ETV Bharat / state

2 ಸಾವಿರ ರೂ.ಗೆ ಮರಳು ಕೊಡ್ತಾರೆ ಎಂಬ ಕಟೀಲ್ ಹೇಳಿಕೆ ಹಾಸ್ಯಾಸ್ಪದ : ಹರೀಶ್ ಕುಮಾರ್

ಲೋಡ್, ಅನ್ಲೋಡ್, ಲಾರಿ ಬಾಡಿಗೆ ಎಂದು ಕನಿಷ್ಠ 6,500-10,000 ವರೆಗೂ ಹಣ ಖರ್ಚಾಗುತ್ತದೆ. ಆದ್ದರಿಂದ ನಳಿನ್ ಕುಮಾರ್ ಕಟೀಲ್​ ತಾವು ಹೇಳಿದಂತೆ ಮುಂದಿನ ದಿನಗಳಲ್ಲಿ ಹೊಸ ಮರಳು ನೀತಿಯ ಮೂಲಕ‌ ಕೇವಲ 2 ಸಾವಿರ ರೂ.ಗೆ ಮರಳು ಸರಬರಾಜು ಮಾಡಲಿ ಎಂದು ಸವಾಲೆಸೆದರು..

Harish Kumar Reaction About Nalin Kumar Kateel Statement
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್
author img

By

Published : Sep 19, 2020, 4:11 PM IST

Updated : Sep 19, 2020, 5:18 PM IST

ಮಂಗಳೂರು : ಸಾಮಾನ್ಯ ಪಂಚಾಯತ್ ಸದಸ್ಯನಿಗೂ ಇರುವಂತಹ ಕನಿಷ್ಠ ಜ್ಞಾನವಿಲ್ಲದ ಸಂಸದ ನಳಿನ್​ ಕುಮಾರ್ ಕಟೀಲ್​ 2 ಸಾವಿರ ರೂ.ಗೆ ಮರಳು ಕೊಡಲಾಗುತ್ತದೆ ಎಂದು ಹೇಳಿರೋದು ಹಾಸ್ಯಾಸ್ಪದ ಎಂದು‌ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 2 ಸಾವಿರ ರೂ.ಗೆ ಜಿಲ್ಲೆಯ ಜನತೆಗೆ ಮರಳು ದೊರಕಿದರೆ ನಮಗೂ ಸಂತೋಷ. ಆದರೆ, ಈ ಹಿಂದೆ ಕೇರಳದಲ್ಲಿ ಅವರು ಮೋದಿ ಸರ್ಕಾರ ಬಂದಲ್ಲಿ ಒಂದು ಡಾಲರ್ ಬೆಲೆ 15 ರೂ. ಆಗಲಿದೆ ಎಂದಿದ್ದರು. ಕೇಂದ್ರದಲ್ಲಿ, ರಾಜ್ಯದಲ್ಲಿ, ಮಂಗಳೂರು ಪಾಲಿಕೆಯಲ್ಲಿಯೂ ಬಿಜೆಪಿ ಸರ್ಕಾರವಿದೆ. ಆದರೆ, ಅವರು ಹೇಳಿದಂತೆ ಡಾಲರ್​ ಬೆಲೆ ಕುಸಿಯಲೇ ಇಲ್ಲ ಎಂದು ಕಾಲೆಳೆದರು.

ಬರಿಯ ಸಣ್ಣ ತೊರೆಯಿಂದ ಮರಳು ತೆಗೆಯಬೇಕಾದರೂ‌ ಸರ್ಕಾರ ಟನ್​ಗೆ 350 ರೂ. ದರ ನಿಗದಿ ಮಾಡಿದೆ. ಹೊಳೆಯಲ್ಲಿ ಮರಳು ತೆಗೆಯಬೇಕಾದರೆ 700 ರೂ. ದರ ನಿಗದಿ ಮಾಡಿದೆ. ಒಂದು ಲೋಡ್ ಅಂದರೆ ಕನಿಷ್ಠ 3,500 ರೂ. ಸರ್ಕಾರದ ದರ ಆಗುತ್ತದೆ. ಲೋಡ್, ಅನ್ಲೋಡ್, ಲಾರಿ ಬಾಡಿಗೆ ಎಂದು ಕನಿಷ್ಠ 6,500-10,000 ವರೆಗೂ ಹಣ ಖರ್ಚಾಗುತ್ತದೆ. ಆದ್ದರಿಂದ ನಳಿನ್ ಕುಮಾರ್ ಕಟೀಲ್​ ತಾವು ಹೇಳಿದಂತೆ ಮುಂದಿನ ದಿನಗಳಲ್ಲಿ ಹೊಸ ಮರಳು ನೀತಿಯ ಮೂಲಕ‌ ಕೇವಲ 2 ಸಾವಿರ ರೂ.ಗೆ ಮರಳು ಸರಬರಾಜು ಮಾಡಲಿ ಎಂದು ಸವಾಲೆಸೆದರು.

ಜಿಲ್ಲೆಯ ಜನಪ್ರತಿನಿಧಿಗಳ ಮೂಗಿನ ನೇರದಲ್ಲಿಯೇ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ. ಮೂಡುಬಿದಿರೆ, ಮಂಗಳೂರು, ಬೆಳ್ತಂಗಡಿಗಳಲ್ಲಿ ಯಾರ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಲಿ. ಈ ಬಾರಿ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಡ್ರೆಜ್ಜಿಂಗ್ ಮೂಲಕ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇರುವಾಗ ತುಂಬೆ ವೆಂಟೆಡ್ ಡ್ಯಾಮ್​ನಲ್ಲಿ ಡ್ರೆಜ್ಜಿಂಗ್ ಮೂಲಕ ಮರಳು ತೆಗೆಯಲು ಅನುಮತಿ ನೀಡಿತ್ತು. ಆದರೆ, ಖಾಸಗಿಯವರಿಗೆ ಡ್ರೆಜ್ಜಿಂಗ್ ಮೂಲಕ, ಜೆಸಿಬಿ ಮೂಲಕ ಮರಳು ತೆಗೆಯಲು ಅನುಮತಿ ಇಲ್ಲ.‌ ಇದೀಗ ಜಿಲ್ಲೆಯಾದ್ಯಂತ ಡ್ರೆಜ್ಜಿಂಗ್ ಮೂಲಕವೇ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್

ಈಗಿನ ಹೊಸ ಮರಳು ನೀತಿಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ಸಿಆರ್​ಝಡ್​ ಮೂಲಕವೂ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಬೇಕು. ಸರ್ಕಾರ ಬಿಜೆಪಿಯೇ ನಡೆಸುತ್ತಿದ್ದರೂ, ಮರಳುಗಾರಿಕೆ ದಂಧೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಹಿಂದೆ ನಮ್ಮ ಪಕ್ಷದ ರಮಾನಾಥ ರೈ, ಯು.ಟಿ.ಖಾದರ್ ಅವರು ಉಸ್ತುವಾರಿ ಸಚಿವರಾಗಿದ್ದಾಗಲೂ ಮರಳಿನ ಸಮಸ್ಯೆ ಇತ್ತು. ಆದರೆ, ಮರಳು ಮಾಫಿಯಾ ಯಾವಾಗ ಪ್ರಾರಂಭ ಆಯಿತು ಅನ್ನೋದನ್ನು ಬಿಜೆಪಿಗರು ತಿಳಿದುಕೊಳ್ಳಲಿ. ಜನರಿಗೆ 4-5 ಸಾವಿರ ರೂ.ಗೆ ಸುಲಭವಾಗಿ ದೊರಕುತ್ತಿದ್ದ ಮರಳು ಕೇರಳ ರಾಜ್ಯಕ್ಕೆ ಯಾವಾಗ ರಾತ್ರಿ ಹೊತ್ತು ಹಾಗೂ ರೈಲು ಮೂಲಕ ಸಾಗಾಟವಾಗಲು ಪ್ರಾರಂಭವಾಯಿತು. ಅಕ್ರಮ ಮರಳು ದಂಧೆ ಯಾವಾಗ ಪ್ರಾರಂಭವಾಯಿತು ಅನ್ನೋದನ್ನು ಸಂಸದ ನಳಿನ್ ಕುಮಾರ್ ಸ್ಪಷ್ಟೀಕರಣ ನೀಡಲಿ‌ ಎಂದು ಹರೀಶ್ ಕುಮಾರ್ ಹೇಳಿದರು.

Last Updated : Sep 19, 2020, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.