ETV Bharat / state

ದೇಹದೊಳಗೆ ಬಚ್ಚಿಟ್ಟು ₹45 ಲಕ್ಷ ಮೌಲ್ಯದ ಚಿನ್ನ ಸಾಗಾಟ, ಮಂಗಳೂರಿನಲ್ಲಿ ಆರೋಪಿ ವಶಕ್ಕೆ - ಚಿನ್ನ ಸಾಗಾಟ ಆರೋಪಿ ವಶಕ್ಕೆ

ದೇಹದೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

Illegal gold seized at Mangaluru airport
ಚಿನ್ನ ಸಾಗಾಟ
author img

By

Published : Aug 23, 2022, 10:25 AM IST

ಮಂಗಳೂರು: ವ್ಯಕ್ತಿಯೊಬ್ಬ ದೇಹದೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಯಾಣಿಕನೊಬ್ಬ ಅಕ್ರಮದಲ್ಲಿ ಭಾಗಿಯಾಗಿದ್ದ.

ದುಬೈನಿಂದ ಸ್ಪೈಸ್ ಜೆಟ್​ ವಿಮಾನದಲ್ಲಿ ಬಂದಿಳಿದಿದ್ದ ಈತನನ್ನು ಅನುಮಾನದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಆರೋಪಿ ದೇಹದೊಳಗೆ ಚಿನ್ನವನ್ನು ಪುಡಿ ರೂಪದಲ್ಲಿ ಗಮ್ ರೂಪದ ಪರಿಕರದೊಳಗೆ ಅಡಗಿಸಿ ಸಾಗಾಟ ಮಾಡುತ್ತಿದ್ದನು. 24 ಕ್ಯಾರೆಟ್ 878 ಗ್ರಾಂ ತೂಕದ ಚಿನ್ನ ದೊರೆತಿದ್ದು, ಇದರ ಮೌಲ್ಯ ರೂ 45,83,160 ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ಮತ್ತು ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ: ಇಬ್ಬರು ಆರೋಪಿಗಳಿಂದ 90 ಲಕ್ಷ ಮೌಲ್ಯದ 1.7 ಕೆ.ಜಿ ಚಿನ್ನ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.