ETV Bharat / state

ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ: ಸ್ವಾಮೀಜಿಗಳ ಧರ್ಮಸಭೆಯಲ್ಲಿ ನಿರ್ಧಾರ - ಚಿಲಬಿ ಓಂ ಶ್ರೀ ಮಠ

ಮಂಗಳೂರಿನಲ್ಲಿ ಧರ್ಮಸಭೆ: ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಕೈಬಿಡಬೇಕೆಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

Swamiji's Dharma Sabha held in Mangalore
ಮಂಗಳೂರಿನಲ್ಲಿ ನಡೆದ ಸ್ವಾಮೀಜಿಗಳ ಧರ್ಮಸಭೆ
author img

By

Published : Jun 30, 2023, 7:34 PM IST

Updated : Jun 30, 2023, 8:06 PM IST

ಮಂಗಳೂರು: ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈಬಿಡದಿದ್ದರೆ ಸಂತರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಮಂಗಳೂರಿನಲ್ಲಿ ನಡೆದ ಸ್ವಾಮೀಜಿಗಳ ಧರ್ಮಸಭೆಯಲ್ಲಿ ‌ನಿರ್ಧರಿಸಲಾಗಿದೆ. ಬಾಳಂಭಟ್ ಸಭಾಂಗಣದಲ್ಲಿ ನಡೆದ ಧರ್ಮಸಭೆಯಲ್ಲಿ ಕರಾವಳಿಯ ಸಂತ ಸಮೂಹದಿಂದ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆ ವಾಪಸ್​ ನಿರ್ಧಾರ ಕೈಬಿಡುವಂತೆ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಮಠದ ಮೋಹನದಾಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲ ಸ್ವಾಮೀಜಿ ಸೇರಿ, ಚಿಲಬಿ ಓಂಶ್ರೀ ಮಠ, ಚಿತ್ರಾಪುರ ಮಠದ ಸ್ವಾಮೀಜಿ, ಕೊಂಡೆವೂರು ಮಠದ ಸ್ವಾಮೀಜಿ ಸೇರಿದಂತೆ ಹಲವು ಸಂತರು ಹಾಗೂ ವಿಎಚ್‌ಪಿ, ಭಜರಂಗದಳ ಹಾಗೂ ಆರ್‌ಎಸ್‌ಎಸ್ ಪ್ರಮುಖರು ಭಾಗಿಯಾಗಿದ್ದರು. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಭೆ ನಡೆಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, "ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು ಎಂದು ಸರಕಾರಕ್ಕೆ ಮನವಿ ಮಾಡಲು ನಿರ್ಧಾರ ಮಾಡಲಾಗಿದೆ. ವಾಪಸ್ ಪಡೆದರೆ ಸಮಾಜದಲ್ಲಿ ಸಂಘರ್ಷ ಆಗಬಹುದು. ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ರದ್ದತಿ ನಿರ್ಧಾರ ಖಂಡನೀಯ. ಗೋಹತ್ಯೆ‌ ನಿಷೇಧ ರದ್ದು ಮಾಡಿದ್ರೆ ಗೋ ಸಂತತಿ ನಾಶವಾಗಲಿದೆ" ಎಂದು ಎಚ್ಚರಿಸಿದರು.

"ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಣಯ ಹಿಂದೂ ವಿರೋಧಿಯಾಗಿದ್ದು, ಇದರ ವಿರುದ್ದ ಹೋರಾಟಕ್ಕೆ ಸಿದ್ದ. ನಿರ್ಧಾರ ವಾಪಸ್ ಪಡೆಯದೇ ಇದ್ದರೆ ಸಂತರಿಂದ ಹೋರಾಟದ ನಿರ್ಧಾರ ಮಾಡಲಾಗಿದೆ. ಅದಕ್ಕೂ ಒಪ್ಪದೇ ಇದ್ದರೆ ಸಂತ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಕಾಯ್ದೆ ವಾಪಸ್ ಪಡೆಯಲ್ಲ ಎಂಬ ವಿಶ್ವಾಸವಿದೆ, ಇಲ್ಲದೇ ಇದ್ರೆ ಉಪವಾಸ ನಿಶ್ಚಿತ" ಎಂದು ಸ್ಪಷ್ಟಪಡಿಸಿದರು.

"ಸಂತರು ಉಪವಾಸ ಕೂತರೇ ಹಿಂದೂ ಸಮಾಜ ಎದ್ದೇಳಲಿದೆ. ಸರ್ಕಾರ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ನಿರ್ಧಾರ ವಾಪಸ್ ಪಡೆಯಲಿ. ರಾಜ್ಯದ ಶಾಂತಿ ಐಕ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆ್ಯಂಟಿ ಕಮ್ಯೂನಲ್ ವಿಂಗ್ ಮೂಲಕ ಹಿಂದೂ ಯುವಕರ ಹತ್ತಿಕ್ಕೋ ಪ್ರಯತ್ನ ನಡೀತಾ ಇದೆ. ಹಿಂದೂ ಯುವಕರನ್ನು ಗಡಿಪಾರು ಮಾಡುವ ಕೆಲಸಗಳು ನಡೀತಿವೆ. ಹೀಗಾಗಿ ನಮ್ಮ ಸಂತ ಸಮುದಾಯ ತೀವ್ರ ಹೋರಾಟದ ನಿರ್ಣಯಕ್ಕೆ ಬಂದಿದೆ. ಸೆಪ್ಟಂಬರ್ ಹತ್ತರ ನಂತರ ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಕೆ ಮಾಡಲಾಗುವುದು. ಆ ಬಳಿಕ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿ ಭೇಟಿಗೂ ನಿರ್ಧಾರ ಮಾಡಲಾಗಿದೆ" ಎಂದರು.

ಇದನ್ನೂಓದಿ: 12 ವರ್ಷಗಳ ನಂತರ ಗೋಚರಿಸಿದ ಪುರಾತನ ದೇವಾಲಯ.. ಆಷಾಢ ಏಕಾದಶಿ ದಿನವೇ ವಿಠ್ಠಲನ ದರ್ಶನ ಪಡೆದ ಭಕ್ತರು!

Last Updated : Jun 30, 2023, 8:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.