ETV Bharat / state

ಬೆಳ್ತಂಗಡಿ: ಸರ್ವಧರ್ಮೀಯರ ಕೊರೊನಾ ಸೋಲ್ಜರ್ಸ್ ತಂಡ ಉದ್ಘಾಟನೆ

ಬೆಳ್ತಂಗಡಿಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ನೇತೃತ್ವದಲ್ಲಿ, ಸರ್ವಧರ್ಮೀಯರನ್ನೊಳಗೊಂಡ ಕೊರೊನಾ ಸೋಲ್ಜರ್ಸ್ ತಂಡ ಉದ್ಘಾಟನೆ ಆಯಿತು.

ಕೊರೊನಾ ಸೋಲ್ಜರ್ಸ್ ತಂಡ ಉದ್ಘಾಟನೆ
ಕೊರೊನಾ ಸೋಲ್ಜರ್ಸ್ ತಂಡ ಉದ್ಘಾಟನೆ
author img

By

Published : Aug 17, 2020, 10:43 AM IST

ಬೆಳ್ತಂಗಡಿ: ಕರ್ನಾಟಕ ಮಾನವ ಹಕ್ಕುಗಳ ಸಮಿತಿ, ಬೆಳ್ತಂಗಡಿ ನೇತೃತ್ವದಲ್ಲಿ ವಿವಿಧ ಧರ್ಮಗಳ ಸದಸ್ಯರನ್ನೊಳಗೊಂಡ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡವನ್ನು ಸರಕಾರಿ ನೌಕರರ ಸಂಘದ ಏಕತಾಭವನದಲ್ಲಿ ಉದ್ಘಾಟನೆ ಮಾಡಲಾಯಿತು.

ಕೋವಿಡ್ ಸೋಂಕಿಗೆ ಒಳಗಾದವರನ್ನು ಶಾಪಗ್ರಸ್ತರು ಎಂಬ ಭಾವನೆಯಿಂದ ನೋಡಲಾಗುತ್ತಿದೆ. ಇದು ಸರಿಯಲ್ಲ, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ದೇವರ ಆಶೀರ್ವಾದದ ಮುಂದೆ ನಾವೆಲ್ಲ ತೃಣಮಾತ್ರರು ಎಂಬುದನ್ನು ಕೋವಿಡ್ ಎಂಬ ಸೂಕ್ಷ್ಮ ವೈರಾಣು ತೋರಿಸಿಕೊಟ್ಟಿದೆ. ಪ್ರಪಂಚದ ಜೀವರಾಶಿಗಳಲ್ಲಿ ಶ್ರೇಷ್ಠತೆಯ ಜನ್ಮ ಪಡೆದವರು ಮನುಷ್ಯರು. ಅಂತಹ ಮನುಷ್ಯರ ಅಂತಿಮಯಾತ್ರೆಯನ್ನು ಗೌರವಯುತವಾಗಿ ನಡೆಸಿಕೊಡಲು ಮುಂದಾಗಿರುವ ಸರ್ವಧರ್ಮ ಪ್ರಿಯರ ಸಂಘಟನೆ ಅತ್ಯಂತ ಶ್ರೇಷ್ಠವಾದುದು ಈ ತಂಡಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಶುಭ ಹಾರೈಸಿದರು.

ಕೊರೊನಾ ಸೋಲ್ಜರ್ಸ್ ತಂಡ ಉದ್ಘಾಟನೆ

ಜಗತ್ತಿಗೆ ಔಷಧ ಹಾಗೂ ಶಸ್ತ್ರಾಸ್ತ್ರ ನೀಡುವಷ್ಟು ಸಾಮರ್ಥ್ಯ ನಮ್ಮಲ್ಲಿದೆ ಎಂದು ಒಂದೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಕಣ್ಣಿಗೆ ಕಾಣದ ವೈರಸ್‌ನ ಮುಂದೆ ಶಕ್ತಿಶಾಲಿ ರಾಷ್ಟ್ರಗಳೇ ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದೆ. ಲಕ್ಷ ಗಟ್ಟಲೆ ಜನ ಸಾಯುತಿದ್ದಾರೆ. ಪರಸ್ಪರ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುವ ಮೂಲಕ ಮಾನವ ಶ್ರೇಷ್ಠ ಜೀವನ ನಮ್ಮದಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪ್ರತಿಯೊಬ್ಬರಿಗೂ ಸಾವಿನ ಅಂತಿಮಯಾತ್ರೆಯ ಆ ಕ್ಷಣಗಳು ಅತ್ಯಮೂಲ್ಯ. ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ತನ್ನ ಕುಟುಂಬದವರು ಮನೆಮಂದಿ ಮುಟ್ಟದಂತಹ ಸ್ಥಿತಿಯನ್ನು ಈ ಸೋಂಕು ನಿರ್ಮಿಸಿದೆ. ಈ ನಡುವೆ ಸಮಾಜಕ್ಕೆ ಅರಿವಿನ ಶಿಕ್ಷಣ ನೀಡುವಲ್ಲಿ ರಚನೆಯಾಗಿರುವ ತಂಡದ ಕಾರ್ಯವೈಖರಿ ಸಮಾಜಕ್ಕೆ ಮಾದರಿ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ ಸಿಂಹ ನಾಯಕ್ ಮಾತನಾಡಿ, ಬದುಕು ಹಲವು ಅನಿರೀಕ್ಷಿತಗಳಿಂದ ಕೂಡಿರುವಂತಹದ್ದು, ಪಂಚ ಭೂತಗಳಿಂದ ಕೂಡಿದ ಸೋಂಕಿತ ಶರೀರದ ಅಂತ್ಯಸಂಸ್ಕಾರ ಎಂಬುದು ಗೌರವಯುತವಾಗಿ ನೆರವೇರಿಸುವ ಕಾರ್ಯಕ್ಕೆ ಮುಂದಾದ ಕೊರೊನಾ ಸೋಲ್ಜರ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಶುಭಹಾರೈಸಿದರು. ಕರ್ನಾಟಕ ಮಾನವ ಹಕ್ಕುಗಳ ಸಮಿತಿ ತಾಲೂಕು ಅಧ್ಯಕ್ಷ ಪಿ.ಸಿ.ಸೆಬಾಸ್ಟಿನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಸಮುದಾಯ ಅಭಿವೃದ್ಧಿ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.