ETV Bharat / state

ಪಾದರಕ್ಷೆ, ಬನಿಯಾನ್‌, ಗುದನಾಳದಲ್ಲೂ ಚಿನ್ನ..: 10 ದಿನ, ₹1.46 ಕೋಟಿಯ ಮಾಲು ವಶ - illegal shipment gold seized in mangalore airport

ಹತ್ತು ದಿನಗಳ ಅವಧಿಯಲ್ಲಿ 1.46 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

gold seized
ಅಕ್ರಮ ಚಿನ್ನ ಸಾಗಾಟ ಪತ್ತೆ
author img

By

Published : Nov 2, 2022, 7:57 AM IST

Updated : Nov 2, 2022, 8:44 AM IST

ಮಂಗಳೂರು: ಕಳೆದ ಹತ್ತು ದಿನಗಳ ಅವಧಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು 1.46 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಂಡು ಹಿಡಿದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ಟೋಬರ್ 22 ರಿಂದ 31 ರವರೆಗೆ ಆರು ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ದಾಖಲಿಸಿದ್ದಾರೆ. ದುಬೈನಿಂದ ಬಂದ ಆರು ಪ್ರಯಾಣಿಕರಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 2,870 ಗ್ರಾಂ ತೂಕದ ಚಿನ್ನ ದೊರೆತಿದೆ. ಇದರ ಮೌಲ್ಯ 1,46,87,410 ರೂ. ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 4.9 ಕೆ.ಜಿ ಚಿನ್ನ ಎಗರಿಸಿದ್ದ ಖಾಕಿ: ಖೆಡ್ಡಾಕ್ಕೆ ಬಿದ್ದ ಆರೋಪಿ, 14 ದಿನ ಸಿಐಡಿ ಕಸ್ಟಡಿ

ಪ್ರಯಾಣಿಕರು ಜೀನ್ಸ್ ಪ್ಯಾಂಟ್‌ನ ಸೊಂಟದ ಭಾಗ, ಪಾದರಕ್ಷೆ, ಬನಿಯನ್ ಮತ್ತು ಗುದನಾಳದಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಸಾಗಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆಯ ಪ್ರತ್ಯೇಕ ಪ್ರಕರಣ: 1.59 ಕೋಟಿ ಮೌಲ್ಯದ ಚಿನ್ನ ವಶ

Last Updated : Nov 2, 2022, 8:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.