ETV Bharat / state

ಅಕ್ರಮ ಗೋವು ಸಾಗಾಟ ತಡೆದ ಪೊಲೀಸರ ಮೇಲೆ ಪಿಕಪ್​ ಹತ್ತಿಸಲು ಯತ್ನ - Illegal cow transport in sullia

ಅಕ್ರಮವಾಗಿ ಪಿಕಪ್ ವಾಹನದಲ್ಲಿ ಗೋವು ಸಾಗಾಟ ಮಾಡುತ್ತಿರುವುನ್ನು ತಡೆಯಲು ಮುಂದಾದ ಪೊಲೀಸರ ಮೇಲೆಯೇ ವಾಹನ ಹತ್ತಿಸಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.

illegal-cow-transport-in-sullia
ಅಕ್ರಮ ಗೋವು ಸಾಗಾಟ
author img

By

Published : Jul 17, 2020, 4:10 AM IST

Updated : Jul 18, 2020, 2:57 AM IST

ಸುಳ್ಯ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿರುವುನ್ನು ತಡೆಯಲು ಮುಂದಾದ ಪೊಲೀಸರ ಮೇಲೆಯೇ ವಾಹನ ಹತ್ತಿಸಿ ಪರಾರಿಯಾಗಲು ಯತ್ನಿಸಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ ನಡೆದಿದೆ.

ಈ ಸಂಬಂಧ ಪೊಲೀಸರು ಪಿಕಪ್ ಚಾಲಕ ಕೊಡಗು ಜಿಲ್ಲೆಯ ಅಬ್ದುಲ್ ಫಾರೂಕ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಯದ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ ಪಿಕಪ್ ವಾಹನದಲ್ಲಿ (KA 12B 5345) ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಯೊಂದಿಗೆ ವಾಹನ ತಡೆಯಲು ಯತ್ನಿಸಿದಾಗ ಪಿಕಪ್ ಚಾಲಕ ಪೊಲೀಸರ ಮೇಲೆ ವಾಹನ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಬಳಿಕ ಪೊಲೀಸರು ಬೆನ್ನಟ್ಟಿದ್ದು, ಆಗ ಪಿಕಪ್ ವಾಹನವನ್ನು ಇನ್ನೋರ್ವ ಆರೋಪಿ ಡಯಾನಾ ಎಂಬಾತನ ಮನೆಯ ಪಕ್ಕದಲ್ಲಿ ಮನೆಯೊಳಗೆ ಅಡಗಿಕೊಂಡಿದ್ದ. ಅಲ್ಲಿಂದ ಪೊಲೀಸರು ಆರೋಪಿ ಅಬ್ದುಲ್ ಫಾರೂಕ್​ನನ್ನು ಬಂಧಿಸಿ ಆತನಲ್ಲಿದ್ದ ತಲವಾರು ಹಾಗೂ ಇತರೆ ಸ್ವತ್ತು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Last Updated : Jul 18, 2020, 2:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.