ETV Bharat / state

ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ಮಾಡುವವರನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ: ಹರೀಶ್ ಪೂಂಜ - ಪಾದರಾಯನಪುರ ಘಟನೆಯ ಬಗ್ಗೆ ಆಕ್ರೋಶ

ನಮಗಾಗಿ ಕೆಲಸ ಮಾಡುವಂತಹ ತ್ಯಾಗಮಯಿಗಳ ಮೇಲೆ ದಾಳಿ ಮಾಡುವವರು ಯಾರೇ ಆಗಲಿ ಅವನನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

harish poonja
harish poonja
author img

By

Published : Apr 20, 2020, 8:19 AM IST

Updated : Apr 20, 2020, 9:47 AM IST

ಬೆಳ್ತಂಗಡಿ: ಕೈ ಮುಗಿದು ಮನವಿ ಮಾಡಿದರೂ ಬಗ್ಗದವರಿಗೆ ಕೈ ಎತ್ತಿ ಅರಿವು ಮೂಡಿಸಬೇಕಾದ ಕಾಲ ಇದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ವೈದ್ಯಕೀಯ ಸಿಬ್ಬಂದಿ ತಮ್ಮ ಬದುಕನ್ನು ಪಣಕ್ಕೆ ಇಟ್ಟು ಹೋರಾಡುತ್ತಿದ್ದಾರೆ. ಅವರ ಈ ಹೋರಾಟ ರಾಜ್ಯದ ಜನತೆಯ ಆರೋಗ್ಯವನ್ನು ಕಾಯುವುದಕ್ಕಾಗಿ ಹಾಗೂ ನಮ್ಮೆಲ್ಲರ ಆರೋಗ್ಯದ ರಕ್ಷಣೆಗಾಗಿ. ತಮ್ಮ ಕುಟುಂಬಗಳನ್ನು ದೂರ ಇಟ್ಟು ನಮಗಾಗಿ ಕೆಲಸ ಮಾಡುವಂತಹ ತ್ಯಾಗಮಯಿಗಳ ಮೇಲೆ ದಾಳಿ ಮಾಡುವವ ಯಾರೇ ಆಗಲಿ ಅವನನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ ಎಂದು ಅವರು ಹೇಳಿದರು.

ಕಾರ್ಯಸಿದ್ಧಿಗಾಗಿ ರಾಜ ಅನುಸರಿಸಬೇಕಾದ ನಾಲ್ಕು ಉಪಾಯಗಳೆಂದರೆ ಸಾಮ, ದಾನ, ಭೇದ ಮತ್ತು ದಂಡ. ಮೊದಲ ಮೂರು ಉಪಾಯಗಳು ಈ ಕ್ರೂರಿಗಳ ಮೇಲೆ ಕೆಲಸ ಮಾಡುತ್ತಿಲ್ಲ, ಈಗ ನಾಲ್ಕನೇಯ ಉಪಾಯ ಮಾತ್ರ ಉಳಿದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆಂಗಳೂರಿನ ಪಾದರಾಯನಪುರ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Last Updated : Apr 20, 2020, 9:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.