ETV Bharat / state

ದ.ಕ. ಜಿಲ್ಲೆಯಾದ್ಯಂತ 24 ಗಂಟೆಗಳಲ್ಲಿ 73 ಮಿ.ಮೀ. ಮಳೆ

ಜಿಲ್ಲೆಯಾದ್ಯಂತ 39 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 873 ಮನೆಗಳು ಭಾಗಶಃ ಹಾನಿಯಾಗಿವೆ. ಅಪಾಯದಲ್ಲಿರುವವರ ರಕ್ಷಣೆಗಾಗಿ ಈಗಾಗಲೇ ಎನ್​​ಡಿಆರ್​ಎಫ್​​, ಎಸ್​ಡಿಆರ್​ಎಫ್ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.

ದ.ಕ. ಜಿಲ್ಲೆಯಾದ್ಯಂತ 24 ಗಂಟೆಗಳಲ್ಲಿ 73 ಮಿ.ಮೀ. ಮಳೆ
ದ.ಕ. ಜಿಲ್ಲೆಯಾದ್ಯಂತ 24 ಗಂಟೆಗಳಲ್ಲಿ 73 ಮಿ.ಮೀ. ಮಳೆ
author img

By

Published : Aug 10, 2020, 10:57 PM IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.‌ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ 73 ಮಿ.ಮೀ. ಮಳೆ ಸುರಿದಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ವಿವಿಧೆಡೆ ಸರ್ವ ವ್ಯವಸ್ಥೆಗಳನ್ನೊಳಗೊಂಡ 7 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ದ.ಕ. ಜಿಲ್ಲೆಯಾದ್ಯಂತ ಇಂದು ಇಡೀ ದಿನ ನಿರಂತರವಾಗಿ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ ಬೆಳ್ತಂಗಡಿಯಲ್ಲಿ‌ 61 ಮಿ.ಮೀ ಮಳೆ ಸುರಿದಿದ್ದು, ಬಂಟ್ವಾಳದಲ್ಲಿ 88 ಮಿ.ಮೀ ಮಳೆ ಸುರಿದಿದೆ. ಮಂಗಳೂರಿನಲ್ಲಿ 88 ಮಿ.ಮೀ, ಪುತ್ತೂರಿನಲ್ಲಿ 78 ಮಿ.ಮೀ, ಸುಳ್ಯದಲ್ಲಿ 69 ಮಿ.ಮೀ, ಮೂಡುಬಿದಿರೆಯಲ್ಲಿ 95 ಮಿ.ಮೀ, ಕಡಬದಲ್ಲಿ 62 ಮಿ.ಮೀ ಮಳೆಯಾಗಿದೆ. ನೇತ್ರಾವತಿ ನದಿಯ ಬಂಟ್ವಾಳದಲ್ಲಿ ಈಗಿನ ನೀರಿನ ಮಟ್ಟ 5.9 ಮೀಟರ್‌ ಆಗಿದ್ದು, ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಈಗಿನ ನೀರಿನ ಮಟ್ಟ 27.1 ಮೀಟರ್‌ ಆಗಿದ್ದು ಅಪಾಯದ ಮಟ್ಟ 31.5 ಮೀಟರ್ ಆಗಿದೆ. ಕುಮಾರಧಾರ ನದಿಯ ಈಗಿನ ನೀರಿನ ಮಟ್ಟ 22.0 ಮೀಟರ್‌ ಆಗಿದ್ದು ಅಪಾಯದ ಮಟ್ಟ 26.5 ಮೀಟರ್ ಆಗಿದೆ. ಗುಂಡ್ಯ ನದಿಯ ಈಗಿನ ನೀರಿನ ಮಟ್ಟ 4.0 ಮೀಟರ್‌ ಆಗಿದ್ದು ಅಪಾಯದ ಮಟ್ಟ 5.0 ಮೀಟರ್ ಆಗಿದೆ.

ಏಪ್ರಿಲ್‌ 1 ರಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಗೆ ನಾಲ್ಕು‌ ಜನ ಬಲಿಯಾಗಿದ್ದಾರೆ. ಓರ್ವನಿಗೆ ಗಾಯವಾಗಿದ್ದು, ಎರಡು ಜಾನುವಾರುಗಳು ಮೃತಪಟ್ಟಿವೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ 230 ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಅದಕ್ಕಾಗಿ 7 ಕಾಳಜಿ ಕೇಂದ್ರಗಳನ್ನು ‌ತೆರೆಯಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ 39 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 873 ಮನೆಗಳು ಭಾಗಶಃ ಹಾನಿಯಾಗಿದೆ. ಅಪಾಯದಲ್ಲಿರುವವರ ರಕ್ಷಣೆಗಾಗಿ ಈಗಾಗಲೇ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.