ETV Bharat / state

ಭಾರತೀಯ ಕೋಸ್ಟ್ ಗಾರ್ಡ್ ವಿಶ್ವದ ಅತಿದೊಡ್ಡ ಕೋಸ್ಟ್ ಗಾರ್ಡ್: ರಾಜ್ಯಪಾಲ ಗೆಹ್ಲೋಟ್‌ - ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಮಂಗಳೂರಿನ ಕೋಸ್ಟ್ ಗಾರ್ಡ್​ನ ಕೇಂದ್ರ ಸ್ಥಳದಲ್ಲಿ ನಡೆದ 47ನೇ ಭಾರತೀಯ ಕೋಸ್ಟ್ ಗಾರ್ಡ್​ನ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದ್ದರು.

Governor Thawar Chand Gehlot
47ನೇ ಭಾರತೀಯ ಕೋಸ್ಟ್ ಗಾರ್ಡ್​ನ ರೈಸಿಂಗ್ ಡೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ
author img

By

Published : Feb 2, 2023, 10:27 PM IST

ಮಂಗಳೂರು: "ಭಾರತೀಯ ಕೋಸ್ಟ್ ಗಾರ್ಡ್ ಭಾರತೀಯ ಸೇನೆಯ ಭಾಗವಾಗಿದ್ದು, ದೇಶದ ಸಶಸ್ತ್ರ ಪಡೆಯಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ವಿಶ್ವದಲ್ಲೇ ಅತಿ ದೊಡ್ಡ ಕೋಸ್ಟ್ ಗಾರ್ಡ್ ಪಡೆಗಳಲ್ಲಿ ಒಂದು. ಸಮುದ್ರ ಗಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಮ್ಮ ಭಾರತೀಯ ಕೋಸ್ಟ್ ಗಾರ್ಡ್ ದೇಶದ ಕಡಲ ಗಡಿಯ ಸುಮಾರು 7,500 ಕಿ.ಮೀ. ರಕ್ಷಣೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊಂದಿದೆ" ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಕೋಸ್ಟ್ ಗಾರ್ಡ್​ ಕೇಂದ್ರ ಸ್ಥಳದಲ್ಲಿ ನಡೆದ 47ನೇ ಭಾರತೀಯ ಕೋಸ್ಟ್ ಗಾರ್ಡ್​ನ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಅವರು, "ಭಾರತೀಯ ಕೋಸ್ಟ್ ಗಾರ್ಡ್ ತನ್ನ ಕರ್ತವ್ಯಗಳನ್ನು ಅತ್ಯಂತ ಸಮರ್ಪಣೆ, ಧೈರ್ಯ ಮತ್ತು ಭಕ್ತಿಯಿಂದ ನಿರ್ವಹಿಸುತ್ತಿದೆ. ತನ್ನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಆತ್ಮವಿಶ್ವಾಸದಿಂದ ವಿಶ್ವದಲ್ಲೇ ವಿಶಿಷ್ಟವಾದ ಗುರುತು ಮಾಡಿದೆ. ಸಾಗರ ವ್ಯಾಪಾರ ಮತ್ತು ಸಾರಿಗೆ ಜಾಗತಿಕ ಆರ್ಥಿಕತೆಯ ಬೆನ್ನೆಲುಬಾಗಿದೆ. ಕಳೆದ ಎರಡು ದಶಕಗಳಿಂದ ದೇಶದ ಆರ್ಥಿಕ ಬೆಳವಣಿಗೆಯು ಕಡಲ ವ್ಯಾಪಾರ ಮತ್ತು ವಾಣಿಜ್ಯದ ಪ್ರಾಮುಖ್ಯತೆಯನ್ನು ಸ್ಥಾಪಿಸಿದೆ" ಎಂದರು.

Governor Thawar Chand Gehlot
47ನೇ ಭಾರತೀಯ ಕೋಸ್ಟ್ ಗಾರ್ಡ್​ನ ರೈಸಿಂಗ್ ಡೆ ಕಾರ್ಯಕ್ರಮದಲ್ಲಿ ಭಾವಚಿತ್ರಗಳನ್ನು ವೀಕ್ಷಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

"ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಯು ದೇಶೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಕಡಲ ಸಂಚಾರದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ಜಾಗತಿಕ ಪ್ರವೃತ್ತಿಗಳಿಂದ ಸ್ಪಷ್ಟವಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದೆ" ಎಂದು ಅವರು ಸ್ಮರಿಸಿದರು. "ಕರ್ನಾಟಕಕ್ಕೆ ಅಪ್ಪಳಿಸಿದ ಟೌಟ್, ಗುಲಾಬ್ ಮತ್ತು ಶಾಹೀನ್ ಚಂಡಮಾರುತಗಳ ಸಮಯದಲ್ಲಿ ಜೀವ ಮತ್ತು ಆಸ್ತಿ ಉಳಿಸಿದೆ. ಭಾರತೀಯ ಕೋಸ್ಟ್ ಗಾರ್ಡ್ ಮೀನುಗಾರರನ್ನು ರಕ್ಷಿಸುವುದು ಮಾತ್ರವಲ್ಲದೇ ಸಮುದಾಯ ಸಂವಾದ ಕಾರ್ಯಕ್ರಮಗಳ ಮೂಲಕ ವಿವಿಧ ರಕ್ಷಣಾ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮೀನುಗಾರರಿಗೆ ತಿಳಿಸುತ್ತಿದೆ" ಎಂದು ಹೇಳಿದರು.

ಎರಡು ರಾಡಾರ್ ಕೇಂದ್ರಗಳು: "ಸಂಪೂರ್ಣ ಭಾರತೀಯ ಕರಾವಳಿ ರೇಖೆಯ ಉದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ಜಾಲವನ್ನು ಸ್ಥಾಪಿಸುವಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ದೃಷ್ಟಿಕೋನದಲ್ಲಿ, ಕರ್ನಾಟಕದಲ್ಲಿ ಸುರತ್ಕಲ್ ಮತ್ತು ಭಟ್ಕಳದಲ್ಲಿ ಎರಡು ರಾಡಾರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಮುಂಬರುವ ವರ್ಷದಲ್ಲಿ ಇನ್ನೂ ಎರಡು ರಾಡಾರ್ ಕೇಂದ್ರಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಭವ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಮುಂದಿನ 25 ವರ್ಷಗಳಲ್ಲಿ ವಿಶ್ವದ ನಾಯಕನಾಗಿಸುವ ಕಾರ್ಯವಾಗಬೇಕಿದೆ. ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರವಹಿಸುವುದನ್ನು ಮುಂದುವರಿಸಿ ಹಾಗೂ ರಾಷ್ಟ್ರದ ಪ್ರಗತಿಗಾಗಿ ಕೊಡುಗೆ ನೀಡಲು ಇತರರನ್ನು ಪ್ರೇರೇಪಿಸಿ" ಎಂದು ಸಲಹೆ ನೀಡಿದರು. ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.