ETV Bharat / state

ಮಂಗಳೂರು ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಆರಂಭ - Mangalore International Airport

ಟರ್ಮಿನಲ್​ ಕೇಂದ್ರ ಮಾನದಂಡಗಳ ಪ್ರಕಾರ ಎಲ್ಲಾ ರೀತಿಯ ಸೌಲಭ್ಯವನ್ನು ಒಳಗೊಂಡಿದೆ.

international cargo terminal started at mangalore airport
ಮಂಗಳೂರು ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಆರಂಭ
author img

By

Published : May 23, 2023, 6:32 PM IST

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಚಟುವಟಿಕೆ ಆರಂಭಿಸಿದ್ದು, ಇದು ವಾರ್ಷಿಕ 9 ಸಾವಿರ ಟನ್ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳದ್ದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ಸಾರ್ವಜನಿಕ ಬಳಕೆಗೆ ತೆರೆದುಕೊಂಡಿದೆ. 1,891 ಚದರ್​ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಐಸಿಟಿ ವಾರ್ಷಿಕ 9,000 ಟನ್ ಅಂತಾರಾಷ್ಟ್ರೀಯ ಮತ್ತು ದೇಶಿಯ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸ್ಥಳೀಯ ವ್ಯಾಪಾರ ಮತ್ತು ಉದ್ಯಮಕ್ಕೆ ಇದು ಪೂರಕವಾಗುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ: ಇಲ್ಲಿ ಪಾರ್ಕಿಂಗ್ ಸಮಸ್ಯೆ ಇರುವುದಿಲ್ಲ, ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 10 ಟ್ರಕ್ ಬೇಗಳು, ಎರಡು ಡಾಕ್ ಲೆವೆಲ್ಲರ್​ಗಳು ಮತ್ತು ಫೋರ್ಕ್ಲಿಫ್ಟ್ ಸೌಲಭ್ಯ ಇಲ್ಲಿದೆ. ವಿಮಾನಯಾನ ಮತ್ತು ಕಸ್ಟಮ್ಸ್​ಗೆಂದೇ ಪ್ರತ್ಯೇಕ ಕಚೇರಿ ಸ್ಥಳವಿದೆ. ಕೇಂದ್ರೀಕೃತ ಎಸಿ ಹೊಂದಿರುವ ಈ ಸೌಲಭ್ಯ ವಾಯುಯಾನ ಸರಕು ನಿಯಂತ್ರಕರು ಸೂಚಿಸಿದ ಮಾನದಂಡಗಳ ಪ್ರಕಾರ ಸ್ಟ್ರಾಂಗ್ ರೂಮ್, ಕೋಲ್ಡ್ ಸ್ಟೋರೇಜ್ ಮತ್ತು ಅಪಾಯಕಾರಿ ಸರಕು ಶೇಖರಣಾ ಸೌಲಭ್ಯವನ್ನೂ ಒದಗಿಸುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

international cargo terminal started at mangalore airport
ಮಂಗಳೂರು ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಆರಂಭ

ಇದನ್ನೂ ಓದಿ: 2000 ರೂ. ನೋಟ್​ ಹಿಂಪಡೆದುಕೊಂಡ ಆರ್​ಬಿಐ... ನೋಟು ಇದ್ದವರು ಹೀಗೆ ಮಾಡಿ...! ಭಯಬೇಡ - ಆರ್​ಬಿಐ ಅಭಯ

ಸಿಸಿಟಿವಿ ಕಣ್ಗಾವಲು: ಇಡೀ ಐಸಿಟಿ ಸೌಲಭ್ಯವು ಸಿಸಿಟಿವಿ ಕಣ್ಗಾವಲಿನಲ್ಲಿದೆ. ಇದು ತರಬೇತಿ, ದಾಖಲೀಕರಣ, ಸಮ್ಮೇಳನ ಮತ್ತು ಬೋರ್ಡ್ ಕೋಣೆಗೆ ಪ್ರತ್ಯೇಕ ಸ್ಥಳವನ್ನು ಹೊಂದಿದೆ. ವಿಮಾನ ನಿಲ್ದಾಣವು ಪ್ರವೇಶ ದ್ವಾರದಲ್ಲಿ ಪಾಸ್ ವಿತರಣೆ ಮತ್ತು ತಪಾಸಣೆ ಬೂತ್ ಅನ್ನು ಸಹ ಸ್ಥಾಪಿಸಿದೆ. ಈ ಸೌಲಭ್ಯ ಸಿಐಎಸ್ಎಫ್, ಎಎಸ್​ಜಿ ಸಿಬ್ಬಂದಿ ಕಣ್ಗಾವಲಿನಲ್ಲಿದೆ. ಐಸಿಟಿ 100 X 100 ಮತ್ತು 145 X185 ಎಕ್ಸ್-ರೇ ಬ್ಯಾಗೇಜ್ ತಪಾಸಣಾ ವ್ಯವಸ್ಥೆಗಳು (ಎಕ್ಸ್ಬಿಐಎಸ್ ಯಂತ್ರ) ಮತ್ತು ಸ್ವೀಕರಿಸಿದ ಮತ್ತು ರವಾನಿಸಿದ ಸರಕುಗಳನ್ನು ಪರೀಕ್ಷಿಸಲು ಸ್ಫೋಟಕ ಪತ್ತೆ ಸಾಧನಗಳನ್ನು ಹೊಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ, ಐಸಿಟಿ ಹಣ್ಣುಗಳು, ತರಕಾರಿಗಳು, ಆಹಾರ ಪದಾರ್ಥಗಳು, ಶೀತಲ/ ಹೆಪ್ಪುಗಟ್ಟಿದ ಮೀನು, ಬಿಡಿ ಭಾಗಗಳು ಮತ್ತು ಜವಳಿಗಳು ಇರುವ ಸರಕುಗಳನ್ನು ನಿರ್ವಹಿಸುತ್ತದೆ. ದೇಶೀಯವಾಗಿ, ಸರಕು ಪೋಸ್ಟ್ ಆಫೀಸ್ (ಪಿಒ) ಮೇಲ್ ಅನ್ನು ಒಳಗೊಂಡಿದೆ. ಕೊರಿಯರ್ ಐಟರ್ಮ್ಸ್, ಹಾಳಾಗುವ ವಸ್ತುಗಳು, ಬೆಲೆಬಾಳುವ ವಸ್ತುಗಳು (ಆಭರಣಗಳು), ಔಷಧಕ್ಕಾಗಿ ರಕ್ತದ ಮಾದರಿಗಳು; ಮಾನವ ಅವಶೇಷಗಳು; ದಾಖಲೆಗಳು / ಸಾಮಾನ್ಯ ಮತ್ತು ಇ-ಕಾಮರ್ಸ್ ವಸ್ತುಗಳು ಮತ್ತು ಅಪಾಯಕಾರಿ ಸರಕುಗಳು. ಪಿಒ ಮೇಲ್ ಮುಖ್ಯವಾಗಿ ಮಣಿಪಾಲ ಮೂಲದ ಭದ್ರತಾ ಮುದ್ರಣಾಲಯ ಬ್ಯಾಂಕುಗಳಿಗೆ ಚೆಕ್ ಪುಸ್ತಕಗಳು ಮತ್ತು ಇತರ ಸರ್ಕಾರಿ ಭದ್ರತಾ ದಾಖಲೆಗಳಂತಹ ವಸ್ತುಗಳನ್ನು ನಿರ್ವಹಿಸಲು ವ್ಯವಸ್ಥೆ ಇಲ್ಲಿದೆ.

ಇದನ್ನೂ ಓದಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್​ಗೆ ಡಿಜಿಸಿಎ ಅನುಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.