ್ ಆಗಿರಲಿಲ್ಲ ಎನ್ನಲಾಗಿದೆ. ದೇಗುಲದಲ್ಲಿ ಮಧ್ಯಾಹ್ನದ ಮಹಾಪೂಜೆ ಮತ್ತು ರಾತ್ರಿ ಪೂಜೆಗೆ ಮಾತ್ರ ಈ ಇಲೆಕ್ಟ್ರಿಕ್ ಸಾಧನವನ್ನು ಬಳಸಲಾಗುತ್ತಿದ್ದು, ಕಾಕತಾಳೀಯ ಎಂಬಂತೆ ಆ ದಿನ ಎರಡು ಹೊತ್ತಲ್ಲಿ ನಡೆದ ಪೂಜೆಗೂ ಈ ಎಲೆಕ್ಟ್ರಿಕ್ ಯಂತ್ರ ಬಳಸಿಲ್ಲ ಎನ್ನಲಾಗುತ್ತಿದೆ.

ಈ ಸೋಜಿಗವನ್ನು ಕಂಡ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶ್ರೀ ದೇವರ ಸನ್ನಿಧಾನದಲ್ಲಿ ಮತ್ತು ಅಮ್ಮನವರ ಗುಡಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಡೋಳು ಹಾಗೂ ಜಯಗಂಟೆಯ ಸ್ವಿಚ್ ಆಫ್ ಮಾಡಿ ಮತ್ತೆ ಮನೆಗೆ ತೆರಳಿದ್ದಾರೆ. ನಂತರ ದೇಗುಲದ ಸಿ.ಸಿ ಕ್ಯಾಮರಾ ಪರಿಶೀಲಿಸಿದಾಗ ಯಾವುದೋ ಒಂದು ಬೆಳಕು ಹಾಗೂ ಬಿಳಿ ಪಕ್ಷಿಯೊಂದು ಹಾರಾಡಿರುವುದು ಕಂಡು ಬಂದಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಒಂದು ಘಟನೆ ನಡೆದಿದ್ದು, ನಂಬುವವರಿಗೆ ಮಾತ್ರ ಇದರ ಮಹತ್ವ ತಿಳಿಯುವುದು ಎಂಬುದಾಗಿ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಅವರು ಮಾಹಿತಿ ನೀಡಿದ್ದಾರೆ.

Intro:ಪಂಜ (ಸುಳ್ಯ)

ತುಳುನಾಡಿನ ಇತಿಹಾಸ ಪ್ರಸಿದ್ಧ ಸುಳ್ಯ ತಾಲೂಕಿನ ಪಂಜ ಸಾವಿರ ಸೀಮೆಯ ಒಡೆಯನಾಗಿರುವ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿದಾನದಲ್ಲಿ ದಿನಾಂಕ 08/10/2019ರಂದು ಪವಾಡವೊಂದು ನಡೆದಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಸುದ್ದಿ ಹಬ್ಬಿದೆ.

ಶ್ರೀ ದೇವರ ಸನ್ನಿಧಾನದಲ್ಲಿ ನೆಲೆನಿಂತಿರುವ ಅಮ್ಮನವರ ಗುಡಿಯಲ್ಲಿ ಪ್ರತೀ ವರ್ಷವೂ ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನ ಪೂಜೆಗಳನ್ನು ನಡೆಸುತ್ತಾ ಬರಲಾಗುತ್ತದೆ.
ಈ ಪ್ರಕಾರ ಆಡಳಿತಾಧಿಕಾರಿ ಮತ್ತು ಸಿಬ್ಬಂದಿಗಳು ಈ ವರ್ಷ ಕೂಡಾ ದೇವಳದ ಅಮ್ಮನವರ ಗುಡಿಯಲ್ಲಿ ನವರಾತ್ರಿಯ ಹಬ್ಬವನ್ನು ಶ್ರೀ ದೇವರ ವಿಶೇಷ ಪೂಜೆ ಕಳೆದ ಎಂಟು ದಿನಗಳಿಂದ ನಡೆಸುತ್ತಾ ಬರಲಾಗಿತ್ತು.

ಅದರಂತೆ ದಿನಾಂಕ 7 10 2019ನೇ ಸೋಮವಾರ ಒಂಬತ್ತನೇ ದಿನದ ಆಯುಧ ಪೂಜೆಯ ಪ್ರಯುಕ್ತ ಬೆಳಗಿನಿಂದಲೇ ದೇವಳದಲ್ಲಿ ಪ್ರಧಾನ ದೇವರಿಗೆ ಹಾಗೂ ಅಮ್ಮನವರಿಗೆ ವಿಶೇಷ ಪೂಜೆಗಳು ಮತ್ತು ವಾಹನ ಪೂಜೆಗಳು ರಾತ್ರಿಯವರೆಗೂ ನಡೆದಿತ್ತು. ಭಕ್ತಾದಿಗಳು ಶ್ರೀದೇವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ತೆರಳಿದರು. ನಂತರ ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರೂ ರಾತ್ರಿ 12 ಗಂಟೆಗೆ ಮನೆಗೆ ತೆರಳಿದ್ದಾರೆ.
ಆದರೆ ಇದ್ದಕ್ಕಿದ್ದಂತೆ ರಾತ್ರಿ 1.30 ಗಂಟೆಗೆ ಸರಿಯಾಗಿ ದೇಗುಲದ ಒಳಗಡೆ
ಡೋಳು ಹಾಗೂ ಜಯಗಂಟೆ ಬಾರಿಸುವ ಶಬ್ದ ಕೇಳಿ ಬಂದಿದೆ. ತಕ್ಷಣ ಭದ್ರತಾ ಸಿಬ್ಬಂದಿ ಈ ವಿಷಯವನ್ನು ಆಡಳಿತ ಮಂಡಳಿಯ ಅಧಿಕಾರಿಯಾಗಿರುವ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ಅರ್ಚಕರಿಗೆ ತಿಳಿಸಿದ್ದಾರೆ. ತಕ್ಷಣ ಕ್ಷೇತ್ರಕ್ಕೆ ಆಗಮಿಸಿ ಪ್ರಧಾನ ಬಾಗಿಲು ತೆರೆದು ಒಳಗಡೆಗೆ ಬಂದು ನೊಡುವಾಗ ಡೋಳು ಹಾಗೂ ಜಯಗಂಟೆ ಬಾರಿಸುತ್ತಿರುವುದು ಬಂದಿದೆ.

ಹನ್ನೆರಡು ಸ್ವಿಚ್ ಗಳು ಇರುವ ಇಲೆಕ್ಟ್ರಿಕ್ ಬೋರ್ಡ್ನಲ್ಲಿ, ಇನ್ಟ್ರುಮೆಂಟ್ ಇರುವ ಅದೇ ಸ್ವಿಚ್ ಮಾತ್ರ ಆನ್ ಆಗಿದ್ದು, ಬೇರೆ ಯಾವುದೇ ಸ್ವಿಚ್ ಗಳು ಆನ್ ಆಗದೇ ಇರುವುದು ಕಂಡಾಗ ನೋಡುಗರಿಗೂ ವಿಶೇಷ ಅನ್ನಿಸದೇ ಇರದು.

ಆದರೆ ಮಧ್ಯಾಹ್ನದ ಮಹಾಪೂಜೆ ಮತ್ತು ರಾತ್ರಿಪೂಜೆಗೆ ಇಲೆಕ್ಟ್ರಿಕ್ ಸಾಧನವನ್ನು ಬಳಸುತ್ತಿದ್ದರು. ಕಾಕತಾಳಿಯ ಎಂಬಂತೆ ಆ ದಿನ ಎರಡು ಹೊತ್ತಲ್ಲಿ ನಡೆದ ಪೂಜೆಗೂ ಗಂಟೆ ಹೊಡೆದಂತಹ ಎಲೆಕ್ಟ್ರಿಕ್ ಯಂತ್ರ ಬಳಸಿಲ್ಲ ಎನ್ನಲಾಗುತ್ತಿದೆ. ಈ ಸೋಜಿಗವನ್ನು ಕಂಡ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶ್ರೀ ದೇವರ ಸನ್ನಿಧಾನದಲ್ಲಿ ಮತ್ತು ಅಮ್ಮನವರ ಗುಡಿಯಲ್ಲಿ ಕೂಡ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಡೋಳು ಹಾಗೂ ಜಯಗಂಟೆಯ ಸ್ವಿಚ್ ಆಫ್ ಮಾಡಿ ತೆರಳಿದ್ದಾರೆ. ಇದೀಗ ದೇವಸ್ಥಾನದ ಸಿ.ಸಿ ಕ್ಯಾಮರಾ ಪರಿಶೀಲಿಸಿದಾಗ ಯಾವುದೋ ಒಂದು ಬೆಳಕು ಹಾಗೂ ಬಿಳಿ ಪಕ್ಷಿಯೊಂದು ಹಾರಾಡಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಒಂದು ಘಟನೆ ನಡೆದಿರುವುದಂತು ಸತ್ಯ. ನಂಬುವವರಿಗೆ ಮಾತ್ರ ಇದರ ಮಹತ್ವ ತಿಳಿಯುವುದು, ಎಂಬುದಾಗಿ
ಆಡಳಿತಾಧಿಕಾರಿ ಡಾ |ದೇವಿಪ್ರಸಾದ್ ಕಾನತ್ತೂರು ಅವರು ಮಾಹಿತಿ ನೀಡಿದ್ದಾರೆ.Body:ಪಂಜ ದೇವಸ್ಥಾನConclusion:ಪ್ರಕಾಶ್ ಕಡಬ,ಸುಳ್ಯ(ಮಂಗಳೂರು)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.