ಕಡಬ : ಕೊರೊನಾ ಮುನ್ನೆಚ್ಚರಿಕೆ ಸಲುವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸದಸ್ಯರಿಗೆ ತಲಾ 20 ಕೆಜಿ ಅಕ್ಕಿ ವಿತರಿಸಲಾಯಿತು.
ದ.ಕ ಜಿಲ್ಲಾ ಸಂಘದಿಂದ ಕೊಡಮಾಡಿದ ಅಕ್ಕಿ ಹಾಗೂ ಗೋಧಿ ಹುಡಿಯನ್ನು ಸದಸ್ಯರಿಗೆ ಹಸ್ತಾಂತರಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತ ಖಾದರ್ ಸಾಹೆಬ್ ಕಲ್ಲುಗುಡ್ಡೆ ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿ, ಸಂಘದ ಸದಸ್ಯರು ಫುಡ್ ಕಿಟ್ ನೀಡಿದರು.
ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ ನಾಗರಾಜ್ ಎನ್.ಕೆ, ಸದಸ್ಯರಾದ ವಿಜಯಕುಮಾರ್, ತಸ್ಲಿಮ್, ಪ್ರವೀಣ್ ರಾಜ್ ,ಪ್ರಕಾಶ್ ಕಡಬ, ಗಣೇಶ್ ಇಡಾಳ, ದಯಾನಂದ ಕಲ್ನಾರ್, ಉಪಸ್ಥಿತರಿದ್ದರು