ETV Bharat / state

ನಾನಾಗಿಯೇ ಸಚಿವ ಸ್ಥಾನ ಕೇಳಲು ಹೋಗಲ್ಲ; ಬಸನಗೌಡ ಪಾಟೀಲ್​​ ಯತ್ನಾಳ್

author img

By

Published : Sep 29, 2020, 9:59 PM IST

Updated : Sep 29, 2020, 11:43 PM IST

ಕೋವಿಡ್‌ನಿಂದ ಗುಣಮುಖರಾದ ಹಿನ್ನೆಲೆ ಪ್ರಸಿದ್ಧ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್, ಸಚಿವ ಸ್ಥಾನದ ಬಗ್ಗೆ ಮಾತಾಡಿದರು..

I do not ask ministerial position: Basangouda Patil Yatnal
ಬಸನಗೌಡ ಪಾಟೀಲ್​​ ಯತ್ನಾಳ್​ ಹಾಗೂ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ಬಂಟ್ವಾಳ : ಹಿಂದೆ ವಾಜಪೇಯಿ ಅವರ ಸರ್ಕಾರವಿದ್ದಾಗ ಪಕ್ಷವೇ ತನ್ನನ್ನು ಕರೆದು ಸಚಿವ ಸ್ಥಾನ ನೀಡಿತ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಹೇಳಿದ್ದಾರೆ. ತಾವಾಗಿಯೇ ಸಚಿವ ಸ್ಥಾನ ಕೇಳಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುಬ್ರಹ್ಮಣ್ಯ ಮತ್ತು ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನನಗೆ ಕೋವಿಡ್ ಬಂದಾಗ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೆ. ಅದರಂತೆ ದೇವರ ದರ್ಶನ ಪಡೆದಿದ್ದೇನೆ. ಬೆಳಗ್ಗೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ಮಧ್ಯಾಹ್ನ ಪೊಳಲಿಯಲ್ಲಿ ಪೂಜೆ ನೆರವೇರಿಸಿ ಹಿಂತಿರುಗಿದ್ದೇನೆ.

ನಾನು ಯಾವುದೇ ರೀತಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಿಂದೆ ಕೇಂದ್ರದಲ್ಲಿ ವಾಜಪೇಯಿ ಸರ್ಕಾರದಲ್ಲೂ ಕೇಳದಿದ್ರೂ ಪಕ್ಷವೇ ಕರೆದು ಸಚಿವ ಸ್ಥಾನ ನೀಡಿತ್ತು ಎಂದು ತಮ್ಮೊಳಗಿದ್ದ ಆಸೆ ಹೊರ ಹಾಕಿದರು. ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಯತ್ನಾಳ್ ಅವರನ್ನು ಗೌರವಿಸಿದರು.

Last Updated : Sep 29, 2020, 11:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.