ETV Bharat / state

ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಂದ ಸಚಿವರಿಗೆ ಮನವಿ - Beltangadi latest news

ಬೆಳ್ತಂಗಡಿ ತಾಲೂಕಿನ ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನಿಯೋಗ ಇಂದು ಸಚಿವ ಸೋಮಶೇಖರ ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿತು

Committee
Committee
author img

By

Published : Oct 3, 2020, 9:27 PM IST

ಬೆಳ್ತಂಗಡಿ : ತಾಲೂಕು ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನಿಯೋಗವು ಇಂದು ಧರ್ಮಸ್ಥಳದಲ್ಲಿ ರಾಜ್ಯ ಸಹಕಾರ ಸಚಿವ ಸೋಮಶೇಖರ ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿತು.

ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರ ಸಮ್ಮುಖದಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ಸಚಿವರಿಗೆ ಬೇಡಿಕೆಯುಳ್ಳ ಮನವಿಯನ್ನು ಸಲ್ಲಿಸಿ, ಸರ್ಕಾರದ ಗಮನ ಸೆಳೆಯುವಂತೆ ಸಚಿವರಲ್ಲಿ‌ ಮನವಿ ಮಾಡಿದರು.

ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ಸದನದಲ್ಲಿ ಚರ್ಚಿಸಿದ್ದು, ನಾಲ್ಕೈದು ದಿನದಲ್ಲಿ ಪರಿಹಾರ ದೊರಕಲಿದೆ ಎಂದು ಭರವಸೆ ನೀಡಿದರು.

ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷರಾದ ಡಾ.ಸುಮನ ನಂದ ಕುಮಾರ್, ಸಂಚಾಲಕರಾದ ಅಜಯ್ ಕಲ್ಲೇಗ, ಹರಿಣಿ ಬಿ.ಜಿ., ಜತೆ ಕಾರ್ಯದರ್ಶಿ ಮಾಹಂತೇಶ್, ಸದಸ್ಯರಾದ ಸೀತಾಲಕ್ಷ್ಮೀ, ಉಮೇಶ್, ಸೌಮ್ಯ, ಪ್ಲೋಸಿ ಲೋಬೋ, ಜಯಶ್ರೀ, ಭಾರತಿ, ಸುಲೋಚನ, ವಸಂತಿ, ಚೈತ್ರಾ, ಚಿನ್ನಮ್ಮ, ಗೀತಾ, ರಕ್ಷಾ , ಬಾಬು ಮೊದಲಾದವರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.