ETV Bharat / state

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸಾಧನೆ ಶೂನ್ಯ: ಎನ್.ಎ.ಹ್ಯಾರಿಸ್​​​ - ನೋಟ್ ಬ್ಯಾನ್

ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸಾಧನೆ ಶೂನ್ಯ. ನೋಟ್ ಬ್ಯಾನ್ ಮಾಡಿದವರು ಬಿಜೆಪಿಯವರು. ಯುವಕರು ಮೋದಿ ಜಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಯುವಕರಿಗೆ ಏನೂ ಮಾಡಿಲ್ಲ ಎಂದು ಶಾಸಕ ಎನ್.ಎ.ಹ್ಯಾರೀಸ್ ಟೀಕಿಸಿದರು.

ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್
author img

By

Published : Apr 6, 2019, 5:36 PM IST

ಮಂಗಳೂರು: ಬಿಜೆಪಿಯವರು ಕಾಂಗ್ರೆಸ್ 60 ವರ್ಷಗಳಲ್ಲಿ ಈ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಇತ್ತು ಏನು ಮಾಡಿತು. ಅವರ ಸಾಧನೆ ಶೂನ್ಯ ಎಂದು ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್ ಹೇಳಿದರು.

ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೋಟ್ ಬ್ಯಾನ್ ಮಾಡಿದರು, ಜಿಎಸ್​ಟಿ ತಂದರು, ನಗರಗಳ ಹೆಸರು ಬದಲಾವಣೆ ಮಾಡಿದರು. ಅದರಿಂದ ಈ ದೇಶಕ್ಕೆ ಏನಾಯಿತು? ಜಾತಿ, ಧರ್ಮ ಎಂಬುವುದು ವೈಯುಕ್ತಿಕ. ಜಾತಿ ರಾಜಕಾರಣ ಈ ದೇಶಕ್ಕೆ ಮಾರಕ. ಭಾರತ ದೇಶ ನಮ್ಮದು ಎಂಬ ನೆಲೆಯಲ್ಲಿ ನಾವು ಮುಂದುವರಿಯಬೇಕು ಎಂದರು.

ಯುವಕರು ಮೋದಿ ಜಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಯುವಕರಿಗೆ ಏನೂ ಮಾಡಿಲ್ಲ. ಮೋದಿ ಸರ್ಕಾರದ ರಫೇಲ್​​ ಹಗರಣದ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ನೇರವಾಗಿ ಹೇಳಿದ್ದಾರೆ. ನೀವು ಚೋರ್ ಅಲ್ಲದಿದ್ದರೆ ಸಿಬಿಐ ಅಧಿಕಾರಿಯನ್ನು ಯಾಕೆ ರಾತ್ರೋರಾತ್ರಿ ವರ್ಗಾವಣೆ ಮಾಡುತ್ತೀರಿ. ಕೋರ್ಟ್ ಅವರನ್ನು ಅಲ್ಲಿಗೇ ಕಳಿಸಿದ್ದರೆ ನೀವು ಮತ್ತೆ ಬೇರೆ ಕಡೆಗೆ ವರ್ಗಾವಣೆ ಮಾಡಿ ಫೈಲ್ ಕಳೆದು ಹೋಗಿದೆ ಎಂಬ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಇದರ ಸತ್ಯಾಂಶ ಬೆಳಕಿಗೆ ಬಂದೇ ಬರುತ್ತದೆ ಎಂದು ಟೀಕಿಸಿದರು.

Intro:ಮಂಗಳೂರು: ಬಿಜೆಪಿಯವರು ಕಾಂಗ್ರೆಸ್ 60ವರ್ಷಗಳಲ್ಲಿ ಈ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಇತ್ತು ಏನು ಮಾಡಿತು. ಅವರ ಸಾಧನೆ ಶೂನ್ಯ ನೋಟ್ ಬ್ಯಾನ್ ಮಾಡಿದರು, ಜಿಎಸ್ಟಿ ತಂದರು, ನಗರಗಳ ಹೆಸರು ಬದಲಾವಣೆ ಮಾಡಿದರು ಈ ದೇಶಕ್ಕೆ ಏನಾಯಿತು. ಜಾತಿ ಧರ್ಮ ಎಂಬುವುದು ವೈಯುಕ್ತಿಕ. ಜಾತಿ ರಾಜಕಾರಣ ಈ ದೇಶಕ್ಕೆ ಮಾರಕ. ಭಾರತ ದೇಶ ನಮ್ಮದು ಎಂಬ ನೆಲೆಯಲ್ಲಿ ನಾವು ಮುಂದುವರಿಯಬೇಕು ಎಂದು ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಅವರು ಮಾತನಾಡಿದರು.

ಯುವಕರು ಮೋದಿ ಜಪ ಮಾಡುತ್ತಿದ್ದಾರೆ. ಆದರೆ ಮೋದಿ ಸರಕಾರ ಯುವಕರಿಗೆ ಏನೂ ಮಾಡಿಲ್ಲ. ಐಟಿ, ಬಿಟಿ, ಯುನಿವರ್ಸಿಟಿ, ಶಿಕ್ಷಣ ಹಕ್ಕು ಎಲ್ಲವನ್ನೂ ಮಾಡಿರುವುದು ಮೋದಿ ಸರಕಾರ. ಮೋದಿ ಸರಕಾರದ ರೆಫೇಲ್ ಹಗರಣದ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಚೌಕೀದಾರ್ ಚೋರ್ ಹೇ ಎಂದು ನೇರವಾಗಿ ಹೇಳಿದ್ದಾರೆ. ನೀವು ಚೋರ್ ಅಲ್ಲದಿದ್ದರೆ ಸಿಬಿಐ ಅಧಿಕಾರಿಯನ್ನು ಯಾಕೆ ರಾತ್ರೋ ರಾತ್ರಿ ವರ್ಗಾವಣೆ ಮಾಡುತ್ತೀರಿ. ಕೋರ್ಟ್ ಅವರನ್ನು ಅಲ್ಲಿಗೇ ಕಳಿಸಿದ್ದರೆ ನೀವು ಮತ್ತೆ ಬೇರೆ ಕಡೆಗೆ ವರ್ಗಾವಣೆ ಮಾಡಿ, ಫೈಲ್ ಕಳೆದು ಹೋಗಿದೆ ಎಂಬ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಇದರ ಸತ್ಯಾಂಶ ಬೆಳಕಿಗೇ ಬಂದೇ ಬರುತ್ತದೆ ಎಂದು ಟೀಕಿಸಿದರು.

Body:ಬಿಜೆಪಿ ಸರಕಾರ ಬಂದರೆ ಬೆಲೆ ಇಳಿಸುತ್ತೇವೆ ಎಂದಿದ್ದರು. ಆದರೆ ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇದೆ. ಆದರೆ ಯಾವ ಪದಾರ್ಥಗಳ ಬೆಲೆ ಇಳಿಸಿದ್ದಾರೆ. ಕೇವಲ ರೂಪಾಯಿ ಬೆಲೆಯನ್ನು ಮಾತ್ರ ಇಳಿಸಿದ್ದಾರೆ. 62 ರೂ.ಗೆ ಡಾಲರ್ ಇತ್ತು. ಆದರೆ ಇಂದು 72 ರೂ.ಗೆ ಅದು ಏರಿಕೆಯಾಗಿದೆ. ಅಂದಾನಿಯವರ ಆಸ್ತಿ ಗಳು ಮಾತ್ರ ಏರಿಕೆಯಾಗಿದೆ. ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಳನ್ನು ಖಾಸಗೀಕರಣ ಮಾಡಿದ್ದಾರೆ ಎಂದು ಹ್ಯಾರೀಸ್ ಟೀಕಿಸಿದರು.

ಬಿಜೆಪಿಯವರು ಒಂದೇ ಒಂದು ಯೋಜನೆಗಳನ್ನು ತಾವು ತಂದಿದ್ದೇವೆ ಎಂದು ಹೇಳಲಿ. ರೈತರ ಸಾಲ ಮನ್ನಾ ಮಾಡಿ ಎಂದು ರಾಜ್ಯದ ಬಿಜೆಪಿಗರು ಕೂಗಾಡಿದರು. ನಮ್ಮ ಸರಕಾರ 75 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತು. ಆದರೆ ಕೇಂದ್ರ ಸರಕಾರ ಯಾವ ರೈತನ ಸಾಲವನ್ನು ಮನ್ನಾ ಮಾಡಿಲ್ಲ. ಹಿಂದೂ ಪರವಾಗಿ ಮಾತನಾಡುತ್ತಾರೆ. ಆದರೆ ಹಿಂದೂಗಳಿಗೂ ಇವರು ಏನೂ ಕೊಡಲಿಲ್ಲ. ಇವರು ಕೇವಲ ಅಧಿಕಾರಕ್ಕೋಸ್ಕರ ಏನೇನೋ ಆಮಿಷ ಒಡ್ಡುತ್ತಾರೆ. ನರೇಂದ್ರ ಮೋದಿಯವರಿಂದ ದೇಶದ ಜನರಿಗೆ ಏನೂ ಯೋಜನೆಗಳು ಲಭ್ಯವಾಗಿಲ್ಲ ಎಂದು ಎನ್.ಎ.ಹ್ಯಾರಿಸ್ ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.