ETV Bharat / state

ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತಿಷ್ಠಾವರ್ಧಂತಿ - ಅನ್ನಪೂರ್ಣ ಹವನ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 13ಕ್ಕೆ ಪ್ರತಿಷ್ಠಾ ವರ್ಧಂತಿ ಉತ್ಸವ, ಅನ್ನಪೂರ್ಣ ಹವನವು ಧಾರ್ಮಿಕತೆಗೆ ಅಡ್ಡಿಯಾಗದಂತೆ ಸೀಮಿತ ಅರ್ಚಕ, ಪರಿಚಾರಕ ಮತ್ತು ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ನಡೆದಿದೆ.

ಶ್ರೀ ಮಹಾಲಿಂಗೇಶ್ವರ
ಶ್ರೀ ಮಹಾಲಿಂಗೇಶ್ವರ
author img

By

Published : May 13, 2021, 7:59 PM IST

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 13ಕ್ಕೆ ಪ್ರತಿಷ್ಠಾ ವರ್ಧಂತಿ ಉತ್ಸವ, ಅನ್ನಪೂರ್ಣ ಹವನವು ಧಾರ್ಮಿಕತೆಗೆ ಅಡ್ಡಿಯಾಗದಂತೆ ಸೀಮಿತ ಅರ್ಚಕ, ಪರಿಚಾರಕ ಮತ್ತು ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ನಡೆದಿದೆ.

ಬೆಳಿಗ್ಗೆ ನಡೆದ ಅನ್ನಪೂರ್ಣ ಹವನಕ್ಕೆ ಸಂಬಂಧಿಸಿ ಸೀಮೆಯ ಭಕ್ತರ ಮನೆಯಲ್ಲೇ ಅನ್ನಪೂರ್ಣೆಗೆ ಬೊಗಸೆ ಅಕ್ಕಿಯ ನೈವೇದ್ಯ ಸಮರ್ಪಣೆ ನಡೆಯಿತು. ಪೂರ್ವ ಸಂಕಲ್ಪದಂತೆ ಅನ್ನಪೂರ್ಣ ಮಹಾಸತ್ರ ನಡೆಯಬೇಕಾಗಿತ್ತು. ಪ್ರತಿ ಮನೆಗಳಿಂದ ಭಕ್ತರು ಬೊಗಸೆ ಅಕ್ಕಿಯನ್ನು ತಂದು ಬಳಿಕ ದೇವಳದಲ್ಲಿ ಸಮರ್ಪಿಸಿ ದೇವರಿಗೆ ನೈವೇದ್ಯ ಮಾಡುವಂತಹ ಸಂಕಲ್ಪವನ್ನು ದೇವಳದ ಆಡಳಿತ ಮಂಡಳಿ ಮತ್ತು ಅರ್ಚಕವೃಂದ ಕೈಗೊಂಡಿತ್ತು. ಅನಿವಾರ್ಯ ಕಾರ್ಯದಿಂದ ಅದು ಆಗದಿರುವ ಸಂದರ್ಭದಲ್ಲಿ ಅನ್ನಪೂರ್ಣ ಹವನ ನಡೆದಿದೆ.

ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತಿಷ್ಠಾವರ್ಧಂತಿ-ಅನ್ನಪೂರ್ಣ ಹವನ

ದೇವಳದ ಅನ್ನಪೂರ್ಣ ಛತ್ರ ಅತ್ಯಂತ ಸುಂದರವಾಗಿ ಮೂಡಿ ಬರಲೆಂದು ಪ್ರಾರ್ಥನೆ ಮಾಡುವ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ವಿನಂತಿಸಿದ್ದಂತೆ. ಸೀಮೆಯ ಭಕ್ತರು ತಮ್ಮ ತಮ್ಮ ಮನೆಗಳಲ್ಲೂ ಬೊಗಸೆ ಅಕ್ಕಿಯನ್ನು ಪಾಯಸ ಮಾಡಿದರು. ಬಳಿಕ 11 ಗಂಟೆಗೆ ದೇವರ ಮಂಟಪದಲ್ಲಿ ಇಟ್ಟು, ಸಂಕಲ್ಪ ಮಾಡಿ ಸಮರ್ಪಣೆ ಮಾಡಿದ ಅಕ್ಕಿ ಪಾಯಸವನ್ನು ಮಧ್ಯಾಹ್ನ 12 ಗಂಟೆಯ ನಂತರ ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.