ಮಂಗಳೂರು: ಸರ್ಕಾರದ ಹಜ್ ಸಮಿತಿಯ ವತಿಯಿಂದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತೆರಳಿದ್ದ ಹಜ್ ಯಾತ್ರಿಕರಲ್ಲಿ 300 ಹಜ್ ಯಾತ್ರಿಕರು ತಾಯ್ನಾಡಿಗೆ ಆಗಮಿಸಿದ್ದಾರೆ.
ಜಿದ್ದಾದಿಂದ ಹೊರಟ ಏರ್ ಇಂಡಿಯಾ ವಿಮಾನವು ಮಧ್ಯಾಹ್ನ 1.54ಕ್ಕೆ ಹಾಗೂ ದ್ವಿತೀಯ ವಿಮಾನವು ಸಂಜೆ 5.50ಕ್ಕೆ ಮಂಗಳೂರು ತಲುಪಿತು. ಎರಡೂ ವಿಮಾನಗಳಲ್ಲಿ ತಲಾ 150 ಪ್ರಯಾಣಿಕರಿದ್ದರು.
ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ಏರ್ ಇಂಡಿಯಾದ ಅರುಣ್ ಹಜ್ ಯಾತ್ರಿಕರನ್ನು ಬರಮಾಡಿಕೊಂಡರು.