ಬೆಳ್ತಂಗಡಿ (ದಕ್ಷಿಣ ಕನ್ನಡ) : ತಾಲೂಕಿನ ಸೂರ್ಯ ಪಡ್ಪುವಿನ ಗೋ ವ್ಯಾಪಾರಿ ಆಟೋ ಚಾಲಕ ರಾಜೇಶ್, ಆತನ ಮನೆಯಿಂದ ಪಿಕಪ್ ವಾಹನದಲ್ಲಿ ನಾಲ್ಕು ದನ, ಎರಡು ಕರುಗಳನ್ನು ಅಮಾನುಷವಾಗಿ ಕಟ್ಟಿ ಹಾಕಿ ಸಾಗಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ರಾಜೇಶ್ ಮತ್ತು ಆತನ ಸಹಚರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದೇ ವೇಳೆ, ಅವರದ್ದೇ ಮತ್ತೊಂದು ತಂಡ ಕೋವಿಡ್ ತುರ್ತು ಸೇವೆಗಳ ಪಾಸ್ ಪಡೆದು ಪಿಕಪ್ ವಾಹನದಲ್ಲಿ ಗೋ ಸಾಗಣೆ ಮಾಡುತ್ತಿರುವ ಬಗ್ಗೆ ತಿಳಿದ ಬಜರಂಗದಳದ ಕಾರ್ಯಕರ್ತರು, ಅವರನ್ನು ಹಿಡಿಲು ಗುರುವಾಯನಕೆರೆಗೆ ಹೋಗಿದ್ದರು. ಈ ವೇಳೆ, ಗೋ ಸಾಗಣೆ ಮಾಡುತ್ತಿದ್ದವರು. ಬಜರಂಗದಳದ ಕಾರ್ಯಕರ್ತರಿಗೆ ಮಾರಣಾಂತಿಕ ಹಲ್ಲೆ ಮಾಡಿ, ಎರಡು ಮೊಬೈಲ್ ನಗದು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಬಜರಂಗದಳದ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಿಕಪ್ ವಾಹನ ಮಂಗಳೂರಿನ ಕರೀಂ ಎಂಬುವವರಿಗೆ ಸೇರಿದ್ದು ಎನ್ನಲಾಗಿದ್ದು, ಅಗತ್ಯ ಸೇವೆಗಳ ಪಾಸ್ ಪಡೆದು ಅಕ್ರಮ ಗೋ ಸಾಗಣೆ ಮಾಡುವ ಮೂಲಕ ಪಾಸ್ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.