ETV Bharat / state

ತುತ್ತಿಗಾಗಿ ಪರದಾಟ: ಬೀಡಿ ಕಟ್ಟುವ ಕಾಯಕಕ್ಕಿಳಿದ ಅತಿಥಿ ಶಿಕ್ಷಕಿ

ಚಿತ್ರಲೇಖಾ ಅವರು 9 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಶಾಲೆಗಳಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜ್ಞಾನ ನೀಡಿದ ಇವರ ಬದುಕು ಅತಂತ್ರವಾಗಿದ್ದು, ನಿತ್ಯದ ಕೂಳಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಹಾಗಾಗಿ ಈ ಶಿಕ್ಷಕಿ ಈಗ ಮನೆಯಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದಾರೆ.

puttur
ಅತಿಥಿ ಶಿಕ್ಷಕಿ ಚಿತ್ರಕಲಾ
author img

By

Published : Jun 4, 2021, 10:08 AM IST

ಪುತ್ತೂರು: ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಭವಿಷ್ಯವೇ ಇದೀಗ ತೂಗುಯ್ಯಾಲೆಯಲ್ಲಿದೆ. ಕೊರೊನಾ ಲಾಕ್​​ಡೌನ್ ಘೋಷಣೆಯಾದ ಬಳಿಕ ಒಂದೆಡೆ ಕೆಲಸವಿಲ್ಲ, ಇನ್ನೊಂದೆಡೆ ಸಂಬಳವೂ ಇಲ್ಲದೆ ಸಂಕಷ್ಟದಲ್ಲಿರುವ ಸಾವಿರಾರು ಅತಿಥಿ ಶಿಕ್ಷಕರ ಕಥೆಯಿದು. ಕುಟುಂಬ ನಿರ್ವಹಣೆಗಾಗಿ ಇದೀಗ ಕೂಲಿಯಿಂದ ಹಿಡಿದು ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸುತ್ತಿರುವ ಈ ಶಿಕ್ಷಕರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ವಿಶೇಷ ಪ್ಯಾಕೇಜ್​​ ನೀಡುವಂತೆ ಅತಿಥಿ ಶಿಕ್ಷಕರ ಆಗ್ರಹ..

ಪುತ್ತೂರು ನಿವಾಸಿ ಚಿತ್ರಕಲಾ ಅವರು ಮಂಗಳೂರಿನ ಬಲ್ಮಠದಲ್ಲಿರುವ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ 15 ತಿಂಗಳಿನಿಂದ ಲಾಕ್​​ಡೌನ್​ ಪರಿಣಾಮ ಕೆಲಸವಿಲ್ಲದೆ, ಇತ್ತ ಸರ್ಕಾರ ನೀಡುತ್ತಿದ್ದ ಗೌರವಧನವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯ ಅನ್ಯ ದಾರಿಯಿಲ್ಲದೆ ಬೀಡಿ ಕಟ್ಟುವ ಕಾಯಕಕ್ಕೆ ಇಳಿದಿದ್ದಾರೆ.

ಚಿತ್ರಕಲಾ ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿದ್ದು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಹಲವು ವರ್ಷಗಳಿಂದ ಸಂಘದ ಮೂಲಕ ಹೋರಾಟ ಮಾಡುತ್ತಾ ಬಂದಿದ್ದಾರೆ. ಅತಿಥಿ ಶಿಕ್ಷಕರ ಸಂಘ ಪುತ್ತೂರು ಘಟಕದ ಅಧ್ಯಕ್ಷೆಯಾಗಿರುವ ಚಿತ್ರಕಲಾ ಸದ್ಯ ಬೀಡಿ ಕಟ್ಟುತ್ತಿದ್ದಾರೆ. ಅಲ್ಲದೆ ಇತರ ಶಿಕ್ಷಕಿಯರು ಕೂಡ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒರ್ವ ಶಿಕ್ಷಕಿ ಮೀನು ಮಾರುತ್ತಿದ್ದರೆ, ಇನ್ನೊಬ್ಬರು ಗಾರ್ಬಲ್‌ನಲ್ಲಿ ದುಡಿಯುತ್ತಿದ್ದಾರೆ. ಮತ್ತೊಬ್ಬರು ತಂದೆಯ ಗೂಡಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಬದುಕಿಗಾಗಿ ಸಣ್ಣ ಪುಟ್ಟ ಕೆಲಸ ಮಾಡುವ ಅನೇಕ ಶಿಕ್ಷಕರಿದ್ದಾರೆ.

2019-20ನೇ ಸಾಲಿನಲ್ಲಿ ಶಿಕ್ಷಕಕರಾಗಿ ಕೆಲಸ ಮಾಡಿದ್ದ ಈ ಶಿಕ್ಷಕರಿಗೆ 2020ರ ಮಾರ್ಚ್ ವರೆಗೆ ಗೌರವಧನ ಸಿಕ್ಕಿದೆ. ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ಸರ್ಕಾರ ಮಾಸಿಕ 7,500 ರೂ. ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 8, ಸಾವಿರ ರೂ. ಗೌರವ ಧನ ನೀಡಲಾಗುತ್ತಿದೆ. 2020ರ ಆರಂಭದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಈ ಶಿಕ್ಷಕರಿಗೆ ಕೆಲಸವಿಲ್ಲ. 2020-21 ನೇ ಸಾಲಿನ ಶೈಕ್ಷಣಿಕ ವರ್ಷ ಬಹುತೇಕ ಆನ್‌ಲೈನ್‌ನಲ್ಲೇ ಮುಗಿದು ಹೋಗಿದೆ. ಅತಿಥಿ ಶಿಕ್ಷಕರನ್ನು ಈ ವ್ಯವಸ್ಥೆಯಲ್ಲಿ ಬಳಸಿಕೊಳ್ಳದ ಕಾರಣ ಈ ಶಿಕ್ಷಕಿಯರು ವರ್ಷಪೂರ್ತಿ ಕೆಲಸವಿಲ್ಲದೆ ವಂಚಿತರಾಗಿದ್ದಾರೆ. ಈ ಬಾರಿ ಹೊಸ ಶೈಕ್ಷಣಿಕ ವರ್ಷ ಯಾವ ರೀತಿ ಇರುತ್ತದೆ ಎಂಬ ಚಿತ್ರಣವಿಲ್ಲ. ಹೀಗಾಗಿ ನಮ್ಮ ಬದುಕು ಮೂರಾಬಟ್ಟೆಯಾಗುತ್ತಿದೆ ಎನ್ನುತ್ತಾರೆ ಚಿತ್ರಕಲಾ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 550 ಅತಿಥಿ ಶಿಕ್ಷಕರಿದ್ದು, ಇಡೀ ರಾಜ್ಯದಲ್ಲಿ 22,000 ಮಂದಿ ಗುತ್ತಿಗೆ ಆಧಾರದ ಅತಿಥಿ ಶಿಕ್ಷಕರಿದ್ದಾರೆ. ಪ್ರತಿ ಬಾರಿ ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡ ಬೆನ್ನಲ್ಲೇ ಸರ್ಕಾರ ಅತಿಥಿ ಶಿಕ್ಷಕರ ಹುದ್ದೆಗೆ ಆಹ್ವಾನಿಸುತ್ತದೆ. ಬಹುತೇಕ ಹಿಂದಿನ ಸಾಲಿನಲ್ಲಿ ಕೆಲಸ ಮಾಡಿದವರೇ ಗುತ್ತಿಗೆ ಆಧಾರದಲ್ಲಿ ಮುಂದುವರಿಯುತ್ತಾರೆ. ಒಂದಷ್ಟು ಪ್ರಮಾಣದಲ್ಲಿ ಹೊಸಬರ ನೇಮಕವಾಗುತ್ತದೆ.

ಕೋವಿಡ್ ಲಾಕ್‌ಡೌನ್ ಸಂತ್ರಸ್ತರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ ಚಾಲಕರು ಸೇರಿದಂತೆ ನಾನಾ ವರ್ಗದ ದುಡಿಯುವ ಜನರಿದ್ದಾರೆ. ಆದರೆ ಅತಿಥಿ ಶಿಕ್ಷಕರನ್ನು ಇದರಲ್ಲಿ ಸೇರಿಸದೇ ಇರುವುದು ವಿಪರ್ಯಾಸ. ಅನುದಾನಿತ, ಅನುದಾನ ರಹಿತ ಶಾಲೆಗಳ ಸಿಬ್ಬಂದಿಗಳಿಗೆ ವೇತನ ಸಿಗುತ್ತಿದೆ. ಹಿಂದಿನ ಸಾಲಿನಲ್ಲಿ ಯಾರೆಲ್ಲ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೋ ಅವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ದಿನಕ್ಕೆ ಕನಿಷ್ಠ 100 ರೂ. ಸಹಾಯ ಧನ ನೀಡಿದರೂ ಸಾಕು ಎಂಬುವುದು ಅತಿಥಿ ಶಿಕ್ಷಕರ ಒತ್ತಾಸೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.