ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಲಡ್ ಸೈಬೋ ತಂಡ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಹಾನಿಗಳಿಗೆ ಸ್ಪಂದಿಸುತ್ತಿದ್ದು, ಇಂದು ಈ ತಂಡಕ್ಕೆ ಚಾಲನೆ ನೀಡಲಾಯಿತು.
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಹಾನಿಗಳಿಗೆ ಸ್ಪಂದಿಸಲು ಜಿಲ್ಲಾ ಮಟ್ಟದಲ್ಲಿ ಸೇವಾ ನಿರತ ತಂಡ (ಎಸ್ ಎಸ್ ಎಫ್ ) ಮುಂದಾಗಿದ್ದು, ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ಸಖಾಪಿ ಸೆರ್ಕಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ, ಮುಹಮ್ಮದ್ ಅಲೀ, ಪೈಝಲ್ ಝುಹ್ರಿ ಕಲ್ಲುಗುಂಡಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ಕಾರ್ಯದರ್ಶಿ ರಫೀಕ್ ಸುರತ್ಕಲ್, ಸದಸ್ಯರಾದ ನವಾಜ್ ಸಖಾಪಿ ಅಡ್ಯಾರ್ಪದವು, ಆರಿಪ್ ಝುಹ್ರಿ ಮುಕ್ಕ ಮುಂತಾದವರು ಉಪಸ್ಥಿತರಿದ್ದರು.