ETV Bharat / state

ಬಂಟ್ವಾಳದ ಗಾಂಜಾ ಮಾರಾಟಗಾರನಿಗೆ ಆಂಧ್ರ ಲಿಂಕ್: ಪೊಲೀಸರಿಂದ ಚುರುಕಿನ ತನಿಖೆ - Bantwal Ganja Case

ನಿನ್ನೆ ಬಂಧಿಸಲಾಗಿದ್ದ ಆರೋಪಿ ಅಹಮದ್ ಸಾಬಿತ್ ವಿಶಾಖಪಟ್ಟಣದಿಂದ ಗಾಂಜಾ ತರಿಸಿ ಪರ್ಲಿಯಾ ಮನೆಯೊಂದರಲ್ಲಿ ದಾಸ್ತಾನು ಮಾಡಿ ಬಳಿಕ ಜಿಲ್ಲೆಯ ಮೂಲೆಮೂಲೆಗೆ ಸರಬರಾಜು ಮಾಡುಲಾಗುವ ಬಗ್ಗೆ ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

Interstate link to Ganja salesman
ಬಂಧಿತ ಆರೋಪಿ
author img

By

Published : Sep 10, 2020, 10:39 PM IST

ಬಂಟ್ವಾಳ : ಎರಡು ದಿನಗಳ ಹಿಂದೆ ತಾಲೂಕಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಹೊಂದಿದ್ದ ವ್ಯಕ್ತಿಯ ಬಂಧನವಾಗಿತ್ತು. ಇವುಗಳ ಪೈಕಿ ಬೃಹತ್ ಪ್ರಮಾಣದ ಗಾಂಜಾವನ್ನು ದಾಸ್ತಾನಿಟ್ಟುಕೊಂಡಿದ್ದ ವ್ಯಕ್ತಿಗೆ ವಿಶಾಖಪಟ್ಟಣ ಸಹಿತ ಹೊರರಾಜ್ಯಗಳ ಲಿಂಕ್ ಇರುವುದು ಇದೀಗ ತನಿಖೆಯಿಂದ ಗೊತ್ತಾಗಿದೆ.

Interstate link to Ganja salesman
ಆರೋಪಿಯಿಂದ ವಶಪಡಿಸಿಕೊಂಡ ಗಾಂಜಾ

ಕಳೆದೆರಡು ದಿನಗಳ ಹಿಂದೆ ವಿಟ್ಲದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪೆಡ್ಲರ್ ಬಳಿ ಗಾಂಜಾ ಪತ್ತೆಯಾಗಿತ್ತು. ಈತ ಬಿ.ಸಿ.ರೋಡ್ ಬಿ.ಮೂಡ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಅದೇ ದಿನ ದಾಳಿ ನಡೆಸಿದ ನಗರ ಠಾಣಾ ಪೊಲೀಸರು ಆರೋಪಿ ಅಹಮದ್ ಸಾಬಿತ್ (30) ಎಂಬಾತನಿಂದ ಸುಮಾರು 19.5 ಲಕ್ಷ ರೂ. ಮೌಲ್ಯದ 40 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ದಾಳಿ ವೇಳೆ ಓರ್ವ ತಪ್ಪಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ಆರೋಪಿ ಸಾಬಿತ್​​ನನ್ನು ವಿಚಾರಣೆ ಮಾಡಿದಾಗ ಜಿಲ್ಲೆಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲದ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ದಾಳಿ ವೇಳೆ ಓರ್ವ ಪರಾರಿಯಾಗಿದ್ದು ಉಳಿದಂತೆ ಇನ್ನೂ ಮೂವರು ಈ ಜಾಲದಲ್ಲಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಶಾಖಪಟ್ಟಣದಿಂದ ಗಾಂಜಾ ತರಿಸಿ ಪರ್ಲಿಯಾ ಮನೆಯೊಂದರಲ್ಲಿ ದಾಸ್ತಾನು ಮಾಡಿ ಬಳಿಕ ಜಿಲ್ಲೆಯ ಮೂಲೆಮೂಲೆಗೆ ಸರಬರಾಜು ಮಾಡುಲಾಗುವ ಬಗ್ಗೆ ತನಿಖೆಯ ವೇಳೆ ಆತ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದ್ದು ಜಾಲವನ್ನು ಪತ್ತೆ ಹಚ್ಚಲು ಪೊಲೀಸರ ತಂಡ ರೆಡಿಯಾಗಿದೆ.

Interstate link to Ganja salesman
ಬಂಧಿತ ಆರೋಪಿ

ಎಸ್​ಪಿ ಲಕ್ಮೀಪ್ರಸಾದ್ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್​ಪಿ ವೆಲೆಂಟೈನ್ ಡಿ-ಸೋಜ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಎಸ್​ಐ ಅವಿನಾಶ್ ಅವರ ಜೊತೆ ಪ್ರೋಬೆಷನರಿ ಎಸ್​ಐ ಪ್ರಶಾಂತ್, ಹೆಚ್​.ಸಿ.ಸುಜು, ಸಿಬ್ಬಂದಿ ಶ್ರೀಕಾಂತ್, ವನಿತ, ವೃತ್ತ ನಿರೀಕ್ಷಕ ಅಪರಾಧ ವಿಭಾಗದ ತಂಡದ ಗೋಣಿಬಸಪ್ಪ, ಕುಮಾರ್, ವಿವೇಕ್ ಮತ್ತು ಚಾಲಕ ವಿಜಯ್ ಕಾರ್ಯಚರಣೆಯ ವೇಳೆ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.